CSK ಕ್ಯಾಪ್ಟನ್ ಧೋನಿಗೆ ವಾರಸುದಾರನನ್ನು ಹುಡುಕಾಟ ನಡೆಸಲಾಗ್ತಿದೆ. ಅದರಲ್ಲೂ ಈತನೇ ಧೋನಿ ಸ್ಥಾನವನ್ನ ರಿಪ್ಲೇಸ್ ಮಾಡಬಲ್ಲ ಎಂದು ಹೇಳಲಾಗ್ತಿದೆ. ಈ ವರ್ಷವೇ ಧೋನಿ ಕೊನೆಯ ಐಪಿಎಲ್ ಆದ್ರೆ, CSK ಸಾರಥಿ ಯಾರಾಗೋ ಚಾನ್ಸ್ ಇದೆ.
‘ನಾನು ಯಾವಾಗಲೂ ನನ್ನ ಕ್ರಿಕೆಟ್ ಜೀವನದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿರುತ್ತೇನೆ. ನನ್ನ ಕೊನೆಯ ತವರು ಏಕದಿನ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ಇದೀಗ ನನ್ನ ಕೊನೆಯ IPL T20 ಪಂದ್ಯವು ಚೆನ್ನೈನಲ್ಲಿ ಆಡುವ ವಿಶ್ವಾಸವಿದೆ’
MS ಧೋನಿ, ಸಿಎಸ್ಕೆ ನಾಯಕ
11 ತಿಂಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ MS ಧೋನಿ, ಹೇಳಿದ ಮಾತಿದು. ತಮ್ಮ ಕೊನೆಯ ಪಂದ್ಯ ಚೆನ್ನೈನಲ್ಲೇ ಆಡೋದಾಗಿ ಹೇಳಿದ್ರು. ಆ ಮೂಲಕ ರಿಟೈರ್ ಆಗೋ, ಹಿಂಟ್ ನೀಡಿದ್ರು. ಇದ್ರ ಜೊತೆಗೆ ಒಂದ್ ಕನ್ಫ್ಯೂಷನ್ ಇಟ್ಟಿದ್ರು.
‘ಆದರೆ, ಅದು ಮುಂದಿನ ವರ್ಷವೋ ಅಥವಾ ಮುಂದಿನ ಐದು ವರ್ಷಗಳ ಬಳಿಕವೋ ಎಂಬುದು ನಿಜವಾಗಿಯೂ ತಿಳಿದಿಲ್ಲ’
MS ಧೋನಿ, ಸಿಎಸ್ಕೆ ನಾಯಕ
ಹೌದು, ಮುಂದಿನ ವರ್ಷ ನಡೆಯೋ IPL, ಧೋನಿ ಪಾಲಿಗೆ ಲಾಸ್ಟ್ IPL. ಹಾಗಂತ ನಾವೂ ಹೇಳ್ತಿಲ್ಲ. ಜೊತೆಗೆ ಧೋನಿನೂ ಕ್ಲಾರಿಟಿ ಕೊಟ್ಟಿಲ್ಲ. ಆದ್ರೆ, ಧೋನಿ ಹೇಳಿದ್ ನೋಡಿದ್ರೆ, ಪಕ್ಕಾ ರಿಟೈರ್ ಆಗೋದು ಪಕ್ಕಾ ಅನ್ಸುತ್ತೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 4 ಬಾರಿ ಚಾಂಪಿಯನ್. 5 ಬಾರಿ ರನ್ನರ್ ಅಪ್, 2 ಬಾರಿ ಚಾಂಪಿಯನ್ ಲೀಗ್ ಚಾಂಪಿಯನ್. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ MS ಧೋನಿ ಟ್ರ್ಯಾಕ್ ರೆಕಾರ್ಡ್.
ಇದು ಅವ್ರ ಕ್ಯಾಪ್ಟನ್ಸಿಗಿರೋ ಗತ್ತು ಏನಂತ ತೋರ್ಸುತ್ತೆ.! ಆದ್ರೀಗ ಅದಲ್ಲ, ವಿಷ್ಯ.. ಮುಂದಿನ್ ವರ್ಷ ರಿಟೈರ್ ಆದ್ರೆ, CSKಗೆ ಧೋನಿಯಂತೆ ಮಾಸ್ಟರ್ಮೈಂಡ್ ಕ್ಯಾಪ್ಟನ್ ಯಾರ್ ಸಿಗ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ.
ಸಕ್ಸಸ್ ಆಗ್ಲಿಲ್ಲ ಜಡೇಜಾ, ಯಾರಾಗ್ತಾರೆ ಸಿಎಸ್ಕೆ ಸಾರಥಿ?
