ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಶಂಕಿತನನ್ನ ಬೆಂಗಳೂರಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಓರ್ವ ಶಂಕಿತ ವ್ಯಕ್ತಿ ನಿಮ್ಮ ಭಾಗದಲ್ಲಿದ್ದಾನೆ. ಅವನನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದರು. ಅದರಂತೆ ಆತನನ್ನ ನಾವು ವಶಕ್ಕೆ ಪಡೆದುಕೊಂಡಿದ್ದೇವೆ ಎಂದಿದ್ದಾರೆ.
ಮಂಗಳೂರು ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ನಮ್ಮ ಪೊಲೀಸರ ತಂಡ 3 ಗಂಟೆಯೊಳಗೆ ಶಂಕಿತ ಮೊಹಮದ್ ರುಹುಲ್ಲಾನನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ ಅವನನ್ನ ವಿಚಾರಣೆ ಮಾಡಲಾಗಿದೆ. ಈ ವೇಳೆ ಸಂಬಂಧಿಕರ ಎಂಗೇಜ್ಮೆಂಟ್ ಇದ್ದ ಕಾರಣ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದಿದ್ದಾನೆ ಹೀಗಾಗಿ ಇವರ ಮನೆಯನ್ನು ಸರ್ಚ್ ಮಾಡಲು ಮೈಸೂರಿಗೆ ಹೋಗಬೇಕು. ರುಹುಲ್ಲಾನನ್ನ ಕರೆದುಕೊಂಡು ಹೋಗಲು ಮೈಸೂರು ಪೊಲೀಸರು ಬರ್ತಿದ್ದಾರೆ ಎಂದರು. ಹೀಗಾಗಿ ರುಹುಲ್ಲಾನನ್ನ ಮೈಸೂರು ಪೊಲೀಸರಿಗೆ ಹ್ಯಾಂಡ್ ಓವರ್ ಮಾಡಿದ್ದೀವಿ ಎಂದರು.
ಶಂಕಿತನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ..!
ಶಂಕಿತ ರುಹುಲ್ಲಾನ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ವಶಕ್ಕೆ ಪಡೆಯಿರಿ ಎಂದಿದ್ದರು ಅಷ್ಟೇ. ಅದರಂತೆ ಅವರನ್ನ ಮೈಸೂರು ಪೊಲೀಸರಿಗೆ ಒಪ್ಪಿಸಿದ್ದೇವೆ. ಪ್ರಕರಣದಲ್ಲಿ ಅವರು ಭಾಗಿಯಾಗಿರುವುದಕ್ಕೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post