ಕೊಡಗು: ಬ್ಯಾರಿಕೇಡ್‌ಗೆ ಸಿಲುಕಿಕೊಂಡಿದ್ದ ಒಂಟಿ ಸಲಗವನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಮಾನವೀಯತೆ ಮರೆದಿದ್ದಾರೆ.
ಜಿಲ್ಲೆಯ ಕುಶಾಲನಗರ ತಾಲೂಕಿನ ತೊಂಡೂರಿನಲ್ಲಿ ಈ ಘಟನೆ ನಡೆದಿದೆ. ಅವೈಜ್ಞಾನಿಕವಾಗಿ ಅರಣ್ಯದಂಚಿನಲ್ಲಿ ಬ್ಯಾರಿಕೇಡನ್ನು ನಿರ್ಮಿಸಲಾಗಿದೆ. ನಾಡಿನತ್ತ ಕಾಡು ಆನೆಗಳು ಬರದಂತೆ ಸಿಮೆಂಟ್ ಮೂಲಕ ದೊಡ್ಡ ಬ್ಯಾರಿಕೇಡ್ಗಳನ್ನ ಕಾಡಿನ ಹಂಚಿನಲ್ಲಿ ಇಲಾಖೆ ನಿರ್ಮಾಣ ಮಾಡಿದೆ.
ಅವೈಜ್ಞಾನಿಕವಾಗಿ ನಿರ್ಮಿಸಿರುವ ಈ ಸಿಮೆಂಟ್ ಬ್ಯಾರಿಕೇಡ್‌ಗೆ ಕಳೆದ ರಾತ್ರಿ ಆನೆಯೊಂದು ಸಿಲುಕಿಕೊಂಡು ರೋದಿಸುತ್ತಿತ್ತು. ಈ ವೇಳೆ ಕಾಡಾನೆ ರೋಧನೆ ನೋಡಲಾಗದೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಾತ್ರಿ ವೇಳೆ ಕಾಡಾನೆಯನ್ನ ರಕ್ಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post