ಕಿರುತೆರೆಯಲ್ಲಿ ದಾಖಲೆಗಳನ್ನ ಉಡಾಯಿಸಿದ ಸೀರಿಯಲ್ ಅಂದ್ರೆ ಅದು ‘ಅಗ್ನಿಸಾಕ್ಷಿ’. ಪ್ರತಿ ನಿತ್ಯ 8 ಗಂಟೆ ಆದ್ರೆ ಸಾಕು ಮನೆ ಮಂದಿಯೆಲ್ಲಾ ಕೆಲಸ ಬಿಟ್ಟು ಅಗ್ನಿಸಾಕ್ಷಿ ಧಾರಾವಾಹಿ ನೋಡೋದಕ್ಕೆ ಕುಳಿತುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿತ್ತು ಅಗ್ನಿಸಾಕ್ಷಿ ಸೀರಿಯಲ್. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ವೈಷ್ಣವಿ ಗುಟ್ಟುಬಿಟ್ಟು ಕೊಟ್ಟಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇದನ್ನು ಓದಿ: ನೂತನ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಸ್ಟಾರ್ ನಟ-ನಟಿ.. ಅಭಿಮಾನಿಗಳು ಫುಲ್ ಖುಷ್
ನಟಿ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ಗೆ ಸಂಬಂಧಿಸಿದ್ದು ಎನ್ನಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ನವೆಂಬರ್ 11ರಂದು ತಾಂಬೂಲ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷವೇ ವೈಷ್ಣವಿ ಗೌಡ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಉಪಸ್ಥಿತರಿದ್ದಾರೆ.
ಜನಮನ ಮೆಚ್ಚಿದ ಧಾರವಾಹಿ ಅಗ್ನಿಸಾಕ್ಷಿ ಮುಗಿಸಿದ ಬಳಿಕ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 08ರಲ್ಲಿ ಕಾಣಿಸಿಕೊಂಡಿದ್ದರು. ಬಿಗ್ಬಾಸ್ ಮೂಲಕ ಇನ್ನಷ್ಟು ಅಭಿಮಾನಗಳ ಪ್ರೀತಿಯನ್ನು ಸಂಪಾದಿಸಿಕೊಂಡರು.
ಇದೀಗ ವೈಷ್ಣವಿ ಗೌಡ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹುಡುಗ ಯಾರು? ಯಾವ ಕ್ಷೇತ್ರದವರು? ನಿಶ್ಚಿತಾರ್ಥ ನಡೆದದ್ದು ಎಲ್ಲಿ ಎನ್ನುವ ವಿಚಾರ ಮಾತ್ರ ಗುಟ್ಟಾಗಿದೆ. ಆದರೆ ಈ ನಿಶ್ಚಿತಾರ್ಥ ಕುರಿತು ವೈಷ್ಣವಿ ಅವರು ಎಲ್ಲಿಯೂ ಬರೆದುಕೊಂಡಿಲ್ಲ. ಇದೀಗ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post