ಶಿವಮೊಗ್ಗ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯು ಬಹಳಷ್ಟು ಸಾವು-ನೋವು ಉಂಟು ಮಾಡಲು ಹೋಗ್ತಿದ್ದ ಎಂದು ತೀರ್ಥಹಳ್ಳಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಆಟೋದಲ್ಲಿ ಬ್ಲಾಸ್ಟ್ ಆದಾಗ ಎಲ್ಲರೂ ಸಿಲಿಂಡರ್ ಬ್ಲಾಸ್ಟ್ ಆಗಿದೆ ಅಂದ್ಕೊಂಡಿದ್ರು. ಆರೋಪಿ ಬಹಳಷ್ಟು ಸಾವು-ನೋವು ಉಂಟು ಮಾಡುವ ಕೆಲಸಕ್ಕೆ ಕೈಹಾಕಿದ್ದ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆರೋಪಿಯೂ ಗಾಯಗೊಂಡಿದ್ದಾನೆ. ಆತ ಮಾತನಾಡಿದ್ರೆ ಇದರ ಹಿಂದಿರುವ ಜಾಲ ಯಾವುದು ಎಂದು ತಿಳಿಯುತ್ತದೆ ಎಂದಿದ್ದಾರೆ.
ತೀರ್ಥಹಳ್ಳಿಯ ಕೆಲ ಮನೆಗಳ ಮೇಲೆ ಪೊಲೀಸರು ದಾಳಿ
ಪೊಲೀಸರ ತನಿಖೆಯಿಂದ ಆರೋಪಿ ತೀರ್ಥಹಳ್ಳಿ ಮೂಲದ ಶಾರೀಖ್ ಎಂದು ಗೊತ್ತಾಗಿದೆ. ಹೀಗಾಗಿ ತೀರ್ಥಹಳ್ಳಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಶಾರೀಖ್ ಜೊತೆ ಸಂಪರ್ಕ ಹೊಂದಿದ್ದರು ಎಂಬ ಅನುಮಾನದ ಮೇಲೆ ಕೆಲವು ಮನೆಗಳ ಮೇಲೆ ದಾಳಿ ನಡೆದಿದೆ. ದೇಶದಲ್ಲಿ ರಕ್ತ ಹರಿಸುವ, ಹತ್ಯೆ ಮಾಡುವ ಕೆಲಸ ಮೋದಿ ಸರ್ಕಾರ ಬಂದ ಮೇಲೆ ಎಲ್ಲ ನಿಂತು ಹೋಗಿದೆ. ಇದರಿಂದ ಅಮೂಲಾಗ್ರವಾಗಿ ಇದರ ಬೇರುಗಳನ್ನು ಕಿತ್ತು ಹಾಕುವ ಕೆಲಸವನ್ನ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.
ತುಂಗಾನದಿ ಟ್ರಯಲ್ ಬ್ಲಾಸ್ಟ್ಗೂ ಮಂಗಳೂರಿಗೂ ಲಿಂಕ್..!
ಸ್ಫೋಟವಾದ ನಂತರ ಮಂಗಳೂರಿಗೆ ಕೇಂದ್ರ ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಶಾರೀಖ್, ಹುಬ್ಬಳ್ಳಿಯಲ್ಲಿದ್ದ. ಅಲ್ಲಿ ಆಧಾರ್ಕಾರ್ಡ್ ಕಳತನ ಮಾಡಿ ಮೈಸೂರಿನಲ್ಲಿ ವಾಸವಿದ್ದ. ಹೀಗಾಗಿ ಪೊಲೀಸರು 2 ಕಡೆ ದಾಳಿ ಮಾಡಿದ್ದಾರೆ. ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ತುಂಗಾನದಿ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ಗೂ ಲಿಂಕ್ ಇದೆ. ಈ 2ರ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಏನೇ ಆದರೂ ಇಂತಹ ಘಟನೆಯ ಹುಟ್ಟಡಗಿಸುವ ಕೆಲಸವನ್ನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಾಡ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post