ಟೀಂ ಇಂಡಿಯಾದಲ್ಲಿ ‘ಸೂರ್ಯ’ ಎಂಬ ದೈತ್ಯ ಶಕ್ತಿಯ ಪ್ರಕಾಶಮಾನವು ಪ್ರಜ್ವಲಿಸುತ್ತಿದೆ. ಸಿಕ್ಕ ಅವಕಾಶಗಳಲ್ಲಿ ತಮ್ಮ ಅಸಾಧಾರಣ ಪ್ರದರ್ಶನ ತೋರಿಸುತ್ತಿರುವ ಸೂರ್ಯಕುಮಾರ್ ಯಾದವ್, ಏಷ್ಯಾಕಪ್, ವಿಶ್ವಕಪ್ನಲ್ಲಿ ಅಬ್ಬರಿಸಿದ ಆರ್ಭಟವು, ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿಯೂ ಮುಂದುವರಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು. ಎಂದಿನಂತೆ ಪಂತ್ ವಿಕೆಟ್ ಬೇಗ ವಿಕೆಟ್ ಒಪ್ಪಿಸಿ ಕ್ರೀಸ್ನಿಂದ ಹೊರನಡೆದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್, ಉತ್ತಮ ಆರಂಭವನ್ನ ತಂದುಕೊಟ್ಟರೂ, 36 ರನ್ಗಳಿಗೆ ಕ್ರೀಸ್ನಿಂದ ನಿರ್ಗಮಿಸಬೇಕಾಯಿತು.
ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ ಸೂರ್ಯಕುಮಾರ್ ಯಾದವ್ ಮಾತ್ರ ಎಂದಿನಂತೆಯೇ ತಮ್ಮ ಆಟವನ್ನ ಪ್ರದರ್ಶಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್, ಭರ್ಜರಿ ಶತಕ ಸಿಡಿಸಿ ಟಿ-20ಯಲ್ಲಿ ಐತಿಹಾಸಿಕ ದಾಖಲೆ ಬರೆದರು. 51 ಎಸೆತಗಳನ್ನ ಎದುರಿಸಿದ ಸೂರ್ಯ 7 ಸಿಕ್ಸರ್, 11 ಬೌಂಡರಿಗಳನ್ನ ಬಾರಿಸಿ ಮಿಂಚಿದರು. ಕೊನೆಯವರೆಗೂ ಅಜೆಯರಾಗಿಯೇ ಉಳಿದ ಸೂರ್ಯ 111 ರನ್ಗಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post