ಮತದಾರರ ಮಾಹಿತಿ ಕಳ್ಳತನ ಆರೋಪದ ಕಿಂಗ್ ಪಿನ್, ಚಿಲುಮೆ ಚಮತ್ಕಾರದ ಮಾಸ್ಟರ್ ಮೈಂಡ್ ರವಿಕುಮಾರ್ ಅಲಿಯಾಸ್ ಡಾಟಾ ರವಿಯನ್ನು ಹಲಸೂರು ಗೇಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತನ ಬಂಧನ ಬಳಿಕ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬೀಳ್ತಿವೆ. ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದಂತೆ, ಕೊನೆಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಸರ್ಕಾರವೂ ಅಲರ್ಟ್ ಆಗಿದೆ. ತನಿಖೆಯೂ ಬಿರುಸಾಗಿದೆ.
ಚುನಾವಣಾ ಹೊತ್ತಲ್ಲೇ ಸ್ಫೋಟಗೊಂಡಿರೋ ಚಿಲುಮೆ ಚಮತ್ಕಾರ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಅಲೆಯನ್ನೇ ಎಬ್ಬಿಸಿದೆ. ಚಿಲುಮೆ ಹೆಸರಲ್ಲಿ ಮತದಾರರ ಮಾಹಿತಿಯೊಂದಿಗೆ ಚೆಲ್ಲಾಟ ಆಡುತ್ತಾ, ಹಣದಾಟಕ್ಕೂ ಸ್ಕೆಚ್ ಹಾಕಿದ್ದ ರವಿಕುಮಾರ್ ಅಲಿಯಾಸ್ ಡಾಟಾ ರವಿಯನ್ನ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಪೊಲೀಸರ ಚಕ್ರವ್ಯೂಹಕ್ಕೆ ಸಿಲುಕಿರೋ ಚಿಲುಮೆಯ ಸೂತ್ರದಾರನಿಗೆ ಪೊಲೀಸ್ ಕಸ್ಟಡಿಯೇ ಗಟ್ಟಿಯಾಗಿದೆ.
ಇದನ್ನೂ ಓದಿ: ‘ಚಿಲುಮೆ’ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಕಸ್ಟಡಿಗೆ ಡಾಟಾ ರವಿ
ವೋಟರ್ ಐಡಿ ಮಾಹಿತಿ ಕಳ್ಳತನದ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ನನ್ನ ನಿನ್ನೆ ಬೆಂಗಳೂರಿನ ನಾಲ್ಕನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಪ್ರಮುಖ ಆರೋಪಿ ರವಿಕುಮಾರ್ರನ್ನ ಡಿಸೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಈತನ ಜೊತೆ ಸಹೋದರ ಕೆಂಪೇಗೌಡ, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಪ್ರಜ್ವಲ್ನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಒಟ್ಟು ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ತಮ್ಮ ಕಸ್ಟಡಿಗೆ ಸಿಕ್ಕಿರೋದ್ರಿಂದ ಪೊಲೀಸರ ವಿಚಾರಣೆಗೆ ಮತ್ತಷ್ಟು ವೇಗ ಸಿಗಲಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲು, ಪ್ರಶ್ನೆಗಳ ಪ್ರವಾಹ ಹರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ಮುಂದವರಿದಿದೆ. ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದಂತೆ, ಕೊನೆಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಪಾಲಿಕೆಯಲ್ಲೇ ಅಕ್ರಮದಾಟಕ್ಕೆ ಕೆಲವರು ಸಾಥ್ ಕೊಟ್ಟಿದ್ದು ತನಿಖೆಯ ವೇಳೆ ಬಯಲಾಗಿದೆ. ಮೂವರು ಅಧಿಕಾರಿಗಳಿಗೆ ಅಮಾನತು ಆದೇಶ ತಲುಪಿದೆ.
ಇದನ್ನೂ ಓದಿ: ವೋಟರ್ ಐಡಿ ಸ್ಕ್ಯಾಮ್.. ಒಂದು ಕಿ.ಮೀ ಚೇಸ್ ಮಾಡಿ ಕೆಂಪೇಗೌಡನ ಬಂಧಿಸಿದ ಪೊಲೀಸರು..!
