ಚಿಕ್ಕಮಗಳೂರು: ಮೂಡಿಗೆರೆ ಶಾಸಕರ ಎಂ.ಪಿ ಕುಮಾರಸ್ವಾಮಿ ತಮ್ಮ ಮೇಲೆ ನಿನ್ನೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಕೆಲವರು ದುಷ್ಕರ್ಮಿಗಳ ಪ್ರಚೋಧನೆಯಿಂದ ಇಂತಹ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು, ನಿನ್ನೆ ಆನೆ ದಾಳಿಯಿಂದ ಮಹಿಳೆಯೊಬ್ಬರು ಕ್ಷೇತ್ರದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಲು ಮುಂದಾದೇ, ಆದರೆ ಆ ವೇಳೆಗೆ ನನ್ನ ವಿರುದ್ಧ ಸ್ಥಳದಲ್ಲಿ ಸೇರಿದ್ದ ಕೆಲ ಪುಂಡರು ಜನರಿಗೆ ಪ್ರಚೋದನೆ ಮಾಡೋ ಕೆಲಸ ಮಾಡಿದ್ದಾರೆ. ಅವರು ಹೋದ ಮೇಲೆ ಬನ್ನಿ ಎಂದು ನನ್ನ ಹಿತೈಶಿಗಳು ಸಲಹೆ ನೀಡಿದರು. ಆದ್ದರಿಂದ ನಾನು ಎರಡು ಗಂಟೆ ತಡವಾಗಿ ಸ್ಥಳಕ್ಕೆ ಹೋಗಿದ್ದೆ ಎಂದು ತಿಳಿಸಿದರು.
ನಾನು ಸ್ಥಳಕ್ಕೆ ಹೋಗುತ್ತಿದಂತೆ ಮಹಿಳೆರು ನನಗೆ ಘೇರಾವ್ ಹಾಕಿದ್ರು. ಆದ್ರು ನಾನು ಅವರು ಆಕ್ರೋಶದಲ್ಲಿ ಮಾತನಾಡುತ್ತಿದ್ದಾರೆ ಅಂತ ಸಮಾಧಾನ ಮಾಡಲು ಮುಂದಾದೇ, ಆದರೆ ಅಲ್ಲಿದ್ದ ಕೆಲವರು ಪೊಲೀಸರು ಸೇರಿದಂತೆ ನಮ್ಮ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ್ರು. ನಾನು ಹೋಗುವ ಮುನ್ನವೇ ಅರಣ್ಯ ಇಲಾಖೆ ಕಚೇರಿ ಮೇಲೂ ದಾಳಿ ಗಾರ್ಡ್ಗಳ ಮೇಲೆ ಹಲ್ಲೆ ಮಾಡಿದ್ದರು. ನಾನು ಸ್ಥಳಕ್ಕೆ ಹೋಗುವ ಮುನ್ನ ಮಂತ್ರಿಗಳಿಗೆ ಕರೆ ಮಾಡಿ, ಸ್ಥಳಕ್ಕೆ ಬರಲು ಮನವಿ ಮಾಡಿದ್ದೆ. ಆದರೆ ಅವರು ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಕಾರಣ ಒಂದು ದಿನ ಸಮಯ ಕೇಳಿದ್ರು. ಅನಿವಾರ್ಯವಾಗಿ ನಾನು ಒಬ್ಬನೇ ಸ್ಥಳಕ್ಕೆ ಬಂದೇ. ನಾನು ಹೋದ ಸಂದರ್ಭದಲ್ಲಿ ಪೊಲೀಸರು ಇಲ್ಲಿ ಹೆಚ್ಚು ಸಮಯ ಇರೋದು ಬೇಡ ಎಂದರು. ಅದರಂತೆ ನಾನು ಅಲ್ಲಿಂದ ಬರಲು ಮುಂದಾದೇ, ಆಗ ಗ್ರಾಮಕ್ಕೆ ಚಿರತೆ ಬಂದಂತೆ, ಹುಚ್ಚಿ ನಾಯಿಯನ್ನು ಹೊಡೆದಂತೆ, ಕಳ್ಳನನ್ನ ಅಟ್ಟಿಸಿಕೊಂಡು ಹೋಗಿ ಹೊಡೆದಂತೆ ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಾನೇ ಓಡಿ ಬಂದು ಕಾರಲ್ಲಿ ಕೂತೆ. ಎಲ್ಲರ ಕೈಯಲ್ಲೂ ದೊಣ್ಣೆ, ಕಲ್ಲುಗಳಿದ್ದವು. ಜೀಪಿನ ಮೇಲೆ ತುಂಬಾ ಕಲ್ಲು ಹೊಡೆದರು. ಅನಿವಾರ್ಯವಾಗಿ ನಾನು ಅಲ್ಲಿಂದ ಬಂದೇವು. ಇದು ನನಗೆ ಬಹಳ ಅವಮಾನವಾದಂತೆ ಅನ್ನಿಸುತ್ತಿದೆ.
ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ..
ಆದರೆ, ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿಯಾಗಿದೆ. ಬನಿಯನ್ ಇತ್ತು ಬಟ್ಟೆ ಹರಿದದ್ದು ಕಾಣಲಿಲ್ಲ, ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ದರೇ ಏನು ಮಾಡೋದು. ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ. ರಾಜಕೀಯವಾಗಿ ಮುಂದಿನ ಚುನಾವಣೆಗೆ ನಿಲ್ಲಬಾರದು ಅಂತ ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲಲೇಬಾರದು ಎಂಬ ಸಂಚು ಇದರ ಹಿಂದಿದೆ. ನನ್ನ ಮೂಲಕ ಎಲ್ಲಾ ಶಾಸಕರಿಗೂ ಸರ್ಕಾರ ಭದ್ರತೆ ನೀಡಬೇಕು. ನಾನು ಕಾಡು ಕಾಯಲ್ಲ, ಆನೆ ಸಾಕಿಲ್ಲ, ಸರ್ಕಾರಕ್ಕೆ ದೂರು ನೀಡಬಹುದು, ನೀಡುತ್ತೇನೆ. ಇಂದು ಹೋಗಿ ಎಲ್ಲರಿಗೂ ಸಾಂತ್ವನ ಹೇಳಿದ್ದೇನೆ. ಆನೆ ಸ್ಥಳಾಂತಕ್ಕೆ ನಾಳೆಯೇ ಕ್ರಮ ಕೈಗೊಳ್ಳುತ್ತೇವೆ, ಬೆಂಗಳೂರಿಗೆ ಹೋಗುತ್ತೇನೆ. ಅಲ್ಲದೇ ಈ ಬಗ್ಗೆ ವರಿಷ್ಠರು, ಸಿಎಂ, ಗೃಹ ಮಂತ್ರಿ ಗಮನಕ್ಕೆ ತರುತ್ತೇನೆ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ದೀಪಕ್ ದೊಡ್ಡಯ್ಯ ವಿರುದ್ದ ಗಂಭೀರ ಅರೋಪ..
ನನ್ನ ವಿರುದ್ಧ ಬಿ ಹೊಸಳ್ಳಿಯಲ್ಲಿ ಸ್ಟ್ರೈಕ್ ಮಾಡೋದು, ಶಾಸಕರು ಸರಿಯಿಲ್ಲ ಅಂತಾ ಹೇಳೋದು, ಆ ಮೂಲಕ ಜನರಿಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡ್ತಿದ್ದಾರೆ. ದೀಪಕ್ ದೊಡ್ಡಯ್ಯ ಯಾತಕ್ಕೂ ಬೇಡವಾದವ. ಫಾರೆಸ್ಟ್ ಅಫೀಸ್ ನಲ್ಲಿ ಪ್ರತಿಭಟನೆ ಮಾಡಿ ನನ್ನ ವಿರುದ್ದ ನಿಂತುಕೊಳ್ಳೋದು, ನಿನ್ನೆ ಹಗಲೇಲ್ಲ ನಿಂತು ಸರಿಯಿಲ್ಲ ಅಂದಿದ್ದಾರೆ ಅಂತಾ ಕೇಳ್ದೋರು ಹೇಳಿದ್ದಾರೆ. ಆತ ಗ್ರಾಮ ಪಂಚಾಯ್ತಿ ಮೆಂಬರ್ ಕೂಡ ಅಲ್ಲ. ಬೀದಿ ನಾಯಿಯೂ ಕೂಡ ಎಲ್ಲರೂ, ದಾರಿಯಲ್ಲಿ ಹೋಗೋರು ಟಿಕೆಟ್ ಕೇಳಬಹುದು. ನಿರಂತರವಾಗಿ ನನ್ನ ವಿರುದ್ಧ ಮಾತನಾಡಿಕೊಂಡು ಬಂದಿದ್ದಾರೆ ಅನ್ನೋದು ಗೊತ್ತಾಗಿದೆ. ಈ ಬಗ್ಗೆ ವರಿಷ್ಠರಿಗೆ ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post