ಮೈಸೂರು: ಸಾಲದ ಕಂತು ಕಟ್ಟು, ಇಲ್ಲ ಎಂದರೇ ಸತ್ತು ಹೋಗು ಅಂತ ಬ್ಯಾಂಕ್ ಸಿಬ್ಬಂದಿಯೋರ್ವ ಮಹಿಳೆಗೆ ಅವಾಜ್ ಹಾಕಿ ದುವರ್ತನೆ ತೋರಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.
ಹುಣಸೂರಿನ IDFC ಬ್ಯಾಂಕ್ ಸಿಬ್ಬಂದಿ ಸುರೇಶ್ ಮಹಿಳೆಯೊಂದಿಗೆ ದುರ್ವತನೆ ತೋರಿದ್ದು, ನೀನು ಸತ್ತು ಹೋದ್ರೆ ಸಲಾ ಮನ್ನಾ ಆಗುತ್ತೆ ಅಂತ ಖಾಸಗಿ ಬ್ಯಾಂಕ್ ಸಿಬ್ಬಂದಿ ಒತ್ತಡ ಹಾಕಿದ್ದಾನೆ. ಈ ವೇಳೆ ಮಹಿಳೆ, ಒಂದು ವಾರ ಅವಕಾಶ ಕೊಡಿ ಸಾಲ ಕಂತು ಪಾವತಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾಳೆ. ಆದರೂ ರಸ್ತೆ ನಡುವೆ ನಿಲ್ಲಿಸಿಕೊಂಡು ತೀವ್ರ ಒತ್ತಡ ಹಾಕಿ ನಿಂಧಿಸಿರೋ ಸಿಬ್ಬಂದಿ, ನೀನು ಸತ್ತೋದ್ರೆ ಸಾಲ ಮನ್ನಾ ಆಗುತ್ತೆ, ಅದ್ಕೆ ಸಾಯಿ.. ಅಂತ ಕೇವಲ 500 ರೂಪಾಯಿ ಕಂತಿಗೆ ಮಹಿಳೆಗೆ ಧಮ್ಕಿ ಹಾಕಿದ್ದಾನೆ.
ಬ್ಯಾಂಕ್ ಸಿಬ್ಬಂದಿಯ ಗುಂಡಾ ವರ್ತನೆ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಲ ಕಟ್ಟಲು ಆಗೋದಿಲ್ಲ ಎಂದರೇ, ಕದ್ದು ಎಲ್ಲಿಗಾದ್ರು ಹೋಗಿ ಬಿಡು, ಇಲ್ಲ ಎಂದರೇ ಸತ್ತು ಹೋಗು ಸಾಲ ಆದ್ರು ಮನ್ನಾ ಆಗುತ್ತೆ. ನನಗೆ ಈಗ ಸಾಲದ ಕಂತು ಕಟ್ಟಲೇ ಬೇಕು ಎಂದು ತಾಕೀತು ಮಾಡಿದ್ದಾನೆ. ಈ ವೇಳೆ ಸ್ಥಳೀಯರೊಬ್ಬರು ಮಧ್ಯ ಪ್ರವೇಶ ಮಾಡಿ, ಯಾಕೆ ಈ ರೀತಿ ಮಾಡ್ತಿದ್ದೀರಿ ಎಂದರೇ, ಮಹಿಳೆ ಸಾಲ ತಗೊಂಡು ಹಣ ಕಟ್ಟಿಲ್ಲ. ನಾನು ಮ್ಯಾನೇಜರ್ಗೆ ಹೇಳಿ ಹೇಳಿ ಸಾಕಾಗಿದೆ. ಸಾಲ ಹಣವನ್ನು ಬೀಸಾಡಲು ಹೇಳಿ ಆಯ್ದುಕೊಂಡು ಹೋಗ್ತೇನೆ ಎಂದು ಬ್ಯಾಂಕ್ ಸಿಬ್ಬಂದಿ ಅವರಿಗೂ ಆವಾಜ್ ಹಾಕಿರೋದು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post