ಕಿರುತೆರೆಯಲ್ಲಿ ದಾಖಲೆಗಳನ್ನ ಉಡಾಯಿಸಿದ ಸೀರಿಯಲ್ ಅಂದ್ರೆ ಅಗ್ನಿಸಾಕ್ಷಿ ಧಾರಾವಾಹಿ. 8 ಗಂಟೆ ಆದ್ರೆ ಸಾಕು ಮನೆ ಮಂದಿಯೆಲ್ಲಾ ಕೆಲಸ ಬಿಟ್ಟು ಅಗ್ನಿಸಾಕ್ಷಿ ಧಾರಾವಾಹಿ ನೋಡೋದಕ್ಕೆ ಕುಳಿತುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ್ದರು. ಇದೀಗ ಅಗ್ನಿಸಾಕ್ಷಿ ಧಾರಾವಾಹಿ ಮುಗಿಸಿದ ಬಳಿಕ ಬಿಗ್ಬಾಸ್ ಸೀಸನ್ 08ರಲ್ಲಿ ಕಾಣಿಸಿಕೊಂಡಿದ್ದರು.
ತದನಂತರ ಮತ್ತೆಲ್ಲೂ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳಲಿಲ್ಲ. ಆದರೆ ಅವರ ಅಭಿಮಾನಿಗಳು ವೈಷ್ಣವಿ ಬರುವಿಕೆಗಾಗಿ ಕಾಯ್ತತ್ತಿದ್ದಾರೆ. ವೈಷ್ಣವಿ ಗೌಡ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಒಂದು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ನಟಿ ವೈಷ್ಣವಿ ಗೌಡ ಇವರ ಜೊತೆ ಮತ್ತೊಬ್ಬ ಹ್ಯಾಂಡ್ಸಮ್ ನಟನೂ ಕೂಡ ಕಂಬ್ಯಾಕ್ ಮಾಡ್ತಿದ್ದಾರೆ. ಅವರೇ ಮಂಗಳಗೌರಿ ಮದುವೆ ಸೀರಿಯಲ್ನಲ್ಲಿ ರಾಜೀವ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಗಗನ್ ಚಿನ್ನಪ್ಪ. ರಾಜೀವ ಪಾತ್ರದ ಮೂಲಕ ಎಲ್ಲ ಜನರ ಮನವನ್ನು ಗೆದ್ದಿದ್ದರು. ಇದೀಗ ಗಗನ್ ಹಾಗೂ ವೈಷ್ಣವಿ ಅವರ ಮುಖ್ಯ ಭೂಮಿಕೆಯಲ್ಲಿ ಹೊಸ ಸೀರಿಯಲ್ನಲ್ಲಿ ಪೇರ್ ಅಪ್ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ಹೊಸ ಮೂರು ಧಾರಾವಾಹಿಗಳಾದ ಭೂಮಿಗೆ ಬಂದ ಭಗವಂತ, ಅಮೃತಧಾರೆ, ಹಾಗೂ ಸೀತಾರಾಮ. ಈ ಮೂರು ಸೀರಿಯಲ್ಗಳಲ್ಲಿ ಒಂದಾದ ಸೀತಾರಾಮ ಧಾರಾವಾಹಿಗೆ ಈ ಇಬ್ಬರು ನಾಯಕ ಮತ್ತು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾ ರಾಮ ಧಾರಾವಾಹಿಯು ಆರ್ಆರ್ಆರ್ ಕ್ರೀಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿಮಾರ್ಣವಾಗ್ತಿದೆ. ಈ ಸೂಪರ್ ಹಿಟ್ ಪೇರ್ಗೆ ಸ್ವಪ್ನ ಕೃಷ್ಣ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಕಮ್ ಬ್ಯಾಕ್ ಸುದ್ದಿ ಕೇಳಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
View this post on Instagram
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post