ಭಾರತದ ಯುವ ಕ್ರಿಕೆಟರ್ಸ್ಗೆ ಇಷ್ಟು ದಿನ ವಿರಾಟ್ ಕೊಹ್ಲಿ, ರೋಹಿತ್ ಶಮಾ, ಕೆ.ಎಲ್ ರಾಹುಲ್ ರೋಲ್ ಮಾಡೆಲ್ ಆಗಿದ್ರು. ಆದ್ರೀಗ, ಈ ಲಿಸ್ಟ್ಗೆ ಮತ್ತೊಬ್ಬ ಆಟಗಾರ ಎಂಟ್ರಿ ಕೊಟ್ಟಿದ್ದಾನೆ. ಬಹುತೇಕ ಯುವ ಆಟಗಾರರು ನಾವು ಇವ್ರ ತರ ಆಗ್ಬೇಕು ಅಂತ ಕನಸು ಕಾಣ್ತಿದ್ದಾರೆ.
ವ್ಹಾವ್, ಎಂತಹ ಶಾಟ್ಸ್ ಗುರು. ಒಂದೊಂದು ಶಾಟ್ ಕೂಡ ರೋಚಕ, ನೋಡ್ತಿದ್ರೆ, ಮೈ ಝುಮ್ ಅನ್ನುತ್ತೆ. ಮೈಂಡ್ ಒಂದ್ ಕ್ಷಣ ಬ್ಲಾಕ್ ಆಗುತ್ತೆ, ಹಿಂಗೂ ಬ್ಯಾಟಿಂಗ್ ಮಾಡ್ಬಹುದಾ ಅಂತ ಅನ್ನಿಸುತ್ತೆ. ಸೂರ್ಯನ ಈ ಅಸಾಮಾನ್ಯ ಬ್ಯಾಟಿಂಗ್, ನೋಡೋರ ಕಣ್ಣಿಗೆ, ದೀಪಾವಳಿ ಹಬ್ಬವಾದ್ರೆ, ಬೌಲರ್ಗಳಿಗೆ ಮಾರಿಹಬ್ಬ.
ಕ್ರಿಕೆಟ್ ಜಗತ್ತಿನಲ್ಲಿ ಮಿಸ್ಟರ್ 360 AB ಡಿವಿಲಿಯರ್ಸ್ ಬಿಟ್ರೆ, ಯಾವ ಅತಿರಥ ಮಹಾರಥ ಬ್ಯಾಟ್ಸ್ಮನ್ಸ್ಗಳಿಗೂ, ಇಂತಹ ಶಾಟ್ಸ್ ಆಡಲು ಸಾಧ್ಯವಿಲ್ಲ. ಈ ತರ ಫಿಯರ್ಲೆಸ್ ಬ್ಯಾಟಿಂಗ್ ಮಾಡೋಕೆ, ಮೈದಾನದ ದಶ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋಕೆ, ಡಬಲ್ ಗುಂಡಿಗೆ ಬೇಕು. ಸದ್ಯ ವಿಶ್ವಕ್ರಿಕೆಟ್ನಲ್ಲಿ ಅಂತಹ ಗುಂಡಿಗೆ, ಆ ಧಮ್ ಇರೋದು ಸೂರ್ಯಕುಮಾರ್ಗೆ ಮಾತ್ರ.
ಯುವ ಕ್ರಿಕೆಟಿಗರಿಗೆ SKY ರೋಲ್ ಮಾಡೆಲ್.!
ಕೊಹ್ಲಿ, ರೋಹಿತ್ ನಂತರ SKY ಬ್ಯಾಟಿಂಗ್ ಫಾಲೋ.!
ಫಸ್ಟ್ ಬಾಲ್ನಿಂದಲೇ ಬೌಲರ್ಗಳ ಮೇಲೆ ದಂಡಯಾತ್ರೆ ಮಾಡೋಕೆ, ನಿಜಕ್ಕೂ ಧಮ್ ಬೇಕು. ಫಿಯರ್ಲೆಸ್ ಮೈಂಡ್ಸೆಟ್ ಬೇಕು. ಈ ಎರಡೂ ಇರೋದ್ರಿಂದಲೇ ಸೂರ್ಯ, ಟಿ20 ಕ್ರಿಕೆಟ್ನ ನಂಬರ್.1 ಬ್ಯಾಟ್ಸ್ಮನ್ ಆಗಿರೋದು.
