ಕರಾವಳಿ ಜನರಿಗೆ ಕಳವಳ ಸೃಷ್ಠಿಸಿದ್ದ ಆಟೋ ಬಾಂಬ್ ಸ್ಫೋಟ ಇದೀಗ ಅರಮನೆ ನಗರಿ ಮೈಸೂರಿನಲ್ಲೂ ಆತಂಕ ಮೂಡಿಸಿದೆ. ಮಾತನಾಡದೇ ಮೂಕನಂತೆ ಕೈಸನ್ನೇ ಮಾಡ್ತಿರೋ ಶಾರೀಖ್ನ ಬ್ಯಾಗ್ರೌಂಡ್ ಕಹಾನಿ ಜನರನ್ನೇ ಮೂಖರನ್ನಾಗಿಸಿದೆ.. ಭೀತಿಗೂ ಕಾರಣವಾಗಿದೆ. ಮೊಬೈಲ್ ರಿಪೇರಿ, ಕುಕ್ಕರ್ ತಯಾರಿ..ಶಾರೀಖ್ನ ಹಿಸ್ಟರಿ ಬೇರೆಯದ್ದೇ ಕತೆ ಹೇಳಹೊರಟಿದೆ.
ಅಂದು ಕೈನಲ್ಲಿ ಕುಕ್ಕರ್ ಹಿಡಿದು ಶಾರೀಖ್ ಪೋಸ್
ಬ್ಲಾಸ್ಟ್ಗೂ ಮುನ್ನ ಕುಕ್ಕರ್ ಹಿಡಿದು ಥೇಟ್ ಐಸಿಸ್ ಉಗ್ರರ ಮಾದರಿಯಲ್ಲಿ ಶಾರೀಖ್ ಪೋಸ್ ಕೊಟ್ಟಿದ್ದ.. ಆದ್ರೆ, ಇಂದು ಅದೇ ಕುಕ್ಕರ್ನಿಂದ ಬೆಂದು ಶಾರೀಖ್ ಆಸ್ಪತ್ರೆ ಪಾಲಾಗಿದ್ದಾನೆ. ಮಂಗಳೂರಿನ ಆಟೋಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿರೋ ಶಾರೀಖ್ ನಂಟು ಇದೀಗ ಅರಮನೆ ನಗರಿ ಮೈಸೂರಿಗೆ ಬೆಸೆದುಕೊಂಡಿದೆ..
ಕುಕ್ಕರ್ ಬ್ಲಾಸ್ಟ್ಗೆ ಖತರ್ನಾಕ್ ತಲೆ ಉಪಯೋಗಿಸಿದ್ದ ಈ ಶಾರೀಖ್ಗೆ ಮೊದಲು ಐಡಿಯಾ ಬಂದಿದ್ದು ಹೇಗೆ ಅನ್ನೋ ಪ್ರಶ್ನೆಗೆ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್ ತೆರೆದಿಟ್ಟ ಸತ್ಯ ದಿಗ್ಭ್ರಮೆ ಹುಟ್ಟಿಸಿದೆ.. ಮೊಬೈಲ್ ರಿಪೇರಿ ಕಲಿಯೋ ಸೋಗಿನಲ್ಲಿ ಈತ ರಕ್ತ ಚರಿತ್ರೆ ಬರಿಯೋಕೆ ಪ್ಲಾನ್ ಮಾಡಿದ್ದ. ಕುಕ್ಕರ್ ಬಾಂಬ್ ತಯಾರಿಗೆ ಶಾರೀಖ್ ಮೊಬೈಲ್ ರೀಪೇರಿ ಕಲಿಯೋ ಸೋಗಿನಲ್ಲಿ ಅಣಿಯಾಗಿದ್ದ ಅನ್ನೋ ಸತ್ಯ ಹೊರಬಿದ್ದಿದೆ.. ಶಾರೀಖ್ ಸಂಪರ್ಕದಲ್ಲಿದ್ದ ಸಯ್ಯದ್ ಅಹಮದ್ ವಾಸವಿದ್ದ ಮನೆಯಲ್ಲಿ ಮೈಸೂರಿನ ಶ್ರೀ ಮಲೈ ಮಹದೇಶ್ವರ ಇನ್ಸ್ಟಿಟ್ಯೂಟ್ ಆಫ್ ಸರ್ವಿಸಿಂಗ್ನ ಸರ್ಟಿಫಿಕೇಟ್ ಪತ್ತೆಯಾಗಿದೆ.
