ರೇಷನ್ ಕಾರ್ಡ್ನಲ್ಲಿ ವ್ಯಕ್ತಿಯೊಬ್ಬರ ಸರ್ನೇಮ್ (ಕುತ್ತಾ) ನಾಯಿ ಎಂದು ಟೈಪ್ ಆಗಿತ್ತು. ಹೆಸರು ಬದಲಾವಣೆಗಾಗಿ ಸರ್ಕಾರಿ ಕಚೇರಿಗೆ ಅವರು ಸಾಕಷ್ಟು ಅಲೆದಾಡಿದ್ದರು. ಆದರೆ ಹೆಸರು ಮಾತ್ರ ಬದಲಾವಣೆ ಆಗಿಲ್ಲ. ಹೀಗಾಗಿ ವ್ಯಕ್ತಿ ಸರ್ಕಾರಿ ಅಧಿಕಾರಿ ಬಳಿ ನಾಯಿಯಂತೆ ಬೊಗುಳುತ್ತ ಹೆಸರು ಬದಲಾವಣೆಗೆ ಮನವಿ ಮಾಡಿದ ಪ್ರಸಂಗ ನಡೆದಿದೆ.
ದತ್ತಾ ಬದಲು ಕುತ್ತಾ ಎಂದು ಮುದ್ರಣ
ಪಶ್ಚಿಮ ಬಂಗಾಳ ಮೂಲದ ಶ್ರೀಕಾಂತ್ ಕುಮಾರ್ ದತ್ತಾ ಎಂಬುವವರ ಹೆಸರು ಈ ರೀತಿಯಾಗಿ ಮುದ್ರಣಗೊಂಡಿತ್ತು. ದತ್ತಾ ಬದಲಿಗೆ ಕುತ್ತಾ ಎಂದು ಅಧಿಕಾರಿಗಳು ಮಾಡಿಬಿಟ್ಟಿದ್ದರು. ಅದಕ್ಕೆ ಶ್ರೀಕಾಂತ್ ತಮ್ಮ ಹೆಸರನ್ನ ಬದಲಾವಣೆ ಮಾಡಿಸಿಕೊಳ್ಳಲು ಸಾಕಷ್ಟು ಅಲೆದಾಟ ನಡೆಸಿದ್ದರು. ಆದರೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.
ಭರವಸೆ ನೀಡದೇ ಓಡಿದ ಅಧಿಕಾರಿ..!
ಅದಕ್ಕೆ ಕೋಪಿಸಿಕೊಂಡ ಶ್ರೀಕಾಂತ್.. ಮ್ಯಾಜಿಸ್ಟ್ರೇಟ್ ಅಧಿಕಾರಿಯನ್ನ ಭೇಟಿಯಾಗಲು ನಿರ್ಧರಿಸುತ್ತಾರೆ. ಅಧಿಕಾರಿ ಕಾರಿನಲ್ಲಿ ತೆರಳುತ್ತಿದ್ದಾಗ ಅಲ್ಲಿಗೆ ಹೋದ ಶ್ರೀಕಾಂತ.. ನಾಯಿ ಕೂಗುವ ಹಾಗೆ ‘ಬೌ ಬೌ’ ಎಂದು ಅವರ ಬಳಿ ಹೋಗಿದ್ದಾರೆ. ಕೊನೆಗೆ ತಮ್ಮ ಅಳಲನ್ನ ಆ ಅಧಿಕಾರಿಗೆ ತಿಳಿಸಿದ್ದಾರೆ. ಹೀಗಿದ್ದೂ ಅಧಿಕಾರಿ ಸ್ಪಂದಿಸದೇ ಕಾರಿನಲ್ಲಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
क्या गज़ब का प्रोटेस्ट है!
राशन कार्ड में सरनेम ‘दत्ता’ (Dutta) की जगह ‘कुत्ता’ (Kutta) लिख दिया तो दत्ता साहब ने कुत्ते की आवाज़ निकाल कर अधिकारी को घेरा! 😃
— Umashankar Singh उमाशंकर सिंह (@umashankarsingh) November 19, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post