ಟ್ವೀಟರ್ನಿಂದ ಬ್ಯಾನ್ ಆಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೆ ರೀ ಎಂಟ್ರಿಕೊಟ್ಟಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಟ್ರಂಪ್ ಅವರ ಟ್ವಿಟರ್ ಅನ್ನ ಸಕ್ರಿಯಗೊಳಿಸಲಾಗಿದೆ. ಇದು ಟ್ರಂಪ್ಗೆ ಸಿಕ್ಕ ಗೆಲುವು ಎಂದು ಬಣ್ಣಿಸಲಾಗಿದ್ದು, ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರಿಗೆ ಲಾಭವಾಗಲಿದೆ ಎಂದು ಬಣ್ಣಿಸಲಾಗುತ್ತಿದೆ.
ಸಮೀಕ್ಷೆಗೆ ನಡೆಸಿದ್ದ ಎಲಾನ್ ಮಸ್ಕ್..!
ಟ್ವೀಟರ್ ಸಂಸ್ಥೆಯನ್ನ ಖರೀದಿಸಿದ ನಂತರ ಎಲಾನ್ ಮಸ್ಕ್ ಹಲವು ಪ್ರಯೋಗಗಳಿಗೆ ಮುಂದಾಗಿದ್ದಾರೆ. ಸಂಸ್ಥೆಯ ಸಿಬ್ಬಂದಿಯ ವಜಾಗೊಳಿಸಿದ ಆರೋಪ ಹೊತ್ತಿದ್ದ ಬೆನ್ನಲ್ಲೇ, ಬ್ಯಾನ್ ಆಗಿದ್ದ ಟ್ರಂಪ್ ಖಾತೆಯನ್ನ ಸಕ್ರೀಯಗೊಳಿಸುವ ಬಗ್ಗೆ ಸಾರ್ವಜನಿಕವಾಗಿ ಸಮೀಕ್ಷೆಗೆ ಮುಂದಾಗಿದ್ದರು. ಈ ಸಮೀಕ್ಷೆಯಲ್ಲಿ ಡೋನಾಲ್ಡ್ ಟ್ರಂಪ್ ಪರವಾಗಿ ಶೇ. 51.8 ಜನರು ಮತಚಲಾವಣೆ ಮಾಡಿದ್ದರು. ಶೇ.48.2 ರಷ್ಟು ಜನ ಟ್ರಂಪ್ ವಿರುದ್ಧವಾಗಿ ಮತ ಚಲಾಯಿಸಿದ್ರು. ಇದನ್ನ ಗಮನಿಸಿದ ಮಸ್ಕ್, ಇಂದು ಟ್ರಂಪ್ ಅವರ ಟ್ವಿಟರ್ ಖಾತೆಯನ್ನ ರಿಸ್ಟೋರ್ ಮಾಡಿದ್ದಾರೆ.
ಟ್ವಿಟರ್ ಖಾತೆ ರಿಸ್ಟೋರ್ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ, ಇದರಲ್ಲಿ ನನಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದಿದ್ದಾರೆ ಅಂತಾ ವರದಿಯಾಗಿದೆ.
ಯಾಕೆ ಟ್ರಂಪ್ ಟ್ವಿಟರ್ ಬ್ಯಾನ್..?
2020ರಲ್ಲಿ ಅಮೆರಿದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದು ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಟ್ರಂಪ್, ಪ್ರಚೋದನಾಕಾರಿ ಟ್ವೀಟ್ಗಳನ್ನ ಮಾಡುತ್ತಿದ್ದರು. ಅವರ ಪ್ರಚೋದನಾಕಾರಿ ಟ್ವೀಟ್ ಬೆನ್ನಲ್ಲೇ 2021ರ ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್ ಹಿಲ್ಗೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಟ್ರಂಪ್ ಟ್ವೀಟರ್ ಅಕೌಂಟ್ ಅನ್ನ ಶಾಶ್ವತವಾಗಿ ಬ್ಯಾನ್ ಮಾಡಲಾಗಿತ್ತು.
ಪದೇ ಪದೇ ತಮ್ಮ ಖಾತೆಯನ್ನ ಅಮಾನತು ಮಾಡುತ್ತಿದ್ದ ಟ್ವಿಟರ್ ಸಂಸ್ಥೆ ವಿರುದ್ಧ ಟ್ರಂಪ್ ಕೆಂಡಕಾರಿದ್ದರು. ಮಾತ್ರವಲ್ಲ, ಟ್ವಿಟರ್ ಮಾದರಿಯಲ್ಲೇ ತಮ್ಮದೇಯಾದ ಸ್ವಂತ ಅಪ್ಲಿಕೇಷನ್ ಹುಟ್ಟುಹಾಕಿ ಸೇಡು ತೀರಿಸಿಕೊಂಡಿದ್ದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.
Reinstate former President Trump
— Elon Musk (@elonmusk) November 19, 2022
The people have spoken.
Trump will be reinstated.
Vox Populi, Vox Dei. https://t.co/jmkhFuyfkv
— Elon Musk (@elonmusk) November 20, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post