ಚಾಮನರಾಜನಗರ: ಮಲೆಮಹದೇಶ್ವರ ದೇವಸ್ಥಾನಕ್ಕೆ ಎಂಟೇ ತಿಂಗಳಲ್ಲಿ 70 ಕೋಟಿ ಆದಾಯ ಹರಿದು ಬಂದಿದೆ. ವಿಶ್ವವನ್ನೇ ಕಾಡಿದ್ದ ಕೊರೊನಾ ಸದ್ಯ ಮಾಯವಾಗಿದೆ ನಿಜ. ಆದ್ರೆ ಕೊರೊನಾ ಬಳಿಕವೂ ಸಂಕಷ್ಟ ಮಾತ್ರ ತಪ್ಪಿಲ್ಲ. ಇದೀಗ ಕೊರೊನಾ ಬಳಿಕ ಮಲೆ ಮಾದಪ್ಪನ ಆದಾಯ ದ್ವಿಗುಣವಾಗಿದೆ.
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಿಂದಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರ್ತಿದ್ದಾರೆ. ಮಲೆ ಮಹದೇಶ್ವರ ಸನ್ನಿಧಿ ಕರ್ನಾಟಕದ ಎರಡನೇ ಶ್ರೀಮಂತ ಕ್ಷೇತ್ರ ಎನಿಸಿಕೊಂಡಿದ್ದು, ಕ್ಷೇತ್ರಕ್ಕೆ ಬರುವ ಆದಾಯ ಕೊರೊನಾ ನಂತರ ಶೇಕಡಾ 30 ರಿಂದ 40 ರಷ್ಟು ಹೆಚ್ಚಾಗಿದೆ. ಸದ್ಯ ದೇವಾಲಯಕ್ಕೆ ಮಾರ್ಚ್ನಿಂದ ಈ ವರೆಗೆ 70 ಕೋಟಿ ರೂಪಾಯಿ ಆದಾಯ ಬಂದಿದ್ದು, ಮುಂದಿನ ಮಾರ್ಚ್ವರೆಗೆ 80 ಕೋಟಿ ದಾಟುವ ನಿರೀಕ್ಷೆ ಇದೆ. ಇದು ಇಷ್ಟು ವರ್ಷದಲ್ಲೇ ಅತಿ ಹೆಚ್ಚು ಆದಾಯ ಎನಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post