ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಬಿಜಿಎಸ್ ಸಂಸ್ಥಾಪಕ ದಿನಾಚರಣೆ ನಡೆಯಿತು. ಉತ್ತರಹಳ್ಳಿಯ ಬಿಜಿಎಸ್ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹಕ ತಾರೆ ರಮ್ಯಾ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಕೆಲ ಹೊತ್ತು ಮಾತನಾಡಿದರು. ನಾನು 2003 ನಲ್ಲಿ ‘ಎಕ್ಸ್ಕ್ಯೂಸ್ ಮೀ’ ಸಿನಿಮಾ ಶೂಟಿಂಗ್ಗೆ ಬಂದಿದ್ದೆ. ಆಗ ಇಲ್ಲಿ ಮೆಕ್ಯಾನಿಕಲ್ ಬ್ರಾಂಚ್ ಮಾತ್ರ ಇತ್ತು. ಇಂದು ಮೆಡಿಕಲ್, ಇಂಜಿನಿಯರಿಂಗ್, ಫ್ಯಾಷನ್ ಸೇರಿದಂತೆ ಅನೇಕ ಬ್ರಾಂಚ್ಗಳಿವೆ. ತುಂಬಾ ಸಂತೋಷ ಆಗುತ್ತಿದೆ. ನಾನು ಭಾಷಣ ಮಾಡಲ್ಲ, ನನಗೆ ಅದು ಬರಲ್ಲ. ನೀವೇ ನನಗೆ ಒಂದಷ್ಟು ಪ್ರಶ್ನೆಗಳನ್ನ ಕೇಳಿ ನಾನು ಉತ್ತರಿಸುತ್ತೇನೆ ಎಂದು ವಿದ್ಯಾರ್ಥಿಗಳ ಕೈಗೆ ಮೈಕ್ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗೆ ರಮ್ಯಾ ಫನ್ನಿ, ಫನ್ನಿಯಾಗಿ ಉತ್ತರಿಸಿ ಖುಷಿಪಡಿಸಿದರು.
ಹೇಗಿತ್ತು ರಮ್ಯಾ ಜೊತೆಗಿನ ಸಂಭಾಷಣೆ..?
ಅಮೃತಾ: ಹಾಯ್ ಮೇಡಂ.. ನೀವು ಇನ್ನೂ ಛಾರ್ಮ್ ಉಳಿಸಿಕೊಂಡಿದ್ದೀರಾ..? ಯಾವಾಗ ಬರ್ತೀರಾ ಮತ್ತೆ ಸಿನಿಮಾ ಇಂಡಸ್ಟ್ರಿಗೆ..?
ರಮ್ಯಾ: ನಾನು ಸ್ವಲ್ಪ ದಪ್ಪ ಆಗಿದ್ದೀನಿ ಅನಿಸಿಲ್ವಾ..? ನನ್ನ ಮುಂದಿನ ಸಿನಿಮಾ ಉತ್ತರಾಖಂಡ್.. ನೀವು ನನ್ನ ಇನ್ಸ್ಟಾಗ್ರಾಮ್ ಫಾಲೋ ಮಾಡ್ತಿದ್ರೆ ಗೊತ್ತಾಗುತ್ತೆ.. ನೀವು ಟೀಸರ್ ನೋಡಿಲ್ವಾ..? ಇನ್ಸ್ಟಾದಲ್ಲಿ ನನ್ನ ಹೆಸರು ದಿವ್ಯಾ ಸ್ಪಂದನಾ.. ಅಂತಿದೆ.. ಫಾಲೋ ಮಾಡಿ..
ದೇವ್ ಕಿಶೋರ್: ನಿಮ್ಮ ಮದುವೆ ಯಾವಾಗ ಮೇಡಂ..
ರಮ್ಯಾ: (ಕೋಪದಿಂದ ನೋಡಿ..) ನೀವು ಸಿಂಗಲ್ಲಾ..? ಮದ್ವೆ ಯಾಕೆ ಆಗಬೇಕು ಅಂತಾ ನಂಗೆ ಅರ್ಥ ಆಗಲ್ಲಪ್ಪ..
ದೇವ್ ಕಿಶೋರ್: ನಮ್ಗೂ ಬೇಕಾಗಿರೋದು ಅದುವೆ.. ನೀವು ಮದುವೆ ಆಗಬೇಡಿ.. ಬೆಸ್ಟ್.. ನಂಗೆ ಗೊತ್ತು.. ಒಂದು ಖುಷಿಯಾಗಿರಬೇಕು.. ಇಲ್ಲ ಮದುವೆ ಆಗಬೇಕು.. ಯಾವುದಾದರೂ ಒಂದು.. ನನಗೆ ಖುಷಿಯಾಗಿ ಇರಬೇಕು ಅನ್ನೋ ಆಸೆ ಎನ್ನುತ್ತ ಹಾಸ್ಯ ಚಟಾಕಿ ಹಾರಿಸಿದರು.. ನನಗೆ ಗೊತ್ತಿತ್ತು ನೀವು ನೂರಕ್ಕೆ ನೂರು ಕೇಳ್ತೀರಿ ಎಂದು.. ನಾನೊಬ್ಬ ಮಹಿಳೆಯಾಗಿ ಇದೆಲ್ಲ ಗೊತ್ತು.. ಹಣ, ಶಿಕ್ಷಣ ಎಲ್ಲವೂ ಮುಖ್ಯ. ನಿಮಗೆ ಒಳ್ಳೆ ಸಂಗಾತಿ ಸಿಕ್ಕರೆ ಖಂಡಿತಾ ಮದುವೆ ಆಗಿ.. ಆದರೆ ಯಾವುದೇ ಒತ್ತಾಯಕ್ಕೆ ಆಗಬೇಡಿ.. ನನಗೆ ಯಾರೂ ಸಿಕ್ಕಿಲ್ಲ.. ಸಿಕ್ಕರೆ ಖಂಡಿತಾ ಮದುವೆ ಆಗ್ತೀನಿ..
ಮಾನ್ಯಶ್ರೀ: ಮೇಡಂ ನಿಮ್ಮ ಬ್ಯೂಟಿಯ ರಹಸ್ಯ ಏನು..?
ರಮ್ಯಾ: ನಾನು ನೀವು ಹೇಳಿದಷ್ಟು ಸುಂದರಿ ಅಲ್ಲ.. ಒಂದು ಎವರೇಜ್ ಅಲ್ಲಿದ್ದೀನಿ. ಮೇಕಪ್ ಕೂಡ ಮಾಡ್ತೀನಿ. ಮೆಡಿಟೇಟ್ ಮಾಡ್ತೀನಿ.. ಹ್ಯಾಪಿಯಾಗಿ ಇರ್ತೀನಿ. ನಿಮ್ಮೆಲ್ಲರನ್ನ ಭೇಟಿ ಮಾಡಿದಾಗ ನನಗೆ ತುಂಬಾ ಸಂತೋಷ ಆಗುತ್ತದೆ. ನನಗೆ ಇಲ್ಲಿಗೆ ಆಹ್ವಾನಿಸಿದ್ಕೆ ತುಂಬಾ ಖುಷಿ ಆಯ್ತು.. ಧನ್ಯವಾದಗಳು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post