ಹಾಸ್ಯ ನಟ ಕೋಮಲ್ ಸ್ಯಾಂಡಲ್ವುಡ್ಗೆ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. ಕೋಮಲ್ ಕಂಬ್ಯಾಕ್ಗೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜಗ್ಗಣ್ಣನ ಖ್ಯಾತಿಯಿಂದ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದ ಕೋಮಲ್ ತಮ್ಮದೇ ಶ್ರಮ ಮತ್ತು ಪ್ರತಿಭೆಯಿಂದ ಕನ್ನಡಿಗರ ಮನೆ ಮಾತಾದ ಕಲಾವಿದ. ನಾಲ್ಕೈದು ವರ್ಷದಿಂದ ಕೋಮಲ್ ಕಳೆದೇ ಹೋಗಿದ್ದರು. ಕೊರೊನಾ ಕಾಲದಲ್ಲಿ ಅನೇಕ ಹಿನ್ನಡೆಯನ್ನೂ ಅನುಭವಿಸಿದ್ರು. ಆದ್ರೆ ಈಗ ಕೋಮಲ್ ಮತ್ತೆ ಹಳೆಯ ಛಾರ್ಮಿಗೆ ಬಂದಿದ್ದಾರೆ.
‘ಕೊರೊನಾ ಬಂದಾಗ ಡಾಕ್ಟರ್ ಹೇಳಿದ್ರು ನಾನು ಉಳಿಯೋದೆ ಇಲ್ಲ ಅಂತ. ನಾನು ಇಷ್ಟು ದಿನ ಮರೆಯಾಗಿರಲು ಕಾರಣ ಕೆಟ್ಟ ಕಾಲ. ಈಗ ಟೈಮ್ ಚೆನ್ನಾಗಿದೆ. ಕಾಲಭೈರವ ಸ್ಟಾಮಿ ನನ್ನ ಕನಸಿನಲ್ಲಿ ಬಂದು, ನೀನು ಬದುಕುತ್ತಿಯ ಎಂದು ಹೇಳಿದರು ಒಳ್ಳೆ ದಿನಗಳು ಬರ್ತಿದೆ ಎಂದರು. ಈ ರೀತಿ ಮಾತನಾಡಿದವರು ಒಂದು ಟೈಮ್ನಲ್ಲಿ ಬೇಜಾನ್ ಕಾಮಿಡಿ ಮಾಡ್ತಾ ಇಡೀ ಕರ್ನಾಟಕದ ಪ್ರೇಕ್ಷಕರನ್ನ ನಕ್ಕು ನಲಿಸಿದವರು. ಕೋಮಲ್ ನವರಸ ನಾಯಕ ಜಗೇಶ್ ಅವರ ಕಿರಿಯ ಸಹೋದರ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟು ದಿನ ತಡವಾಗಿದ್ದು ಯಾಕೆ ?ಈಗ ಕೋಮಲ್ ಕಂಬ್ಯಾಕ್ಗೆ ಆಗಲು ಆ ದೈವ ಶಕ್ತಿ ಕಾರಣ. ಕಾಲಾಯ ನಮಃ.. ಇದು ಕೋಮಲ್ ಅವರು ತಮ್ಮದೆಯಾದ ಬ್ಯಾನರ್ನಲ್ಲಿ ನಿರ್ಮಾಣ ಮತ್ತು ನಟನೆಯ ಮಾಡ್ತಿರೋ ಸಿನಿಮಾ. ಜೊತೆಗೆ 2020 ಅನ್ನೋ ಸಿನಿಮಾದಲ್ಲಿ ಕೋಮಲ್ ನಟಿಸಿ ಆಗಿದೆ. ಆ ಸಿನಿಮಾದ ಹೆಸರನ್ನ ಈಗ ‘‘ಮಾಡಿದುಣ್ಣೋ ಮಾರಾಯ’’ ಅನ್ನೋ ಹೆಸರಿನೊಂದಿಗೆ ರಿಲೀಸ್ ಮಾಡಲಿದ್ದಾರೆ. ಈ ಎರಡು ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟ ಕೋಮಲ್ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post