ಗುಜರಾತ್ ಚುನಾವಣೆ ಸಮೀಪಿಸ್ತಿದ್ದಂತೆ ಪ್ರಚಾರದ ರಂಗು ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ನಾಯಕರು, ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ. ಇದರ ಮಧ್ಯೆ, ಪ್ರಧಾನಿ ಮೋದಿ, ತವರು ರಾಜ್ಯದಲ್ಲಿ 3 ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಗುಜರಾತ್ ಪ್ರಚಾರದ ಯುದ್ಧಕ್ಕೆ ಧುಮುಕಿದ ‘ನಮೋ’
ಗುಜರಾತ್ ಚುನಾವಣಾ ರಂಗಿನ ರಾಜಕೀಯದ ಭರಾಟೆ ಜೋರಾಗಿದೆ. ಅತಿರಥ ಮಹಾರಥರು ಪ್ರಚಾರ ಯುದ್ಧದ ಅಖಾಡಕ್ಕೆ ಧುಮುಕಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಕೂಡ, ಮೂರು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದಾರೆ. ಆದ್ರೆ ಪ್ರಚಾರ ಕದನಕ್ಕೂ ಮುನ್ನವೇ ನಮೋ, ಬೋಲೇನಾಥನ ದರ್ಶನ ಪಡೆದ್ದಾರೆ.. ಶಿವಪ್ಪನ ಪರಮ ಭಕ್ತನಾಗಿರೋ ಮೋದಿ ಅವರು, ಗೀರ್ ಸೋಮನಾಥ್ನಲ್ಲಿರುವ ಸೋಮನಾಥ ಸನ್ನಿಧಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸೋಮನಾಥನಿಗೆ ರುದ್ರಾಭಿಷೇಕ. ಮಂತ್ರ ಜಪಿಸಿದ ‘ನಮೋ’
ಯಾವುದೇ ಶುಭ ಕಾರ್ಯ ಮಾಡಬೇಕಾದ್ರೂ ಪ್ರಧಾನಿ ಮೋದಿ, ಶಿವಪ್ಪನ ದರ್ಶನ ಪಡೆಯೋದು ವಿಶೇಷ. 2017 ಮತ್ತು 2019ರಲ್ಲೂ ಸೋಮನಾಥನ ಸನ್ನಿಧಿಗೆ ಹೋಗಿದ್ದ ನಮೋ, ಇವತ್ತೂ ಕೂಡ ಬೋಲೇನಾಥನ ದರ್ಶನ ಪಡೆದಿದ್ದಾರೆ. ಶಾಸ್ತ್ರೋಕ್ತವಾಗಿ ಪೂಜೆ ಕೂಡ ಸಲ್ಲಿಸಿದ್ದಾರೆ. ಬಾಬಾ ಬೋಲೇನಾಥದ ದರ್ಶನ ಪಡೆದ ಪ್ರಧಾನಿ, ಪ್ರಚಾರದ ಅಖಾಡಕ್ಕಿಳಿದ್ರು. ಗಿರ್ ಸೋಮನಾಥ ಜಿಲ್ಲೆಯ ವರೇವಲ್ ಪಟ್ಟಣದಲ್ಲಿ ಮೋದಿ ಬಹಿರಂಗ ಸಮಾವೇಶ ನಡೆಸಿದ್ರು. ಸೋಮನಾಥನ ಜನತೆಗೆ ಮುಂದೆ ಗುಜರಾತಿಯಲ್ಲೇ ನಾಲ್ಕೈದು ಮಾತನಾಡಿದ್ರು. ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ರು. ಇದೇ ವೇಳೆ, ತಪ್ಪದೇ ಬಿಜೆಪಿಗೆ ಮತಹಾಕಿ, ಕಮಲವನ್ನ ಮತ್ತೊಮ್ಮೆ ಅರಳಿಸಿ ಅಂತಾನೂ ಮನವಿ ಮಾಡಿದ್ರು. ಇದಾದ ಬಳಿಕ, ಗುಜರಾತ್ನ ಸೌರಾಷ್ಟ್ರ ಭಾಗದಲ್ಲಿ ಮತ ಬೇಟೆಯಾಡಿದ್ರು. ಧೋರಾರ್ಜಿ, ಅಮ್ರೇಲಿ ಮತ್ತು ಬೊಟಾಡ್ ಕ್ಷೇತ್ರದಲ್ಲೂ ಸರಣಿ ಸಮಾವೇಶ ನಡೆಸಿದ್ರು.
ಒಟ್ಟು 182 ಕ್ಷೇತ್ರಗಳ ಪೈಕಿ ಸೌರಾಷ್ಟ್ರ ಭಾಗದಲ್ಲಿ ಅತೀ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನ ಒಳಗೊಂಡಿದೆ. ಹೀಗಾಗಿ ಈ ಭಾಗವನ್ನೇ ಹೆಚ್ಚು ಕೇಂದ್ರೀಕರಿಸಿರೋ ಕಮಲ ಪಡೆ, ಬ್ಯಾಕ್ ಟು ಬ್ಯಾಕ್ ಸಮಾವೇಶಗಳನ್ನ ನಡೆಸ್ತಿದೆ. ಅಮಿತ್ ಶಾ, ಜೆ,ಪಿ ನಡ್ಡಾ, ಸಿಎಂ ಭೂಪೇಂದ್ರ ಪಟೇಲ್ ಸೇರಿ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಮೂರು ದಿನಗಳ ಪ್ರಚಾಸದಲ್ಲಿ ಮೋದಿ, ಸೌರಾಷ್ಟ್ರ ಕಡೆ ಮುಖ ಮಾಡಿದ್ದಾರೆ.
ಡಿಸೆಂಬರ್ 1 ಮತ್ತು 5 ರಂದು, 2 ಹಂತದಲ್ಲಿ ಗುಜರಾತ್ ಚುನಾವಣೆ ನಡೆಯಲಿದೆ. ಬರೋಬ್ಬರಿ 182 ಕ್ಷೇತ್ರಗಳಿಗೆ ಎಲೆಕ್ಷನ್ ನಡೀತಿದೆ. ಡಿಸೆಂಬರ್ 8 ರಂದು ಫಲಿತಾಂಶ ಹೊರ ಬೀಳಲಿದೆ. ಅದಕ್ಕೂ ಮುನ್ನ ರಾಜಕೀಯ ನಾಯಕರು, ಗುಜರಾತ್ನಲ್ಲಿ ಪ್ರಚಾರದ ಕಣಕ್ಕೆ ದಂಡೆತ್ತಿ ದಾಳಿ ಮಾಡಿದ್ದಾರೆ ಮತಕ್ಕಾಗಿ ರಣಬೇಟೆಯಾಡ್ತಿದ್ದಾರೆ. ಸದ್ಯ ಬಿಜೆಪಿ ಫೈರ್ ಬ್ರ್ಯಾಂಡ್ ಮೋದಿ ಕೂಡ ತವರು ರಾಜ್ಯದಲ್ಲಿ ಪ್ರಚಾರದ ಯುದ್ಧಕ್ಕಿಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post