‘ಸತ್ಯ’ ಅಮೂಲ್ ಬೇಬಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಕನಸಿನ ಹುಡುಗಿ ಜೊತೆ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದಾರೆ ನಟ ಸಾಗರ್ ಬಿಳಿಗೌಡ. ಸತ್ಯ ಧಾರಾವಾಹಿ ಮೂಲಕ ವೀಕ್ಷಕರ ಮನೆಮಾತಾಗಿರುವ ನಟ ಸಾಗರ್ ಬಿಳಿಗೌಡ. ಸಾಗರ್ಕ್ಕಿಂತ ಅಮೂಲ್ ಬೇಬಿ ಅಂತಾನೇ ಫೇಮಸ್ ಆಗಿದ್ದಾರೆ. ಸಾಗರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಗರ್ ಅವರ ಮನೆಯಲ್ಲಿ ನಿಶ್ಚಿತಾರ್ಥದ ತಯಾರಿ ಜೋರಾಗಿ ನಡೆಯುತ್ತಿವೆ. ನಟಿ, ಮಾಡಲ್ ಆಗಿರುವ ಸಿರಿ ರಾಜು ಅವರ ಜೊತೆ ಪವಿತ್ರ ಮದುವೆ ಬಂಧನದಲ್ಲಿ ಬಂಧಿಯಾಗಲು ಸಜ್ಜಾಗಿದ್ದಾರೆ ಅಮೂಲ್ ಬೇಬಿ.
ಸಿರಿ ರಾಜು ಕೂಡ ಬಣ್ಣದ ನಂಟು ಹೊಂದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಉದ್ಯಮಿ ಕೂಡ ಆಗಿರುವ ಸಿರಿ ಕನ್ನಡ ತೆಲುಗಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಿರಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಖುಷಿ ವಿಚಾರವನ್ನ ಶೇರ್ ಮಾಡಿಕೊಂಡಿದ್ದು, ನಾನು ಮದುವೆಯಾಗುತ್ತಿರುವ ಅತ್ಯುತ್ತಮ ವ್ಯಕ್ತಿಯನ್ನ ಪರಿಚಯಿಸುತ್ತಿದ್ದೇನೆ ಎಂದು ಸಾಗರ್ ಜೊತೆಗಿನ ಕ್ಯೂಟ್ ಫೋಟೋಸ್ಗಳನ್ನ ಶೇರ್ ಮಾಡಿದ್ದಾರೆ.
ಸಿರಿ-ಸಾಗರ್ ಜೋಡಿ ನೋಡಿದವರು ಇದು ಪಕ್ಕಾ ಲವ್ ಮ್ಯಾರೇಜ್ ಎಂದು ಅಂದುಕೊಂಡಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಇದು ಪಕ್ಕಾ ಅರೆಂಜ್ ಮ್ಯಾರೆಜ್. ಗರುಹಿರಿಯರು ಸೇರಿ ಬೇಸೆದಿರುವ ಬಂಧ. ಮೊನ್ನೆ ನಡೆದ ಟೆಲಿವಿಶನ್ ಬ್ಯಾಡ್ಮಿಂಟನ್ನಲ್ಲಿ ಸಾಗರ್ ಹಾಗೂ ಸಿರಿ ಕೂಡ ಇದ್ದರು.
ಸಾಗರ್ ಅಮ್ಮ ನಮ್ಮ ಮಗನಿಗೆ ಮದುವೆ ಮಾಡುವ ಪ್ಲಾನ್ ಇದೆ. ಹುಡುಗಿ ನೋಡ್ತಿದ್ದೀವಿ ಎಂದು ಸಿರಿ ಅಮ್ಮನ ಮುಂದೆ ಹೇಳಿದ್ದಾರೆ. ನಾವು ನಮ್ಮ ಹುಡುಗಿಗೆ ಗಂಡು ನೋಡ್ತಿದ್ದಿವಿ ಅಂದ್ರಂತೆ. ಮ್ಯಾಚ್ ಮುಗಿಯೋ ಅಷ್ಟರಲ್ಲಿ ಮದುವೆ ಪಿಕ್ಸ್ ಆಗಿ ಬಿಟ್ಟಿದೆ. ಇಬ್ಬರ ಜಾತಕ ಕೂಡ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗಿದ್ದರಿಂದ ಶುಭಷ್ಯ ಶೀಘ್ರಂ ಎನ್ನುವಂತೆ ಎಲ್ಲವೂ ಆಗಿ ಹೋಗಿದೆ.
ಒಂದೇ ವಾರದಲ್ಲಿ ಹುಡುಗಿ ನೋಡೋ ಶಾಸ್ತ್ರ, ಮದುವೆ ಮಾತುಕತೆ ನಡೆದಿದೆ. ಸಭೆ ಸಮಾರಂಭದಲ್ಲಿ ಆಗಾಗ ಭೇಟಿಯಾಗುತ್ತಿದ್ದ ಸಾಗರ್ಗೆ ಸಿರಿ ಪರಿಚಯ ಇದ್ದಿದ್ದರಿಂದ ಇಬ್ಬರ ಕಡೆಯಿಂದನೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇವರ ನಿಶ್ಚಿತಾರ್ಥ ಇದೇ ನವೆಂಬರ್ 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವಿಷಯ ತಿಳಿಯುತಿದ್ದಂಗೆ ಅಭಿಮಾನಿಗಳು, ಆಪ್ತರಿಂದ ಶುಭಾಷಯಗಳ ಮಾಹಾಪೂರವೇ ಹರಿದುಬಂದಿದೆ.
View this post on Instagram
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post