ಪೋಷಕರೇ ಎಚ್ಚರ.. ಎಚ್ಚರ.. ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಮಕ್ಕಳನ್ನು ಹೆಚ್ಚು ಕಾಳಾಜಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮಲ್ಲಿದೆ. ಮಕ್ಕಳ ಜೀವನ ಕಾಪಾಡುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಮೇಲಿದೆ.
ಏಕೆಂದ್ರೆ, ನಗರದಲ್ಲಿ 12 ರಿಂದ 17 ವರ್ಷದೊಳಗಿನ ಮಕ್ಕಳೇ ಹೆಚ್ಚು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಎರಡರಿಂದ ಮೂರು ಸಾವಿರದಷ್ಟು ಮಕ್ಕಳ ಸೂಸೈಡ್ ರೇಟ್ ಹೆಚ್ಚಾಗುತ್ತಿದೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಎಷ್ಟು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ಮೂರು ವರ್ಷಗಳಲ್ಲಿ 40 ಸಾವಿರದಷ್ಟು ಮಕ್ಕಳು ಸೂಸೈಡ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ ಎಂದು ಮನೋ ವೈದ್ಯೆ ಪದ್ಮಾಕ್ಷಿ ತಿಳಿಸಿದ್ದಾರೆ.

ಮಕ್ಕಳ ಸೂಸೈಡ್ 2019ರಿಂದ ಹೆಚ್ಚುತ್ತಿದೆ
- 2019 ರಲ್ಲಿ 12 ಸಾವಿರ ಮಕ್ಕಳು ಆತ್ಮಹತ್ಯೆ
- 2020 ರಲ್ಲಿ 13 ಸಾವಿರಕ್ಕೂ ಹೆಚ್ಚು ಮಕ್ಕಳು ಸೂಸೈಡ್
- 2021 ರಲ್ಲಿ 15 ಸಾವಿರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ.
ಮುಗ್ಧ ಮನಸ್ಸಿನ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಿ. ಮಕ್ಕಳಿಗೆ ಯಾವುದೇ ಒತ್ತಡವನ್ನ ಹಾಕಬೇಡಿ. ಕಳೆದ ಒಂದು ವರ್ಷ ಸುಮಾರು 15 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತುಂಬಾನೆ ಆಘಾತಕಾರಿ
ಪದ್ಮಾಕ್ಷಿ, ಮನೋತಜ್ಞೆ
ಮಕ್ಕಳ ಆತ್ಮಹತ್ಯೆಗೆ ಕಾರಣ ಏನು..?
ಮಕ್ಕಳ ಮೇಲೆ ಸೋಷಿಯಲ್ ಮೀಡಿಯಾ ತೀರಾ ಎಫೆಕ್ಟ್ ಆಗ್ತಿದೆ. ಯಾವಾಗಲೂ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಹಾಗೂ ಪೋಷಕರ ಕಂಪ್ಯಾರಿಷನ್ ಇಂಪ್ಯಾಕ್ಟ್ ಆಗುತ್ತಿದೆ.
ಈ ಕಂಪ್ಯಾರಿಷನ್ ಮಕ್ಕಳ ಮೆಂಟಲ್ ಕಂಡೀಷನ್ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮನೆಯಲ್ಲಿ ಮಕ್ಕಳಿಗೆ ಓದು ಓದು ಎಂದು ಪೋಷಕರು ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಪರೀಕ್ಷೆ ಬರುತ್ತಿದ್ದಂತೆ ಮಕ್ಕಳಲ್ಲಿ ಖಿನ್ನತೆ ಹೆಚ್ಚಿ ಪಾಸ್ ಆಗುತ್ತೋ, ಫೇಲ್ ಆಗುತ್ತೋ ಎಂಬ ಭಯ ಅವರಲ್ಲಿದೆ. ಱಂಕ್ನಲ್ಲಿ ಪಾಸ್ ಆಗ್ತೇನಾ ಎಂಬ ಮಾನಸಿಕ ಒತ್ತಡವೂ ಮಕ್ಕಳನ್ನ ಕಾಡುತ್ತಿವೆ. ಈ ರೀತಿಯಾದ ಹಲವಾರು ಕಾರಣಗಳಿಂದ ಮಕ್ಕಳು ಸೂಸೈಡ್ಗೆ ಗುರಿಯಾಗುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post