ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬದಾಮಿಯಲ್ಲೇ ಸ್ಪರ್ಧೆ ಮಾಡ್ಬೇಕು ಅಂತ ಕ್ಷೇತ್ರದ ಜನರು ಒತ್ತಡ ಹಾಕುತ್ತಿದ್ದಾರೆ. ಅಲ್ಲದೇ ಅವರಿಗೆ ಕ್ಷೇತ್ರಕ್ಕೆ ಬಂದು ಹೋಗಲು ಅನುಕೂಲ ಆಗಲು ಹೆಲಿಕಾಪ್ಟರ್ ಬೇಕಾದ್ರೆ ಖರೀದಿ ಮಾಡಿ ಕೊಡ್ತೀವಿ ಅಂತ ಹೇಳ್ತಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬದಾಮಿ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಕ್ಷೇತ್ರದ ಜನತೆ ಒತ್ತಡ ಹಾಕುತ್ತಿದ್ದಾರೆ. ನಾನು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಗ್ರಾಮಸ್ಥರು ನಮ್ಮ ಬಳಿ ಮನವಿ ಮಾಡಿದ್ರು. ನಾನು ಕೂಡ ಸಿದ್ದರಾಮಯ್ಯ ಅವರಿಗೆ ಹೇಳಬಹುದು. ಆದರೆ ಅವರು ಕ್ಷೇತ್ರ ದೂರ ಇರೋದರಿಂದ ಬಂದು ಹೋಗಲು ಕಷ್ಟ ಆಗುತ್ತಿದೆ. ಕ್ಷೇತ್ರಕ್ಕೆ ಕನಿಷ್ಠ ವಾರದಲ್ಲಿ ಒಮ್ಮೆ ಆದ್ರು ಭೇಟಿ ನೀಡಲೇಬೇಕಾಗುತ್ತದೆ. ಆದ್ದರಿಂದ ಬದಾಮಿ ದೂರ ಆಗುತ್ತೆ, ನಿಲ್ಲೋದಿಲ್ಲ ಅಂತ ಹೇಳ್ತಿದ್ದಾರೆ. ಇದೇ ಮಾತನ್ನು ನಾನು ಗ್ರಾಮಸ್ಥರಿಗೆ ಹೇಳಿದ್ರೆ, ನಾವೇ ಸಿದ್ದರಾಮಯ್ಯ ಅವರಿಗೆ ಒಂದು ಹೆಲಿಕಾಪ್ಟರ್ ಕೊಡಿಸುತ್ತೇವೆ. 25 ಕೋಟಿ ರೂಪಾಯಿ ಖರ್ಚು ಆದ್ರು ಪರ್ವಾಗಿಲ್ಲ. ನಾವೇ ಹಣವನ್ನು ಸಂಗ್ರಹ ಮಾಡಿ ಕೊಡ್ತೀವಿ ಅಂತ ಹೇಳಿದ್ರು. ಅಷ್ಟು ಪ್ರೀತಿಯನ್ನು ಕ್ಷೇತ್ರದ ಜನತೆ ಸಿದ್ದರಾಮಯ್ಯ ಮೇಲೆ ಹೊಂದಿದ್ದಾರೆ ಎಂದು ಜಮೀರ್ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಜಮೀರ್ ಅವರು, ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಸಾಧನೆ ಹೇಳಿ ಮತ ಕೇಳ್ತಿದೆ. ಆದರೆ ಬಿಜೆಪಿ ನಾಯಕರು ರೀತಿ ಇಲ್ಲ. ಹಿಂದೂ-ಮುಸ್ಲಿಂ ಅಂತಾರೆ, ಆದರೆ ಅವರಿಗ್ಯಾರು ಬೇಕಾಗಿಲ್ಲ. ಬಿಜೆಪಿಗರಿಗೆ ಬೇಕಾಗಿರುವುದು ಕೇವಲ ಅಧಿಕಾರ. ಟಿಪ್ಪು ಜಯಂತಿಗೆ ಬಿಜೆಪಿಗರು ವಿರೋಧ ಮಾಡ್ತಿದ್ದಾರೆ. ಈಗ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡೋಕೆ ಅವಕಾಶ ಕೊಟ್ಟಿದ್ದಾರೆ. ಆದರೆ ಬಿಜೆಪಿಗರಿಗೆ ಯಾವ ಹಿಂದೂನು ಬೇಕಾಗಿಲ್ಲ. ಯಾವ ಮುಸ್ಲಿಂರೂ ಬೇಕಾಗಿಲ್ಲ. ಇವರಿಗೆ ಬೇಕಾಗಿರೋದು ಕೇವಲ ಅಧಿಕಾರ ಅಷ್ಟೇ ಎಂದು ಕಿಡಿಕಾರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post