ಕೇನ್ ವಿಲಿಯಮ್ಸನ್ ಅವರನ್ನ ತಂಡದಿಂದ ಕೈಬಿಟ್ಟಿರುವ ಸನ್ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ, ನೂತನ ಕ್ಯಾಪ್ಟನ್ ನೇಮಕ್ಕೆ ಮುಂದಾಗಿದೆ. ಅದರಂತೆ ಸೌತ್ ಆಫ್ರಿಕಾದ ಬಲಗೈ ಬ್ಯಾಟರ್ ಏಡನ್ ಮಾರ್ಕರಮ್ ಅವರನ್ನ ನಾಯಕನಾಗಿ ನೇಮಕ ಮಾಡಲು ಫ್ರಾಂಚೈಸಿ ಚಿಂತನೆ ನಡೆಸಿದೆ.
ಈ ಬಗ್ಗೆ ಮಾರ್ಕರಮ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ, ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟರ್ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಫ್ರಾಂಚೈಸಿ ಪರ್ಸ್ನಲ್ಲಿ 42 ಕೋಟಿ ಉಳಿದಿದ್ದು, ಮಾರ್ಕರಮ್ ಖರೀದಿಸಲು ಎಷ್ಟು ಕೋಟಿಯಾದರೂ ಹಿಂದೆ ಸರಿಯಲ್ಲ ಎಂಬುದು ಫ್ರಾಂಚೈಸಿ ಮೂಲಗಳಿಂದ ತಿಳಿದು ಬಂದಿದೆ. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಖರೀದಿಸೋದಾಗಿ ವರದಿಯಾಗಿತ್ತು.
ಇತ್ತೀಚೆಗೆ ಕೇನ್ ವಿಲಿಯಮ್ಸನ್ ಅವರಿಗೆ ಕೊಕ್ ನೀಡಲಾಯ್ತು. ಇವರು ಬರೋಬ್ಬರಿ 10 ವರ್ಷಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಈಗ ಸನ್ರೈಸರ್ಸ್ ಹೈದರಾಬಾದ್ ವಿಲಿಯಮ್ಸನ್ ಅವರನ್ನು ರಿಲೀಸ್ ಮಾಡಿದೆ. ಹೀಗಾಗಿ ಇವರ ಸ್ಥಾನಕ್ಕೆ ಕೂಲ್ ಅಂಡ್ ಅಗ್ರೆಸ್ಸಿವ್ ಆಗಿರೋ ಕ್ಯಾಪ್ಟನ್ ಹುಡುಕಾಟದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post