ಆ್ಯಪಲ್ ಸ್ಟೋರ್ಗೆ ಕಾರು ನುಗ್ಗಿ ಒಬ್ಬರು ಸಾವನ್ನಪ್ಪಿ 16 ಜನ ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕದ ಮ್ಯಾಸಚೂಸೆಟ್ಸ್ನ (Massachusetts) ಬೋಸ್ಟಾನ್ನಲ್ಲಿ ನಡೆದಿದೆ.
ವೇಗವಾಗಿ ಬಂದ ಬ್ಲ್ಯಾಕ್ ಕಲರ್ ಎಸ್ಯುವಿ ಕಾರ್ ಆ್ಯಪಲ್ ಸ್ಟೋರ್ನ ಗ್ಲಾಸ್ ವಿಂಡೋವನ್ನು ಹೊಡೆದು ಒಳ ನುಗ್ಗಿದೆ. ಸ್ಟೋರ್ ಒಳಗೆ ನುಗ್ಗಿದ ಕಾರು ಅಲ್ಲಿದ್ದ ಜನರ ಮೇಲೆ ಹರಿದಿದೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರು ಫುಲ್ ಡ್ಯಾಮೇಜ್
ಕಾರು ಡಿಕ್ಕಿ ಹೊಡೆದ ಪರಿಣಾಮ ಆ್ಯಪಲ್ ಸ್ಫೋರ್ ಧ್ವಂಸವಾಗಿದೆ. ಕಾರು ಕೂಡ ಸಂಪೂರ್ಣವಾಗಿ ಜಖಂ ಆಗಿದೆ. ಈಗೀಗ ಇಂತಹ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಕಾರು ಡ್ರೈವರ್ನನ್ನ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post