ಮೂವರು ಅಧಿಕಾರಿಗಳ ಅಮಾನತು
- ಚಿಲುಮೆ ಗೋಲ್ಮಾಲ್ ವರದಿ ಪಡೆದು ಕಮಿಷನರ್ ಪರಿಶೀಲನೆ
- ಆಂತರಿಕ ವರದಿಯಲ್ಲಿ ಅಧಿಕಾರಿಗಳ ಕರ್ತವ್ಯಲೋಪ ಸಾಬೀತು
- ಮಹದೇವಪುರ, ಚಿಕ್ಕಪೇಟೆ, ಶಿವಾಜಿನಗರದ RO ಅಮಾನತು
- ಶಿವಾಜಿನಗರ RO ಸುಹೇಲ್, ಮಹದೇವಪುರ RO ಚಂದ್ರಶೇಖರ್
- ಚಿಕ್ಕಪೇಟೆಯ RO ಭೀಮಾಶಂಕರ್ ಅಮಾನತುಗೊಳಿಸಿ ಆದೇಶ
- ಮಹಾದೇವಪುರದಲ್ಲಿ ಹೆಚ್ಚಿಗೆ BLO ಆರ್ಡರ್ ನೀಡಿದ್ದ ಮಾಹಿತಿ
- ಮಾಹಿತಿ ಸಿಕ್ಕ ಹಿನ್ನೆಲೆ ಚಂದ್ರಶೇಖರ್ ಅಮಾನತು ಮಾಡಿ ಆದೇಶ
- ಶಿವಾಜಿನಗರ ಮತ್ತು ಚಿಕ್ಕಪೇಟೆಗಳಲ್ಲೂ ಇಂತದ್ದೇ ಕಳ್ಳಾಟ ಬೆಳಕಿಗೆ
- ಗುತುತಿನ ಚೀಟಿ ದುರ್ಬಳಕೆ ಹಿನ್ನೆಲೆ ಕೂಡ ಮೂವರ ಅಮಾನತು
- 10ಕ್ಕೂ ಹೆಚ್ಚು ಆರ್ಒಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್
ಒಟ್ನಲ್ಲಿ ಇನ್ನಷ್ಟು ಕಂದಾಯ ಅಧಿಕಾರಿಗಳ ವಿಚಾರಣೆ ಬಾಕಿ ಇದೆ. ಬಳಿಕ ಇನ್ನೆಷ್ಟು ಮಂದಿ ಮತದಾರರ ಮಾಹಿತಿ ಕನ್ನದಲ್ಲಿ ಭಾಗಿಯಾಗಿದ್ದಾರೆಂಬುದು ಬಯಲಾಗಲಿದೆ. ಇನ್ನೊಂದೆಡೆ ರವಿಕುಮಾರ್ಗೂ ದೊಡ್ಡ ದೊಡ್ಡವರ ಸಂಪರ್ಕ ಇರೋದು ತಿಳಿದು ಬಂದಿದೆ. ಆತನ ಬಾಯ್ಬಿಡಲು ಪೊಲೀಸರು ಪ್ಲಾನ್ ರೆಡಿ ಮಾಡಿಕೊಳ್ತಿದ್ದಾರೆ. ಸದ್ಯ ರವಿ ಮೊಬೈಲ್ ‘ಸಿಕ್ಕಿಲ್ಲ. ಮೊಬೈಲ್ ಬಗ್ಗೆ ವಿಚಾರಿಸಿದ್ರೆ, ಕಳೆದೋಗಿದೆ. ಎಲ್ಲಿ ಕಳೆದೋಯ್ತು ಅಂತ ಗೊತ್ತಾಗ್ತಿಲ್ಲ ಎಂದು ಪೊಲೀಸರ ಮುಂದೆ ಕಥೆಕಟ್ಟುತ್ತಿದ್ದಾನೆ ಎನ್ನಲಾಗಿದೆ. ಸದ್ಯ ರವಿಕುಮಾರ್ ಮೊಬೈಲ್ನಲ್ಲಿ ಮತ್ತಷ್ಟು ರಹಸ್ಯಗಳು ಅಡಗಿರುವ ಸಾಧ್ಯತೆ ಇದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ವಿಸ್ಟೇಗೇಷನ್ ಈಸ್ ಆನ್.. ಸೋ ಇನ್ನಷ್ಟು ಸತ್ಯ ಹೊರಬೇಕಿರೋದು ಬಾಕಿ ಇದೆಯಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post