ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದ್ದ ಬಾಲಕಿಯ ರೇಪ್ ಆಂಡ್ ಮರ್ಡರ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆ ಘಟನೆ ಮಾಸುವ ಮುನ್ನವೇ ಸಕ್ಕರೆ ನಾಡಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ನಡೆದಿದೆ. ಅನ್ಯಧರ್ಮೀಯ ವಿವಾಹಿತನೋರ್ವ 13 ವರ್ಷದ ಹಿಂದೂ ಬಾಲಕಿಯ ಅಶ್ಲೀಲ ವಿಡಿಯೋ ಚಿತ್ರಿಸಿ, ಬಳಿಕ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ತನ್ನ ಧರ್ಮಕ್ಕೆ ಮತಾಂತರವಾದ್ರೆ ಮದುವೆಯಾಗುವ ಆಸೆಯನ್ನೂ ತೋರಿಸಿದ್ದಾನೆ.
ಬಾಲಕಿಯನ್ನ ಅತ್ಯಾಚಾರ ಮಾಡಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದ್ರೆ ಮದುವೆಯಾಗುವ ಆಸೆ ತೋರಿಸಿರೊ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದ್ದು, ಈ ಫೋಟೋದಲ್ಲಿ ಕಾಣ್ತಿರೋ 25 ವರ್ಷದ ಯೂನಸ್ ಫಾಷ್ ಎಂಬಾತ ಮುಗ್ದ ಬಾಲಕಿಯನ್ನ ಅತ್ಯಾಚಾರ ಎಸಗಿರೊ ಕಾಮುಕ.
ಅಂದಹಾಗೆ, ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಆಕೆಗೆ ಆ್ಯಂಡ್ರಾಯ್ಡ್ ಮೊಬೈಲ್ ಕೊಡಿಸಿದ್ದ. ಬಳಿಕ ವಿಡಿಯೋ ಕಾಲ್ ನಲ್ಲಿ ಬಾಲಕಿನ್ನ ಪುಸಲಾಯಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡುವ ಬೆದರಿಕೆ ಹಾಕಿದ್ದನಂತೆ. ಅಲ್ಲದೇ ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ, ಮದುವೆಯಾಗುವ ಆಸೆಯನ್ನೂ ತೋರಿಸಿ ಆಕೆಯ ಮೇಲೆ ನವೆಂಬರ್ 11ರಂದು ಅತ್ಯಾಚಾರ ನಡೆಸಿದ್ದಾನೆ.
ಘಟನೆ ಸಂಬಂಧ ನವೆಂಬರ್ 19ರಂದು ಬಾಲಕಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಲವ್ ಜಿಹಾದ್ ಆರೋಪವೂ ಕೇಳಿಬಂದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಕಾಮುಕನಿಗೆ ಶಿಕ್ಷೆ ಕೊಡಿಸಬೇಕೆಂಬ ಕೂಗು ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post