ರನ್ಮಷಿನ್ ವಿರಾಟ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಶರ್ಮಾರಂತೆ ಸೂರ್ಯಕುಮಾರ್ ಕೂಡ, ಯುವ ಕ್ರಿಕೆಟರ್ಸ್ಗೆ ರೋಲ್ ಮಾಡೆಲ್ ಆಗಿದ್ದಾರೆ. ಯುವ ಬ್ಯಾಟರ್ಸ್, ಇಷ್ಟು ದಿನ ಕೊಹ್ಲಿಯಂತೆ ಕವರ್ ಡ್ರೈವ್, ರೋಹಿತ್ರಂತೆ ಪುಲ್ಶಾಟ್ಸ್ ಆಡೋದನ್ನ ಪ್ರಾಕ್ಟೀಸ್ ಮಾಡ್ತಿದ್ರು. ಆದ್ರೀಗ, ಸೂರ್ಯರ ಬ್ಯಾಟಿಂಗ್ ಸ್ಟೈಲ್, ಡಿಫ್ರೆಂಟ್ ಶಾಟ್ಸ್ನ ಕಾಪಿ ಮಾಡ್ತಿದ್ದಾರೆ.
ಸೂರ್ಯರಂತೆ 360 ಡಿಗ್ರಿ ಬ್ಯಾಟಿಂಗ್ ಪ್ರಾಕ್ಟೀಸ್..
ಯೆಸ್, ಇದು T20 ಜಮಾನಾ. ಟೆಸ್ಟ್, ಒನ್ಡೇ ಫಾರ್ಮೆಟ್ಗಿಂತ, ಹೊಡಿಬಡಿ ಆಟಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಇಲ್ಲಿ ಮಿಂಚಿದ್ರೆ ನೇಮು-ಫೇಮು ಒಟ್ಟಿಗೆ ಸಿಗುತ್ತೆ. ಇದೇ ಕಾರಣಕ್ಕೆ ಯುವ ಕ್ರಿಕೆಟರ್ಸ್ ಟಿ20ಗೆ ಫಾರ್ಮೆಟ್ಗೆ ಬೇಕಾದ ಬ್ಯಾಟಿಂಗ್ ಶೈಲಿಯನ್ನ, ಫಾಲೋ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಯಂಗ್ ಬ್ಯಾಟರ್ಸ್ ಸೂರ್ಯಕುಮಾರ್ರ ಬ್ಯಾಟಿಂಗ್ಗೆ, ಫಿದಾ ಆಗಿದ್ದಾರೆ. ನಾವು ಸೂರ್ಯರಂತೆ ಮಿಂಚ್ಬೇಕು, ಮೈದಾನದಲ್ಲಿ ಅಬ್ಬರಿಸ್ಬೇಕು ಅಂತಿದ್ದಾರೆ. ನೆಟ್ಸ್ನಲ್ಲಿ 360 ಡಿಗ್ರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ.
ಯುವ ಕ್ರಿಕೆಟರ್ಸ್ ಮೇಲೆ ಸೂರ್ಯ ಪ್ರಭಾವ..?
ಮುಂಬೈನ ಯುವ ಕ್ರಿಕೆಟಿಗರ ಮೇಲೆ ಸೂರ್ಯಕುಮಾರ್ ಯಾದವ್ರ ಬ್ಯಾಟಿಂಗ್ ಸಾಕಷ್ಟ ಪ್ರಭಾವ ಬೀರಿದೆ. ಬ್ಯಾಟರ್ಸ್, ಸೂರ್ಯರಂತೆ ಫಿಯರ್ಲೆಸ್ ಆಗಿ ಬ್ಯಾಟಿಂಗ್ ಮಾಡೋದನ್ನ, ಸೂರ್ಯರಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡೋದನ್ನ ಹೆಚ್ಚಾಗಿ ಅಭ್ಯಾಸ ಮಾಡ್ತಿದ್ದಾರೆ.
ವಿನಾಯಕ ಮಾನೆ- ಸೂರ್ಯಕುಮಾರ್ ಯಾದವ್ ಮೆಂಟರ್
ಸೂರ್ಯಕುಮಾರ್ ಯಾದವ್ರಂತೆ ಬ್ಯಾಟಿಂಗ್ ಮಾಡ್ಬೇಕು, ಅವರಂತೆ ಆಗ್ಬೇಕು ಅಂದುಕೊಳ್ಳೋದು ತಪ್ಪಲ್ಲ. ಆದ್ರೆ, ಸೂರ್ಯರಂತೆ ಆಗೋದು ಅಷ್ಟು ಸುಲಭವಲ್ಲ.