ಈ ಬಾರಿಯೇ ಧೋನಿ ಪಟ್ಟ ತ್ಯಜಿಸಿ, ರವೀಂದ್ರ ಜಡೇಜಾ ಜವಾಬ್ದಾರಿ ವಹಿಸಿದ್ರು. ಆದ್ರೆ, ಕ್ಯಾಪ್ಟನ್ಸಿಯಲ್ಲಿ ಫುಲ್ ಫೇಲಾದ್ರು. ಟೂರ್ನಿಯ ಅರ್ಧದಲ್ಲೇ ನಾಯಕತ್ವದಿಂದ ಜಡ್ಡು ಕೆಳಗಿಳಿದ್ರಿಂದ ಮತ್ತೆ ಧೋನಿಯೇ ಕ್ಯಾಪ್ಟನ್ ಆದ್ರು.
ಇದೀಗ ಧೋನಿನೂ ಟೀಮ್ ಬಿಟ್ಹೋಗೋ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ ಧೋನಿನ ರಿಪ್ಲೇಸ್ ಮಾಡೋಕೆ, ಸಿಎಸ್ಕೆಗೆ ಇದೇ ರೈಟ್ಟೈಮ್.. ಅದ್ರಲ್ಲೂ ಯಂಗ್ ಪ್ಲೇಯರ್ನೇ ತಂದುಕೂರಿಸೋಕೆ, ಮ್ಯಾನೇಜ್ಮೆಂಟ್ ಚಿಂತನೆ ನಡೆಸ್ತಿದೆ.
ಋತುರಾಜ್ ಗಾಯಕ್ವಾಡ್ ಮೇಲೆ ಕಣ್ಣಿಟ್ಟ ಯಲ್ಲೋ ಆರ್ಮಿ?
ಯೆಸ್, ಋತುರಾಜ್ ಗಾಯಕ್ವಾಡ್ರನ್ನ CSK ಕ್ಯಾಂಪ್ಗೆ ಲೀಡರ್ ಮಾಡೋಕೆ ಮ್ಯಾನೇಜ್ಮೆಂಟ್ ರೆಡಿಯಾಗಿದೆ. ಅದಕ್ಕೆ ಕಾರಣ, ಧೋನಿಯಲ್ಲಿರೋ ಕ್ವಾಲಿಟೀಸ್ ಸೇಮ್ ಗಾಯಕ್ವಾಡ್ರಲ್ಲೂ ಇರೋದು.
ಋತುರಾಜ್ರಲ್ಲಿ, ಧೋನಿಯಂತೆ ಕ್ಯಾಪ್ಟನ್ಸಿ ಮಾಡೋ ಕೆಪಬಿಲಿಟಿ, ಕೂಲ್ & ಕಾಮ್, ಅಗ್ರೆಸ್ಸಿವ್ ಆಟ, ಸಹ ಆಟಗಾರರ ಜೊತೆ ಹೊಂದಾಣಿಕೆ, ನಿರ್ಧಾರಗಳು, ನಿಲುವುಗಳು ಒಂದೆ ರೀತಿ ಇವೆ. ಹೀಗಾಗಿ ಯಂಗ್ ಪ್ಲೇಯರ್ ಮೇಲೆ ಕಣ್ಣಿಡಲಾಗಿದೆ.
ದೇಶೀ ಕ್ರಿಕೆಟ್ನಲ್ಲಿ ನಾಯಕನಾಗಿ ಗಾಯಕ್ವಾಡ್ ಮಿಂಚು..
ಗಾಯಕ್ವಾಡ್ ಮೇಲೆ ನಂಬಿಕೆ ಇಡೋಕೆ ಕಾರಣ ಇದೆ. ದೇಶೀ ಕ್ರಿಕೆಟ್ನಲ್ಲಿ ನಾಯಕನಾಗಿ ಋತುರಾಜ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಮಹಾರಾಷ್ಟ್ರ ತಂಡ ಮುನ್ನಡೆಸಿದ ಅನುಭವ ಹೊಂದಿರುವ ಗಾಯಕ್ವಾಡ್ ಈಗ ಸ್ಟ್ರಾಂಗ್ ಕಂಟೆಂಡರ್.
ಒಟ್ಟಿನಲ್ಲಿ ಧೋನಿಯಲ್ಲಿರೋ ಕ್ಯಾಪ್ಟನ್ಸಿ ಕ್ವಾಲಿಟೀಸ್, ಋತುರಾಜ್ರಲ್ಲೂ ಇವೆ. ಜೊತೆಗೆ ತಂಡವನ್ನ ಬೆಳೆಸುವ ಧಮ್ ಕೂಡ ಗಾಯಕ್ವಾಡ್ಗಿದೆ. ಈ ತಾಕತ್ತು ಪ್ರೂವ್ ಮಾಡಿರೋ ಕಾರಣ, ದೊಡ್ಡ ಜವಾಬ್ದಾರಿಯನ್ನ ನೀಡೋಕೆ ಸಜ್ಜಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post