ಬೆಳಗಾವಿ: 2023ರ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಒಂದೇ ಕುಟುಂಬದವರು ತೀವ್ರ ಪೈಪೋಟಿ ನಡೆಸಿದ್ದಾರೆ.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದಲೇ 2 ಬಾರಿ ಶಾಸಕರಾಗಿದ್ದ ಫಿರೋಜ್ ಶೇಠ್, ಪುತ್ರ ಫೈಝಾನ್ ಶೇಠ್ ಮತ್ತು ಸಹೋದರ ರಾಜು ಶೇಠ್ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ರಾಜು ಶೇಠ್, ಯುವ ಕಾಂಗ್ರೆಸ್ ಘಟಕದಲ್ಲಿರುವ ಫೈಝಾನ್ ಶೇಠ್ ಒಬ್ಬರಿಗೆ ಟಿಕೆಟ್ ಕೈ ತಪ್ಪಿದ್ರೆ ಮತ್ತೊಬ್ಬರಿಗೆ ಟಿಕೆಟ್ ಸಿಗಬಹುದು ಎಂದು ಮೂವರು ಅರ್ಜಿ ಸಲ್ಲಿದ್ದಾರೆ.
ಕಾಂಗ್ರೆಸ್ನಲ್ಲಿ ನಮ್ಮ ಸೇವೆ ಗುರುತಿಸಿ ಮೂವರಲ್ಲಿ ಒಬ್ಬರಿಗಾದ್ರೂ ಪಕ್ಷ ಟಿಕೆಟ್ ನೀಡಬಹುದು ಎಂದು ರಾಜು ಶೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಿರೋಜ್ ಶೇಠ್ ಸಮಾಜದ ಒಳಗೂ ಹಾಗೂ ಕಾಂಗ್ರೆಸ್ನಲ್ಲೂ ತೀವ್ರ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ತಪ್ಪಿಸಲು ಬೆಳಗಾವಿ ಕಾಂಗ್ರೆಸ್ ಒಳಗೆ ಮಾಸ್ಟರ್ ಪ್ಲಾನ್ ನಡೆಯುತ್ತಿದೆ ಎಂದು ರಾಜು ಶೇಠ್ ಹೇಳಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post