ಪ್ರೇಮ್ ರಾಜ್ ಆಗಿ ಬದಲಾಗಿದ್ದ ಶಾರೀಖ್
ಮಲೈಮಹದೇಶ್ವರ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್ನಲ್ಲಿ ಟ್ರೈನಿಂಗ್ ಪಡೆದಿದ್ದ ಶಾರೀಖ್ ಪಕ್ಕ ಹಿಂದೂವಿನಂತೆ ಆ್ಯಕ್ಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಬುಟ್ಟಿಗೆ ಬೀಳಿಸಿಕೊಂಡಿದ್ದ.. ಪ್ರೇಮ್ ರಾಜ್ ಹೆಸರಿನಲ್ಲೇ ದಾಖಲೆಗಳನ್ನ ನೀಡಿದ್ದ ಶಾರೀಖ್, ಪ್ರೇಮ್ ರಾಜ್ ಎಂಬ ಹೆಸರಿನಲ್ಲೇ ಸಹಿ ಸಹ ಮಾಡ್ತಿದ್ದ.
ತನ್ನ ಕಣ್ಣುಗಳಿಂದ ವಿಚಿತ್ರವಾಗಿ ನೋಡುತ್ತಿದ್ದ. ಆಗ ನಾನು ಪ್ರಶ್ನೆ ಮಾಡಿದಾಗ, ಏನೂ ಇಲ್ಲ ಸರ್ ಎಂದು ಹೇಳುತ್ತಿದ್ದ. ಬೇರೆಯೆಲ್ಲಾ ಸಾಮಾನ್ಯ ಜನರಂತೆ ವರ್ತಿಸುತ್ತಿದ್ದ. ಹೆಸರನ್ನ ಪ್ರೇಮ್ರಾಜ್ ಎಂದೇ ಹೇಳಿಕೊಂಡಿದ್ದ. ನಾವು ಕೂಡ ಅವನನ್ನ ಪ್ರೇಮ್ರಾಜ್ ಎಂದೇ ಕರೆಯುತ್ತಿದ್ದೇವು. ಆತ ಎಲ್ಲಿಯೂ ಕೂಡ ಮುಸ್ಲಿಂ ಎಂದು ಹೇಳಿಕೊಂಡಿರಲಿಲ್ಲ
ಪ್ರಸಾದ್, ಟ್ರೈನಿಂಗ್ ಸೆಂಟರ್ ಮಾಲೀಕ
ಸಯ್ಯದ್ ಸಂಪರ್ಕದಲ್ಲಿದ್ದ ಮೂವರು ಅಂದರ್
ಯಾವಾಗ ಈ ಶಾರೀಖ್ ಟ್ರೈನಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತೋ ಆಗಲೇ ಪೊಲೀಸರು ಆತನ ಸಂಪರ್ಕದಲ್ಲಿದ ಮೂವರನ್ನ ವಶಕ್ಕೆ ಪಡೆದಿದ್ದಾರೆ.. ಇತನೊಂದಿಗೆ ಟ್ರೈನಿಂಗ್ ಪಡೆದಿದ್ದ ಸಯ್ಯದ್ ಅಹಮದ್, ಮನೆ ಮಾಲೀಕ ಮೋಹನ್ ಕುಮಾರ್ ಹಾಗೂ ಮಹಮ್ಮದ್ ರುಹುಲ್ಲಾ ಎಂಬಾತನನ್ನ ವಶಕ್ಕೆ ಪಡದಿರೋ ಪೊಲೀಸರು ಶಾರಿಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನೊಂದೆಡೆ ಮಂಗಳೂರಿನ ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ ಬೊಮ್ಮಾಯಿ, ತನಿಖೆ ಚುರುಕುಗೊಂಡಿದೆ.. ಹಳೆಯ ಕೇಸ್ಗಳು ಹಾಗೂ ಆತನ ಸಂಪರ್ಕ ಜಾಲ ಹಿಡಿದು ತನಿಖೆ ನಡೀತಿದೆ.. ಆತನಿಗೆ ಗಂಟಲಲ್ಲಿ ಟ್ಯೂಬ್ ಹಾಕಿದಾರೆ, ಹೀಗಾಗಿ ಮಾತಾಡಕ್ಕಾಗ್ತಿಲ್ಲ ಅಂತ ತಿಳಿಸಿದ್ದಾರೆ.
