ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ್ ಕೂಡ ಚಿಕಿತ್ಸೆಗೆ ಸ್ಪಂದಿಸ್ತಿದ್ದಾನೆ ಅಂತ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಅಲೋಕ್ ಕುಮಾರ್, ಆಟೋ ಚಾಲಕನಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗ್ತಿದೆ, ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನ ಕೊಡಿಸೋ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡ್ತೀವಿ. ಘಟನೆಯಲ್ಲಿ ಪುರುಷೋತ್ತಮ್ ಆಟೋ ಕೂಡ ಜಖಂ ಆಗಿದ್ದು, ಸರ್ಕಾರದ ಕಡೆಯಿಂದ ನೆರವು ನೀಡ್ಲಾಗುತ್ತೆ. ಅವರಿಗೆ ಸಮಸ್ಯೆ ಆಗಿರುವ ಬಗ್ಗೆ ನಮಗೂ ನೋವು ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ: ಮೂವರು ಶಂಕಿತರು ವಶಕ್ಕೆ, ಸ್ಫೋಟಕ ತಂದಿದ್ದು ಶಾರೀಕ್-ಅಲೋಕ್ ಕುಮಾರ್
ದೈವವೇ ಉಳಿಸಿದೆ
ಪರುಷೋತ್ತಮ್ ಬದುಕುಳಿಯಲು ದೈವವೇ ಕಾರಣ ಎಂದು ಆತನ ಪತ್ನಿ ಚಿತ್ರಾಕ್ಷಿ ಹೇಳಿದ್ದಾರೆ. ಸ್ಫೋಟದಲ್ಲಿ ಆಟೋ ಡ್ರೈವರ್ ಆದ ಪುರುಷೋತ್ತಮ್ ಉಳಿಯೋದೆ ಡೌಟ್ ಇತ್ತು, ಆದ್ರೆ ಅವರನ್ನ ಕೊರಗಜ್ಜ ಕಾಪಾಡಿದ್ದಾನೆ. ಪುರುಷೋತ್ತಮ್ ಆಟೋ ಕೆಲಸದ ಜೊತೆಗೆ ದೈವ ಸೇವೆಯಲ್ಲಿ ತೊಡಗಿದ್ದು, ಉಜ್ಜೋಡಿ ಮಹಾಕಾಳಿ, ಕೊರಗಜ್ಜನಿಗೆ ಪ್ರಸಾದ ನೀಡ್ತಿದ್ರು. ಸದ್ಯ ಆಟೋ ಚಾಲಕ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ದೊಡ್ಡ ದುರ್ಘಟನೆ ಆಗದಂತೆ ಕಾಪಾಡಿದೆ, ಇನ್ನೂ ಅವರು ನಂಬಿದ ದೈವ ಅವರನ್ನ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post