ವಿಜಯಪುರ: ಫೇಸ್ಬುಕ್ನಲ್ಲಿ ಶುರುವಾದ ಸ್ನೇಹ, ಹಾಯ್ ಹಲೋ ಅಂತಾ ಹೇಳಿ ಇಬ್ಬರ ಮಧ್ಯೆ ಲವ್ ಕಹಾನಿಯವರೆಗೂ ಮುಂದುವರೆದಿತ್ತು. ಬಣ್ಣ ಬಣ್ಣದ ಕನಸು ಕಟ್ಟಿದ ಹಾಸನದ ಪೋರಿಯ ಮಾತಿಗೆ ಆತ ಮರುಳಾಗಿದ್ದ. ಜಿಲ್ಲಾಧಿಕಾರಿ ಪತಿ ಆಗ್ತೀನಿ ಅಂದುಕೊಂಡವನಿಗೆ ಆಗಿದ್ದು ಬರೋಬ್ಬರಿ 41 ಲಕ್ಷ ರೂಪಾಯಿ ದೋಖಾ.
ಫಸ್ಟ್ಟೈಮ್ 700 ರೂ. ಕೇಳಿದ ಗೆಳತಿ..
ಮೋಸಕ್ಕೆ ಒಳಗಾದವನ ಹೆಸರು ಪರಮೇಶ್ವರ್ ಹಿಪ್ಪರಗಿ. ವಿಜಯಪುರದ ಸಿಂದಗಿ ತಾಲೂಕಿನ ಬಗಲೂರು ನಿವಾಸಿ. ಅವಳು ಹಾಸನದ ಹುಡುಗಿ. ಹೆಸರು ಮಂಜುಳಾ ಕೆ.ಆರ್.. ಈ ಹೆಸರಿನಡಿ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದವನಿಗೆ ಮೋಸಕ್ಕೆ ಒಳಗಾಗ್ತಿನಿ ಅನ್ನೋ ಕಲ್ಪನೆ ಇರಲಿಲ್ಲ. 2022 ರ ಜೂನ್ 29ರಿಂದ ಫೇಸ್ಬುಕ್ನಲ್ಲಿ ಸ್ನೇಹ ಶುರುವಾಗಿ, ಮೆಸ್ಸೆಂಜರ್ನಲ್ಲಿ ಚಾಟಿಂಗ್ ಮುಂದುವರೆದಿತ್ತು. ಸ್ನೇಹ ಶುರುವಾಗಿ ಎರಡೇ ತಿಂಗಳಿಗೆ ನಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ ಅಂತಾ 700 ರೂಪಾಯಿ ಹಣವನ್ನು ಮಂಜುಳಾ ಆನ್ಲೈನ್ಲ್ಲಿ ಟ್ರಾನ್ಸ್ಫರ್ಫರ್ ಮಾಡಿಸಿಕೊಂಡಿದ್ಲು.
ಹೆಣ್ಣಿನ ಮಾತಿಗೆ ಮರುಳಾದವನಿಗೆ ₹41 ಲಕ್ಷ ದೋಖಾ..
ಹೀಗೇ ಮುಂದೆ ತಾಯಿ ಮರಣ ಹೊಂದಿದ್ದಾಳೆ ಅಂತಾ ತಿಥಿ ಕಾರ್ಯ, ಆಮೇಲೆ ನಾನು ಐಎಎಸ್ ಪರೀಕ್ಷೆ ಬರೆದು ಪಾಸ್ ಆಗಿದ್ದೇನೆ. ನನಗೆ ಡಿಸಿ ಹುದ್ದೆ ಸಿಗುತ್ತೆ. ಇದಕ್ಕಾಗಿ ನಾನು ಬೆಂಗಳೂರಿಗೆ ಹೋಗುತ್ತೇನೆ. ಹೀಗಾಗಿ ನನಗೆ ಖರ್ಚಿಗೆ ಹಣ ಬೇಕು ಅಂತಾ 20, 30 ಸಾವಿರದಿಂದ ಹಿಡಿದು 41 ಲಕ್ಷದ 26 ಸಾವಿರದ 800 ರೂಪಾಯಿ ವರೆಗೆ ದುಡ್ಡು ಹಾಕಿಸಿಕೊಂಡಿದ್ದಾಳೆ. ಬಳಿಕ ತಾನು ಮೋಸ ಹೋಗಿರೋದು ತಿಳಿದ ಪರಮೇಶ್ವರ್ ಈಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post