ಸೂರ್ಯರಂತೆ ಆಗೋದು ಅಷ್ಟು ಸುಲಭವಲ್ಲ.!
ಹೌದು, ಸೂರ್ಯಕುಮಾರ್ರ ಏಕ್ಧಮ್, ಏನೋ ಅದೃಷ್ಟದಾಟದಲ್ಲಿ T20 ಕ್ರಿಕೆಟ್ನ ನಂಬರ್.1 ಬ್ಯಾಟ್ಸ್ಮನ್ ಆಗಿಲ್ಲ. ಹಲವು ವರ್ಷಗಳ ಹಾರ್ಡ್ವರ್ಕ್, ಡೆಡಿಕೇಷನ್ ಫಲವೇ, ಇಂದು ಸೂರ್ಯ ಟಿ20ಯಲ್ಲಿ ಅಬ್ಬರಿಸೋಕೆ ಕಾರಣ.
ಸೂರ್ಯಕುಮಾರ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು, ತುಂಬಾನೇ ಲೇಟಾಗಿ. ಅಂದ್ರೆ, 30ನೇ ವರ್ಷದಲ್ಲಿ. ಆದ್ರೆ, ಒಂದಲ್ಲ ಒಂದು ದಿನ ಬ್ಲೂ ಜೆರ್ಸಿಯಲ್ಲಿ ಆಡೇ ಆಡ್ತೀನಿ ಅನ್ನೋ ನಂಬಿಕೆಯಲ್ಲಿದ್ದ ಸೂರ್ಯ, ಅದಕ್ಕೆ ತಕ್ಕಂತೆ ಪ್ರಿಪರೇಷನ್ ಮಾಡಿಕೊಳ್ತಿದ್ರು.
ಮುಂಬೈನ ಪಾರ್ಸಿ ಜಿಮ್ಖಾನ ಮೈದಾನದಲ್ಲಿ ತಮಗಾಗಿ, ಪೇಸ್ ಬೌಲರ್ಸ್ಗೆ HELP ಆಗೋ, ಬೌನ್ಸಿ ಪಿಚ್ನ ಸೂರ್ಯ ರೆಡಿ ಮಾಡಿಸಿಕೊಂಡಿದ್ರು. ಆ ಪಿಚ್ನಲ್ಲಿ ಗಂಟೆಗಳ ಕಾಲ, ಪೇಸ್ ಬೌಲರ್ಸ್, ಥ್ರೋ ಡೌನ್ ಸ್ಪೆಷಲಿಸ್ಟ್ಗಳ ವಿರುದ್ಧ ಪ್ರಾಕ್ಟೀಸ್ ಮಾಡ್ತಿದ್ರು.
ಈ ಎಲ್ಲದರ ಕಾರಣದಿಂದಾಗಿ ಸೂರ್ಯ, ಬೌನ್ಸಿ ಟ್ರ್ಯಾಕ್ಗಳಲ್ಲೂ ಅಬ್ಬರಿಸ್ತಿದ್ದಾರೆ. ತಂಡದ ಇತರೆ ಬ್ಯಾಟರ್ಸ್, ಫಾಸ್ಟ್ ಌಂಡ್ ಬೌನ್ಸಿ ಪಿಚ್ಗಳಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ರೆ, ಸೂರ್ಯ ಅದೇ ಪಿಚ್ಗಳಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಟಿ20 ವಿಶ್ವಕಪ್ನಲ್ಲಿನ ದಕ್ಷಿಣ ಆಫ್ರಿಕಾ ವಿರುದ್ಧದ ಇನ್ನಿಂಗ್ಸ್ ಬೆಸ್ಟ್ ಎಕ್ಸಾಂಪಲ್.
ಒಟ್ಟಿನಲ್ಲಿ.. ಸೂರ್ಯ ವಿಶ್ವಕ್ರಿಕೆಟ್ನಲ್ಲಿ ತಮ್ಮ ಅತ್ಯದ್ಭುತ ಬ್ಯಾಟಿಂಗ್ ಮೂಲಕ ದೊಡ್ಡ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ. ಯುವ ಕ್ರಿಕೆಟರ್ಸ್ಗೆ ಹೀರೋ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post