ಚಿಕ್ಕಮಗಳೂರು: ನರಹಂತಕ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಕಾರಣಕ್ಕೆ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ಸಂಜೆ ಕತ್ತಲಾಗ್ತಾ ಇದ್ದಂತೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಬರ್ತಿದ್ದಂತೆ ಇನ್ನಷ್ಟು ಕೂಗಾಟ ಆಕ್ರೋಶ ದುಪ್ಪಟ್ಟಾಗಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಅವರನ್ನ ಕರೆದುಕೊಂಡು ಅರ್ಧ ಕಿ.ಮೀ. ಗೂ ಹೆಚ್ಚು ದೂರ ಓಡೋಡಿ ಬಂದು ಜೀಪ್ ನಲ್ಲಿ ಹತ್ಸಿ ಕಳುಹಿಸಿದ್ರು. ಬಳಿಕ ಶಾಸಕರು ಹರಿದ ಬಟ್ಟೆಯಲ್ಲಿ ಕೊಟ್ಟ ಹೇಳಿ ಇಡೀ ಪ್ರಕರಣವನ್ನೇ ಬೇರೆಡೆ ತಿರುಗಿಸಿದೆ. ಈ ಎರಡು ವಿಡಿಯೋಗಳು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಚರ್ಚೆ ಶುರುವಾಗೋಕೆ ಕಾರಣವೇ ಶಾಸಕರು ಹಾಕಿದ್ದ ಶರ್ಟ್. ಓಡೋಡಿ ಜೀಪ್ ಹತ್ತಿ ಹೋಗ್ತಾ ಇರೋ ವಿಡಿಯೋದಲ್ಲಿ ಎಂ.ಪಿ ಕುಮಾರಸ್ವಾಮಿ ತಲೆಮೇಲೆ ಕೈ ಇಟ್ಟು ಕೊಂಡಿರೋದು ಬಿಟ್ರೇ ಬೇರೆ ಯಾವುದೇ ಹಲ್ಲೆಯಾಗಿರೋದಕ್ಕೆ ಮಾಹಿತಿಯೇ ಇರ್ಲಿಲ್ಲ. ಆದ್ರೆ ರಾತ್ರಿ ಕೊಟ್ಟ ಹೇಳಿಕೆಯಲ್ಲಿ ಬಟ್ಟೆ ಸಂಪೂರ್ಣ ಹರಿದುಹೋಗಿತ್ತು. ಯಾರು ಹರಿದ್ರು ಅನ್ನೋ ಚರ್ಚೆ ಹುಟ್ಟುಕೊಂಡಿದೆ.

ಈಗಾಗಲೇ ಆ ಸ್ಥಳದಲ್ಲಿ ಶಾಸಕರು ಹೇಳುವಂತೆ ರಾಜಕೀಯ ಷಡ್ಯಂತ್ರದಿಂದ ಹಲ್ಲೆ ನಡೆಸಿದ್ದಾರಾ? ಆಗ ಬಟ್ಟೆ ಹರಿದಿತ್ತೋ ಇಲ್ವೋ ಯಾವುದೇ ದಾಖಲೆಗಳಿಲ್ಲ. ಹಾಗಾದ್ರೇ ಪೂರ್ತಿ ಬಟ್ಟೆ ಹರಿದಿದ್ದಾರೂ ಯಾರು ಅನ್ನೋ ಮಾತುಗಳು ಹರಿದಾಡ್ತಾ ಇವೆ. ಇದರ ಬಗ್ಗೆ ಸರಿಯಾದ ತನಿಖೆ ಆಗಬೇಕು ಅಂತಾರೆ ವಿರೋಧ ಪಕ್ಷದವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post