ಶಂಕಿತನಿಗೆ ಆರೋಗ್ಯದಲ್ಲಿ ತೊಂದರೆ ಆಗಿದೆ. ಆತನ ಕುಟುಂಬಸ್ಥರು ಅಲ್ಲಿಗೆ ಬಂದು ಗುರುತಿಸಿರೋದು ಪ್ರಮುಖವಾದ ಬೆಳವಣಿಗೆ. ಈ ಎಲ್ಲಾ ಮಾಹಿತಿಯನ್ನ ಎನ್ಐಗೆ ನೀಡಿದ್ದೇವೆ. ಎಲ್ಲರೂ ತನಿಖೆಯನ್ನ ಆರಂಭಿಸಿದ್ದಾರೆ. ಪ್ರಮುಖವಾಗಿ ಆಗಬೇಕಾಗಿರೋದು ಎರಡು ವಿಚಾರ. ಈ ರೀತಿಯ ಕೃತ್ಯ ಇದೊಂದು ಕಡೆ ಮಾತ್ರನಾ? ಅಥವಾ ಹಲವಾರು ಕಡೆ ಮಾಡಲಾಗಿದ್ಯಾ ಅನ್ನೋದು. ಇನ್ನೊಂದು ಆತನ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನೋದು.
ಬಸವರಾಜ್ ಬೊಮ್ಮಾಯಿ, ಸಿಎಂ
ಸರ್ಕಾರ ವಿಫಲ ಎಂದ ಸಿದ್ದರಾಮಯ್ಯಗೆ ಸಿಎಂ ತಿರುಗೇಟು
ಆಟೋ ಬ್ಲಾಸ್ಟ್ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಅನ್ನೋ ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ತಿರುಗೇಟು ನೀಡಿದ್ರು. ಎಲ್ಲದಕ್ಕೂ ಕಾನೂನು ಸುವ್ಯವಸ್ಥೆ ವಿಫಲ ಎನ್ನುವುದು ರಾಜಕೀಯ ಪ್ರೇರಿತ ಅಂತ ಕಿಡಿಕಾರಿದ್ರು.
ಒಟ್ನಲ್ಲಿ ಕರಾವಳಿಯಲ್ಲಿ ಸಿಡಿದ ಕುಕ್ಕರ್ ಮೈಸೂರಿನಲ್ಲೂ ವಿಶಲ್ ಹೊಡಿತಾ ಇರೋದು ನಿಜಕ್ಕೂ ಕರುನಾಡಿಗೆ ದೊಡ್ಡ ಆತಂಕ ಮೂಡಿಸಿದೆ.. ಬಗಲ್ ಮೆ ದುಶ್ಮನ್ ಅನ್ನೋ ಹಾಗೇ ನಮ್ಮ ಮಧ್ಯಯೇ ಇದ್ದು ನಮ್ಮ ನಾಡಿನ ಶಾಂತಿ ಕದಡೋಕೆ ಕೆಲವು ದುಷ್ಟ ಶಕ್ತಿಗಳು ಸ್ಕೆಚ್ ಹಾಕ್ತಿದ್ದಾರೆ ಅನ್ನೋ ಸತ್ಯ ಈ ಪ್ರಕರಣದ ಮೂಲಕ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post