ಬೆಳಗಾವಿ: ಮಾಜಿ ಸಿಎಂ ಕುಮಾರಸ್ವಾಮಿ ಅವರು ನನ್ನ ಜೊತೆ ಮಾತನಾಡಿದ್ದು ನಿಜ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡೋದಿಲ್ಲ. ಆದರೆ ರಮೇಶ್ ಜಾರಕಿಹೊಳಿ ಮತ್ತು ಹೆಚ್‌ಡಿ ಕುಮಾರಸ್ವಾಮಿ ಅವರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಅಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಂದು ಹೇಳಿದ್ದಾರೆ.
ಜಿಲ್ಲೆಯ ಬೆಳಗುಂದಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಮತ್ತೊಮ್ಮೆ ಹೇಳ್ತೀನಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದು ಸರ್ಕಾರ ಮಾಡಲೇಬೇಕು. ಹೆಚ್.ಡಿ.ಕುಮಾರಸ್ವಾಮಿಗೆ ನಾನು ಒಂದೇ ಹೇಳಿದ್ದೀನಿ. ಕುಮಾರಣ್ಣ ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲ. ನಿನ್ನ ಉದ್ದೇಶ ನೀನು ಮಾಡು, ನನ್ನ ಉದ್ದೇಶ ನಾನು ಮಾಡ್ತೀನಿ. ನಮ್ಮ ಇಬ್ಬರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಹೆಚ್.ಡಿ.ಕುಮಾರಸ್ವಾಮಿ ಉದ್ದೇಶ ಸಹ ಕಾಂಗ್ರೆಸ್ ಬರಬಾರದು ಅಂತಾ ಇದೆ. ರಮೇಶ್ ಜಾರಕಿಹೊಳಿ ಉದ್ದೇಶವೂ ಕಾಂಗ್ರೆಸ್ ಸರ್ಕಾರ ಬರಬಾರದು ಅಂತಲೇ ಇದೆ. ನಾನು ಬಿಜೆಪಿಯಲ್ಲಿ ಮಾಡ್ತೀನಿ, ನೀನು ಜೆಡಿಎಸ್ನಲ್ಲಿ ಮಾಡು ಅಷ್ಟು ಹೇಳಿದ್ದೀನಿ.
ಬಯೋಡೇಟಾ ಇಡ್ಕೊಂಡು ಹೋಗಿ ಮಂತ್ರಿ ಮಾಡಿ ಅಂತಾ ಕೆಳಮಟ್ಟಿಗೆ ಇಳಿದಿಲ್ಲ…
ಇದೇ ವೇಳೆ ಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಸ್ಪಷ್ಟಪಡಿಸಿದ ಅವರು, ನಾನು ಕಳೆದ ಒಂದು ವರ್ಷದಿಂದ ನಾನು ಹೇಳುತ್ತಾ ಬಂದಿದ್ದೇನೆ. ಈವರೆಗೂ ಒಬ್ಬರ ಮನೆಗೂ ನಾನು ಮಂತ್ರಿ ಮಾಡು ಅಂತ ಹೋಗಿಲ್ಲ. ನಾನು ಹೇಳಿದರೂ ಸತತವಾಗಿ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿ ಲಾಭಿ ಮಾಡ್ತಿದ್ದಾರೆ ಅಂತಾ ಬರ್ತಿದೆ. ನಾನು ಲಾಭಿ ಮಾಡುವ ಮನುಷ್ಯನಲ್ಲ. ಸರ್ಕಾರ ಮಾಡಿದವರು ನಾವು, ನಾನು ಅಲ್ಲ ನಾವು. ನಾನು ಹೋಗಿ ಬಯೋಡೇಟಾ ತೆಗೆದುಕೊಂಡು ಮಂತ್ರಿ ಮಾಡಿ ಅಂತಾ ಕೆಳಮಟ್ಟಿಗೆ ಇಳಿದಿಲ್ಲ. ಹೈಕಮಾಂಡ್ ಯಾವಾಗ ಮಂತ್ರಿ ಮಾಡ್ತಾರೆ ಮಾಡಲಿ ಬೇಕಾದ್ರೆ, ಬಿಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post