ಬಿಜೆಪಿ ವಿರುದ್ಧ ಮತದಾರರ ಮಾಹಿತಿಗೆ ಕನ್ನ ಹಾಕಿರೋ ಆರೋಪ ಮಾಡಿರೋ ಕಾಂಗ್ರೆಸ್ ಡಿಮ್ಯಾಂಡ್ ಏನು? ತಮ್ಮ ಬೇಡಿಕೆ ಹಾಗೂ ಕೊಟ್ಟಿರೋ ದೂರಿಗೆ ಸ್ಪಂದನೆ ಸಿಗದಿದ್ದರೆ ಮುಂದಿನ ನಡೆ ಏನು ಅನ್ನೋದನ್ನು ಕಾಂಗ್ರೆಸ್ ನಾಯಕರು ವಿವರಿಸಿದ್ದಾರೆ.
ಬೆಂಗಳೂರಿನಾದ್ಯಂತ ಮತದಾರರ ಮಾಹಿತಿಗೆ ಕನ್ನ ಹಾಕಿರೋ ಬಗ್ಗೆ ಆರೋಪ ಮಾಡಿರೋ ಕಾಂಗ್ರೆಸ್ ನಾಯಕರು ಸುಮ್ಮನೆ ಕೂತಿಲ್ಲ. ದಾಖಲೆ ಸಮೇತ ಆರೋಪ ಮಾಡಿದ ಕೈ ಪಡೆ ಇಟ್ಟಿರೋ ಪ್ರಮುಖ ಬೇಡಿಕೆಯೇ ಸಿಎಂ ರಾಜೀನಾಮೆ ಕೊಡಬೇಕು. ಡೆಟಾ ಕಳ್ಳತನ ಮಾಡಿರೋ ಪ್ರಕರಣಕ್ಕೆ ಅರೆಸ್ಟ್ ಆಗಬೇಕು ಅಂತಾ ಡಿಮ್ಯಾಂಡ್ ಮಾಡೋ ಮೂಲಕ ದೊಡ್ಡ ಬೇಟೆಗೆ ಇಳಿದಿದೆ.
ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ-ಸಿಎಂ ರಾಜೀನಾಮೆಗೆ ಆಗ್ರಹಿಸಿದ ಸಿದ್ದು..
ಸಿಎಂ ಬೊಮ್ಮಾಯಿ ಅರೆಸ್ಟ್ ಮಾಡಬೇಕು ಎಂದ ಸುರ್ಜೇವಾಲ
ನಿನ್ನೆ ದಿಢೀರ್ ಸುದ್ದಿಗೋಷ್ಟಿ ನಡೆಸಿದ್ದ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಅತಿದೊಡ್ಡ ಆರೋಪ ಮಾಡಿದ್ದರು. ಮಾತು ಮಾತಿಗೂ ಸಿಎಂ ಬಸವರಾಜ ಬೊಮ್ಮಾಯಿಯವ್ರನ್ನೇ ಉಲ್ಲೇಖಿಸುತ್ತಿದ್ದರು. ಮತದಾರರ ಮಾಹಿತಿ ಸಂಗ್ರಹದಲ್ಲಿ ನಡೆದಿರೋ ಕಳ್ಳಾಟದಲ್ಲಿ ಸಿಎಂ ಪ್ರಮುಖ ಪಾತ್ರ ವಹಿಸಿದ್ದಾರೆ ಅಂತಾ ಸುದ್ದಿಗೋಷ್ಠಿಯುದ್ದಕ್ಕೂ ನೇರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ವೋಟರ್ ಡೇಟಾ ಸಂಗ್ರಹದಲ್ಲಿ ತೊಡಗಿದೆ. ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚಿಲುಮೆ ಎಂಬ ಖಾಸಗಿ ಸಂಸ್ಥೆ ಮೂಲಕ ಡೇಟಾ ಸಂಗ್ರಹ ಮಾಡಲಾಗಿದ್ದು, ಪಾಲಿಕೆಯೇ ಖಾಸಗಿ ಸಂಸ್ಥೆ ಚಿಲುಮೆಗೆ, ಯಾವುದೇ ಅನುಭವ ಇಲ್ಲದಿದ್ರೂ ಡೇಟಾ ಸಂಗ್ರಹಕ್ಕೆ ಅನುಮತಿ ನೀಡಿದೆ. ಈ ಸಂಸ್ಥೆ ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಚುನಾವಣಾ ಲಿಸ್ಟ್‌ಗೆ ಬೇರೆ ಕ್ಷೇತ್ರಗಳ ಮತದಾರರನ್ನ ಸೇರಿಸೋ ಮೂಲಕ ಅಕ್ರಮ ಮಾಡಲಾಗಿದೆ. ಖಾಸಗಿ ಸಂಸ್ಥೆ ಅದಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನೇ ಪಾಲಿಕೆಯ ಬೂತ್ ಲೆವೆಲ್ ಆಫೀಸರ್ ಐಡಿ ಕೊಟ್ಟು ಅಕ್ರಮ ನಡೆಸಿದೆ ಎಂದು ಆರೋಪಿಸಿದ್ದಾರೆ. ಸಿಎಂ ಬೊಮ್ಮಾಯಿಯವರೇ ಇದರ ಹೊಣೆ ಹೊರಬೇಕು. ಇದ್ರ ಹಿಂದೆ ಸಚಿವ ಅಶ್ವತ್ಥ್ ನಾರಾಯಣ್ ಪಾತ್ರವೂ ಇದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ತನಿಖೆಯಾಗ್ಬೇಕು
ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿ ಎಲೆಕ್ಷನ್ ಗೆಲ್ಲಲು ಬೊಮ್ಮಾಯಿ ಯಾವ ಥರ ಆಟ ಆಡಲು ಶುರುಮಾಡಿದ್ದಾರೆ. ಬೊಮ್ಮಾಯಿ ತಕ್ಷಣ ರಾಜೀನಾಮೆ ನೀಡಬೇಕು, ಬಂಧನ ಆಗಬೇಕು ಅಂತಾ ಗುಡುಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ‘ವೋಟರ್ ಡೇಟಾ’ ಅಸ್ತ್ರ; ಕೈ ಆರೋಪಕ್ಕೆ ಬೊಮ್ಮಾಯಿ ಸಿಡಿಮಿಡಿ..!
ಸುದ್ದಿಗೋಷ್ಠಿ ಬಳಿಕ ನೇರವಾಗಿ ಕಮಿಷನರ್ ಕಚೇರಿಗೆ ತೆರಳಿದ ಕಾಂಗ್ರೆಸ್ ನಾಯಕರು, ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ರು. ಒಂದು ವೇಳೆ ಎಫ್ಐಆರ್ ದಾಖಲಿಸದಿದ್ದರೆ ಮುಂದಿನ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ. ಒಟ್ನಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಅಕ್ರಮದ ಅಸ್ತ್ರ ಪ್ರಯೋಗಿಸಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ಹಾಗೂ ಪ್ರತಿಭಟನೆಗಳ ಮೂಲಕ ಬಿಜೆಪಿಯನ್ನು ಕಟ್ಟಿಹಾಕಲು ಸಕಲ ಸಿದ್ಧತೆಗಳೊಂದಿಗೆ ಅಖಾಡಕ್ಕಿಳಿದಿದೆ. ಕೈ ನಾಯಕರು ಉರುಳಿಸಿರೋ ಡೆಟಾ ಕಳ್ಳಾಟದ ದಾಳಕ್ಕೆ ಪ್ರತಿಯಾಗಿ ಕಮಲ ಪಾಳಯದಿಂದ ಅದ್ಯಾವ ರಿಯಾಕ್ಷನ್ ಬರುತ್ತೆ ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post