ಕನ್ನಡಕ್ಕೆ ಒಬ್ಬರೆ ಕ್ರೇಜಿಸ್ಟಾರ್. ಇದನ್ನ ಇಡೀ ಇಂಡಸ್ಟ್ರಿ ಹೇಳುತ್ತೆ. ರವಿಚಂದ್ರನ್ ಕೂಡ ಅದುನ್ನೇ ಹೇಳ್ತಾರೆ. ಆದ್ರೀಗ ರೇಮೊ ಚಿತ್ರದ ಹೀರೋ ನೋಡಿದ ಕನಸುಗಾರ ಇವರ ಕ್ರೇಜಿಸ್ಟಾರ್ಗಿಂತ ಜಾಸ್ತಿ ಅಂತ ಮೆಚ್ಚಿ ಕೊಂಡಾಡಿದ್ದಾರೆ. ‘ರೋಗ್’ ಚಿತ್ರದ ನಂತರ ನಟ ಇಶಾನ್ ಮಾಡ್ತಿರೋ ಎರಡನೇ ಸಿನಿಮಾ ರೇಮೊ.
ಇದನ್ನು ಓದಿ: ರೇಮೊ ಬಳಿಕ ಇಶಾನ್ಗೆ ಭಾರೀ ಡಿಮ್ಯಾಂಡ್.. ಸ್ಟಾರ್ ನಿರ್ದೇಶಕರಿಂದ ಬಿಗ್ ಆಫರ್
ಪವನ್ ಒಡೆಯರ್ ನಿರ್ದೇಶನ ಮಾಡಿ ಸಿಆರ್ ಮನೋಹರ್ ನಿರ್ಮಾಣ ಮಾಡಿರೋ ಚಿತ್ರ. ಸದ್ಯ ಟ್ರೇಲರ್ ಮತ್ತು ಸಾಂಗ್ಸ್ ರಿಲೀಸ್ ಮಾಡಿ ಅಟೆನ್ಷನ್ ಕ್ರಿಯೇಟ್ ಮಾಡಿರೋ ರೇಮೊ ಇದೇ ವಾರ ತೆರೆಗೆ ಬರ್ತಿದೆ. ಇಶಾನ್ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದು, ರೇವಂತ್ ಮತ್ತು ಮೋಹನನ ಲವ್ ಸ್ಟೋರಿ ಸಖತ್ ಕ್ಯೂರಿಯಸ್ ಆಗಿದೆ.
ಇಷ್ಟು ದಿನ ಹಿಂದಿ, ತೆಲುಗಿನಲ್ಲಿ ರಾಕ್ಸ್ಟಾರ್ ಕಥೆಗಳನ್ನ ನೋಡ್ತಿದ್ದ ಸ್ಯಾಂಡಲ್ವುಡ್ ಮಂದಿಗೆ ರೇಮೊ ಹೊಸ ಮನರಂಜನೆಯಾಗಲಿದೆ. ಬೆಂಗಳೂರಿನಲ್ಲಿ ರೇಮೊ ಚಿತ್ರದ ಪ್ರಿ-ರಿಲೀಸ್ ಇವೆಂಟ್ ನಡೆಯಿತು. ಸ್ಯಾಂಡಲ್ವುಡ್ನ ತಾರೆಯರ ಜೊತೆ ಘಟಾನುಘಟಿ ರಾಜಕಾರಣಿಗಳು ಈ ಕಾರ್ಯಕ್ರಮದ ಹೈಲೈಟ್ಸ್. ಡಿಕೆ ಶಿವಕುಮಾರ್, ಚೆಲುವರಾಯಸ್ವಾಮಿ, ಧ್ರುವ್ ನಾರಾಯಣ್ ಸೇರಿ ತುಂಬಾ ಜನ ಪೊಲಿಟಿಶಿಯನ್ ರೇಮೊ ಟೀಂಗೆ ಸಾಥ್ ಕೊಟ್ಟರು.
ಸ್ಯಾಂಡಲ್ವುಡ್ಗೆ ಮತ್ತೊಬ್ಬ ಕ್ರೇಜಿಸ್ಟಾರ್ ಆಗ್ತಾರಾ ಇಶಾನ್?
ರೇಮೊ ಹೀರೋ ಟ್ಯಾಲೆಂಟ್ಗೆ ಫಿದಾ ಆದ ಕನಸುಗಾರ!
ರೇಮೊ ಇವೆಂಟ್ನ ಮೇನ್ ಹೈಲೈಟ್ ಕ್ರೇಜಿಸ್ಟಾರ್ ರವಿಚಂದ್ರನ್. ಸಿಆರ್ ಮನೋಹರ್ ಅವರ ಸಿನಿಮಾ ಪ್ಯಾಶನ್, ನಿರ್ದೇಶಕ ಪವನ್ ಒಡೆಯರ್ ಅವರ ಡೆಡಿಕೇಶನ್ ಜೊತೆ ರೇಮೊ ಹೀರೋ ಇಶಾನ್ ಟ್ಯಾಲೆಂಟ್ಗೆ ಬಿಗ್ ಅಪ್ಲಾಸ್ ಸಿಕ್ಕಿದ್ದು ವಿಶೇಷ. ರಾಕ್ಸ್ಟಾರ್ ಇಶಾನ್ನ ನೋಡಿ ಎಲ್ಲರೂ ಕ್ರೇಜಿಸ್ಟಾರ್ ಅಂತಿದ್ರೆ ಕ್ರೇಜಿಸ್ಟಾರ್ ಮಾತ್ರ ಇಶಾನ್ ಕ್ರೇಜಿಸ್ಟಾರ್ ಅಲ್ಲ ಅದಕ್ಕಿಂತ ಜಾಸ್ತಿ ಅಂದ್ರು. ಇನ್ನು ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ಗೆಲುವಿನ ಬಗ್ಗೆ ಮಾತಾಡಿದ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಈಗ ಗಜಕೇಸರಿ ಯೋಗ ಅಂದ್ರು.
ಇಶಾನ್ ಮತ್ತು ಆಶಿಕಾ ಕಾಂಬಿನೇಷನ್ ತುಂಬಾ ಚೆನ್ನಾಗಿ ಕಾಣ್ತಿದ್ದು, ತೆರೆ ಮೇಲೆ ಕೂಡ ಈ ಜೋಡಿ ಪವನ್ ಒಡೆಯರ್ ಡೈರೆಕ್ಷನ್, ಅರ್ಜುನ್ ಜನ್ಯಾ ಮ್ಯೂಸಿಕ್, ವೈದಿ ಕ್ಯಾಮೆರಾವರ್ಕ್ ಸಿನಿಮಾನ ಇನ್ನಷ್ಟು ಗ್ರ್ಯಾಂಡ್ ಆಗಿಸಿದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಸಖತ್ ರಿಚ್ ಆಗಿ ತಯಾರಾಗಿರುವ ರೇಮೊ ಇದೇ ವಾರ ಚಿತ್ರಮಂದಿರಕ್ಕೆ ಬರ್ತಿದ್ದು, ಸ್ಯಾಂಡಲ್ವುಡ್ ಸಿನಿಮಾ ಪ್ರೇಮಿಗಳ ಆಶೀರ್ವಾದ ಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post