IPLನಲ್ಲಿ ಈವರೆಗೂ ಆಟಗಾರರಿಗಾಗಿ ಅತಿಹೆಚ್ಚು ಹಣ ಸುರಿದ ತಂಡ ಯಾವುದು? ನಾಲ್ಕೈದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರೋ ತಂಡಗಳು ಖರ್ಚು ಮಾಡಿರೋ ಹಣ ಎಷ್ಟು?
ರಾಯಲ್ ಚಾಲೆಂಜರ್ಸ್ ಬೆಂಗಳೂರು. IPLನಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರೋ ತಂಡ. ಇನ್ನು IPL ಇತಿಹಾಸದಲ್ಲಿ ಹೈಯೆಸ್ಟ್ ಸ್ಕೋರ್ ಸೇರಿದಂತೆ ಹಲವು ದಾಖಲೆಗಳು RCB ಹೆಸರಿನಲ್ಲಿವೆ. ಆದ್ರೆ ಇಷ್ಟೆಲ್ಲಾ ಇದ್ರು, ಆ ಒಂದು ಕನಸು ಮಾತ್ರ ಈಡೇರ್ತಾನೆ ಇಲ್ಲ. ಪ್ರತಿವರ್ಷ ಅಭಿಮಾನಿಗಳಿಗೆ ನಿರಾಸೆ ತಪ್ಪುತ್ತಿಲ್ಲ.
15 ವರ್ಷಗಳಾದ್ರೂ ನನಸಾಗದ ಕಪ್ ಕನಸು..
7 ಕ್ಯಾಪ್ಟನ್, 6 ಕೋಚ್ ಬದಲಾದ್ರೂ ಹಣೆಬರಹ ಬದಲಾಗಿಲ್ಲ..
ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾಕ್ ಕಾಲೀಸ್, ಕೆವಿನ್ ಪೀಟರ್ಸನ್ ರಾಸ್ ಟೇಲರ್, ಜಹೀರ್ ಖಾನ್, ಡೇಲ್ ಸ್ಟೇಯ್ನ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಒಬ್ರ ಇಬ್ರಾ, ಹೇಳ್ತಾ ಹೋದ್ರೆ LIST ಬೆಳೆಯುತ್ತಲೇ ಹೋಗುತ್ತೆ. ವಿಶ್ವಕ್ರಿಕೆಟ್ನ ಹಲವು ಲೆಜೆಂಡ್ಸ್, ಬಿಗ್ ಸ್ಟಾರ್ಗಳೆಲ್ಲಾ RCB ಪರ ಆಡಿದ್ದಾರೆ. ಲೆಕ್ಕವಿಲ್ಲದಷ್ಟು ಯುವ ಆಟಗಾರರು ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, 15 ವರ್ಷಗಳಾದ್ರೂ, ಕಪ್ ಅನ್ನೋದು RCB ಪಾಲಿಗೆ ಕನಸಾಗೆ ಉಳಿದಿದೆ.
ಕ್ಯಾಪ್ಟನ್, ಕೋಚ್, ಆಟಗಾರರು ಬದಲಾದ್ರೂ, ತಂಡದ ಹಣೆಬರಹ ಮಾತ್ರ ಬದಲಾಗ್ತಿಲ್ಲ. 2008 ರಿಂದ 2022ರವರೆಗೂ 7 ಜನ ನಾಯಕರು, 6 ಕೋಚ್ಗಳು ಬದಲಾಗಿದ್ದಾರೆ. ಪ್ರತಿ ಸೀಸನ್ಲ್ಲೂ ಫ್ರಾಂಚೈಸಿ, ನೂರಾರು ಕೋಟಿ ಖರ್ಚು ಮಾಡ್ತಿದೆ. ಇಷ್ಟೆಲ್ಲಾ ಇದ್ರೂ, ಒಂದೇ ಒಂದು ಕಪ್ ಗೆಲ್ಲೋಕೆ ಸಾಧ್ಯವಾಗಿಲ್ಲ.
ಪ್ರತಿ ಸೀಸನ್ನಲ್ಲೂ RCB ಈ ಬಾರಿ ಕಪ್ ಗೆಲ್ಲಲೇಬೇಕೆಂಬ ಹಠ, ಛಲ, ಡಿಫ್ರೆಂಟ್ ಗೇಮ್ಪ್ಲಾನ್, ರಣತಂತ್ರದೊಂದಿಗೆ ಕಣಕ್ಕಿಳಿಯುತ್ತೆ. ಆದ್ರೆ, 2016ರಿಂದ ಒಮ್ಮೆಯೂ ಫೈನಲ್ಗೆ ಎಂಟ್ರಿ ನೀಡಿಲ್ಲ. ಪ್ಲೇ ಆಫ್ ಹಂತಕ್ಕೆ ಎಂಟ್ರಿ ನೀಡಿದ್ರೇನೆ, ದೊಡ್ಡ ಸಾಧನೆ ಅನ್ನೋ ಹಾಗಾಗಿದೆ.
ಆಟಗಾರರಿಗಾಗಿ RCB ಬರೋಬ್ಬರಿ 910 ಕೋಟಿ ರೂ ಖರ್ಚು..
ಯೆಸ್, IPL ಶುರುವಾದಗಿನಿಂದ ಈವರೆಗೂ RCB ಫ್ರಾಂಚೈಸಿ, ಆಟಗಾರರ ಖರೀದಿಗಾಗಿ ಬರೋಬ್ಬರಿ 910 ಕೋಟಿ ಖರ್ಚು ಮಾಡಿದೆ. ಮುಂದಿನ ತಿಂಗಳು ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ನಲ್ಲಿ ಮತ್ತೆ ಕೋಟಿ..ಕೋಟಿ ಸುರಿಯೋಕೆ ರೆಡಿಯಾಗಿದೆ. ಇದರಿಂದ ಆರ್ಸಿಬಿ INVEST ಹೆಚ್ಚು ಕಡಿಮೆ ಸಾವಿರ ಕೋಟಿ ಆಗಲಿದೆ. ಬೇಱವ ಫ್ರಾಂಚೈಸಿಯೂ ಇಷ್ಟೊಂದು ಹಣ ಖರ್ಚು ಮಾಡಿಲ್ಲ.
Whistles. Roars. Anbuden🤩
Super Returns ⏳#WhistlePodu #Yellove 🦁💛 pic.twitter.com/PPB5wjCEVE— Chennai Super Kings (@ChennaiIPL) November 15, 2022
ಕಡಿಮೆ ಇನ್ವೆಸ್ಟ್, 4 ಬಾರಿ ಚಾಂಪಿಯನ್ಸ್ ಪಟ್ಟ..
CSK ಖರ್ಚು ಮಾಡಿದ್ದು 761 ಕೋಟಿ ರೂಪಾಯಿ..
ಹೌದು, RCBಗಿಂತ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡಿಮೆ INVEST ಮಾಡಿದೆ. CSK ಈವರೆಗೂ ಆಟಗಾರರ ಮೇಲೆ 791 ಕೋಟಿ ಬಿಡ್ ಮಾಡಿದೆ. ಅಂದ್ರೆ, ಆರ್ಸಿಬಿಗಿಂತ 149 ಕೋಟಿ ಕಡಿಮೆ ಖರ್ಚು ಮಾಡಿದೆ. ಆದ್ರೆ, 4 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ಒಟ್ಟಿನಲ್ಲಿ ಅದೆಷ್ಟೆ ಖರ್ಚಾದ್ರೂ ಸರಿ, ಒಂದಲ್ಲ ಒಂದು ದಿನ ಕಪ್ ಗೆದ್ದೇ ಗೆಲ್ಲುತ್ತೇವೆ ಅನ್ನೋ ನಂಬಿಕೆ, RCB ಫ್ರಾಂಚೈಸಿಯದ್ದಾಗಿದೆ. ಆದ್ರೆ ಆ ಒಂದು ದಿನ ಯಾವಾಗ ಬರಲಿದೆ, ಅಲ್ಲಿವರಗೆ ಮತ್ತದೆಷ್ಟು ಕೋಟಿ ರೂಪಾಯಿ ಖರ್ಚಾಗಲಿದಿಯೋ, ದೇವರಿಗೇ ಗೊತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post