ಪಾರು ಧಾರಾವಾಹಿಯ ಪ್ರೀತಮ್ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ಸಿದ್ದು ಮೂಲಿಮನಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಖ್ಯಾತಿಯ ಅದಿತಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ನಟಿ ಪ್ರೀಯಾ ಆಚಾರ್ ಜೊತೆ ಹೊಸ ಲೈಫ್ನ ಕನಸು ಕಾಣುತ್ತಿದ್ದಾರೆ.
ಸೀರಿಯಲ್ನಿಂದ ಬೆಳ್ಳಿತೆರೆಗೆ ಕಾಲಿಟ್ಟ ಈ ಜೋಡಿ ಸಖತ್ ಫೇಮಸ್ ಆಯ್ತು. ಕಿರುತೆರೆಯಿಂದ ಬೆಳೆದ ಸ್ನೇಹದಲ್ಲಿ ಪ್ರೀತಿಯ ಮೊಗ್ಗರಳಿದೆ. ಇಬ್ಬರ ಪ್ರೀತಿಗೂ ಗುರುಹಿರಿಯರ ಆಶೀರ್ವಾದ ಸಿಕ್ಕಿದೆ. ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಆಗಿ ಸಿದ್ದು-ಪ್ರೀಯಾ ನಿಶ್ಚಿತಾರ್ಥ ನೆರವೇರಿದೆ.
ಸದ್ಯ ಪ್ರೀಯಾ ಆಚಾರ್ ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದು, ಸಿದ್ದು ಕೂಡ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಇಬ್ಬರ ನಿಶ್ಚಿತಾರ್ಥ ಸಮಾರಂಭದಲ್ಲಿ ಕನ್ನಡದ ನಟ ನಟಿಯರು ಭಾಗಿಯಾಗಿದ್ದರು. ಹಲವರು ಭಾಗಿಯಾಗಿ ಆಶೀರ್ವದಿಸಿದ್ದಾರೆ. ಈ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಮುದ್ದು ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post