ಬಳ್ಳಾರಿ: ಕಲ್ಯಾಣ ಕರ್ನಾಟಕದ ರಾಜಕೀಯ ಶಕ್ತಿ ಕೇಂದ್ರ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಮೋರ್ಚಾ ಸಮಾವೇಶ ನಡೆಯುತ್ತಿದ್ದು, ಬಳ್ಳಾರಿಯ G ಸ್ಕೂಯರ್ ಆವರಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ರೋಷವೇಶದಿಂದ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು, ಎಸ್ಟಿ ಮೀಸಲಾತಿ ಕುರಿತಂತೆ ತಮ್ಮ ಮೇಲೆ ಮಾಡಿದ ಟೀಕೆಗಳನ್ನು ಪ್ರಸ್ತಾಪ ಮಾಡಿ ಸವಾಲು ಹಾಕಿದ್ದಾರೆ.
ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮುಲು, ಸಮಾವೇಶಕ್ಕೆ 10 ಲಕ್ಷ ಮಂದಿ ವಾಲ್ಮೀಕಿ ಸಮುದಾಯದವರು ಬಂದಿದ್ದಾರೆ. ಜನಸಾಗರ ನೋಡ್ತಿದರೇ ನಮ್ಮ ಸರ್ಕಾರದ ನಡೆ ಸಾಮಾಜಿಕದ ಕಡೆ ಅನ್ನೋದು ಸಿಎಂ ಅವರಿಗೆ ಅರ್ಥವಾಗುತ್ತದೆ. ಶ್ರೀರಾಮನಿಗೆ ನ್ಯಾಯ ಕೊಟ್ಟಂತಹದ್ದು, ಹನುಮನಿಗೆ ಶಕ್ತಿ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ. ಮುಂದೆ ಲಂಕಾದಹನ ಮಾಡಿದಂತೆ ಕಾಂಗ್ರೆಸ್ ಪಕ್ಷವನ್ನು ಪತನ ಮಾಡಲು ಈ ಸಮಾವೇಶದಿಂದಲೇ ಶುರುವಾಗಲಿ. ಇವತ್ತು ಸಾರ್ಥಕತೆ ಸಮಾವೇಶ ನಡೆಯುತ್ತಿದೆ. 7 ಸಾವಿರ ಬೇಡರ ಪಡೆಗಳು ವಿಜಯನಗರ ಸಾಮ್ರಾಜ್ಯವನ್ನ ಯಾವ ರೀತಿ ಮುಂದುವರಿಸಿಕೊಂಡು ಬಂದಿದ್ದೇವೋ.. ಅದೇ ರೀತಿ 2023ರ ಚುನಾವಣೆಯಲ್ಲಿ ಬಿಜೆಪಿಯನ್ನ ನಮ್ಮ ಸಮುದಾಯ ನಡೆಸಬೇಕು ಎಂದು ಕರೆ ನೀಡಿದರು.
ನಮ್ಮ ಸಿಎಂಗೆ ಜೋಡಿ ಗುಂಡಿಗೆ ಇದೆ. 4 ದಶಕದ ಹೋರಾಟವನ್ನ ನೋಡಿ ಮೀಸಲಾತಿ ಹೆಚ್ಚಿಸಿದ್ದಾರೆ. ನಾವು ದೇಶಕ್ಕೋಸ್ಕರ ವಾಜಪೇಯಿಯನ್ನ ನೆನಪು ಮಾಡಿಕೊಳ್ತೀವಿ. ನಮ್ಮ ದಕ್ಷಿಣದ ವಾಜಪೇಯಿ, ಬೊಮ್ಮಾಯಿ ಆಗಿದ್ದಾರೆ. ಕಾಂಗ್ರೆಸ್ ನವರು ಮೀಸಲಾತಿ ಕೊಡದೇ ನಿದ್ದೆ ಮಾಡಿದ್ದರು. ನಮ್ಮ ಸರ್ಕಾರ ಎಸ್ ಟಿಗೆ 3 ರಿಂದ 7 ಹಾಗೂ ಎಸ್ ಸಿಗೆ 15 ರಿಂದ 17 ಮಾಡಿದೆ. ನಮ್ಮ ಸರ್ಕಾರ ಒಟ್ಟು 24 ಪರ್ಸೆಂಟ್ ಮೀಸಲಾತಿ ಮಾಡಿದ್ದಾರೆ. ನಮ್ಮ ಮಕ್ಕಳು ನೂರಕ್ಕೆ 24 ಮಂದಿ ಡಾಕ್ಟರ್, ಎಂಜಿನಿಯರ್ಗಳು ಆಗ್ತಾರೆ ಎಂದರು.
ಭಾಷದ ವೇಳೆ ಭುಜದ ಮೇಲಿದ್ದ ಟವಲ್ ಅನ್ನು ತಲೆಗೆ ಕಟ್ಟಿಕೊಂಡ ರಾಮುಲು, ಬಸವರಾಜ್ ಬೊಮ್ಮಾಯಿ ಅವರಿಗೆ ಜೋಡಿ ಗುಂಡಿಗಳು ಇದ್ದಾವೆ. ನಲವತ್ತು ದಶಕಗಳ ಬೇಡಿಕೆ ಈಡೇರಿಸಿದವರು. ಮದರಂಗಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕರಿಗೆ ನಾನು ಕೇಳ್ತೇನೆ, ಹಿಂದುಳಿದ ವರ್ಗದ ಮುಖವಾಡ ತೊಟ್ಟು ಮುಖ್ಯಮಂತ್ರಿಯಾದ್ರಿ.. ಸ್ವಾಮಿ ನಿಮ್ಮ ಕೈಯಲ್ಲಿ ಯಾಕೆ ಮೀಸಲಾತಿ ಕೊಡೋಕೆ ಆಗಿಲ್ಲ..? ಸುದರ್ಶನದ ಚಕ್ರವನ್ನು ಮುಖ್ಯ ಮಂತ್ರಿ ಗಳು ಬಿಟ್ಟಿದ್ದಾರೆ. ಈ ಸುದರ್ಶನ ಚಕ್ರದಿಂದ ಕಾಂಗ್ರೆಸ್ ಶಿರಚ್ಛೇದನ ಆಗಬೇಕು. ನಿಮಗೆ ತಾಕತ್ ಇದ್ರೆ ಬನ್ರಿ ನೋಡೋಣ. ಮೀಸಲಾತಿ ಕೊಡೋಕೆ ಆಗಲ್ಲ ಅಂದ್ರಲ್ಲ , ಬರಲ್ಲ ನೋಡೋಣ ಎಂದರು. ಅಲ್ಲದೇ, ನಾನು ನನ್ನ ಮೀಸಲಾತಿ ಕೊಟ್ಟಿಲ್ಲ ಎಂದರೇ ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ದೆ. ಅವಾಗ ನೀವು ನನ್ನ ಲೇವಡಿ ಮಾಡಿದ್ರಿ. ಇವಾಗ ತಾಕತ್ ಇದ್ರೆ ನೋಡ್ರಲ್ಲ, ನಾನು ಮೀಸಲಾತಿ ಜಾಸ್ತಿ ಮಾಡ್ಸಿದ್ದೇನೆ ಎಂದು ತಿರುಗೇಟು ಕೊಟ್ಟರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post