ರೋಹಿತ್ ಶರ್ಮಾ ಯಾವ ವಿಚಾರದಲ್ಲೂ ಸದಾ ಹಿಂದೆ ಇರ್ತಿದ್ರೋ, ಉದಾಸೀನ ಮಾಡ್ತಿದ್ರೋ ಅದನ್ನ ಈಗ ಸೀರಿಯಸ್ಸಾಗಿ ಕನ್ಸಿಡರ್ ಮಾಡಿದ್ದಾರೆ. ಬಿಸಿಸಿಐ ಖಡಕ್ ಕ್ಲಾಸ್ಗೆ ಬೆಚ್ಚಿರೋ ಹಿಟ್ಮ್ಯಾನ್ ಮೈ ಚಳಿ ಬಿಟ್ಟು ಕೆಲಸ ಮಾಡ್ತಿದ್ದಾರೆ. ಇಲ್ಲಾಂದ್ರೆ T20 ಫಾರ್ಮೆಟ್ನಲ್ಲಿ ಸ್ಥಾನ ಕಳೆದುಕೊಂಡಿರೋ ಮುಂಬೈಕರ್, ಒನ್ ಡೇಯಿಂದಲೂ ಔಟ್ ಆಗ್ತಾರೆ.
ವಿಶ್ವಕಪ್ ಟೂರ್ನಿಯಲ್ಲಾದ ಹೀನಾಯ ಮುಖಭಂಗ ಇಡೀ ಟೀಮ್ ಇಂಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಶ್ವ ಕ್ರಿಕೆಟ್ ಲೋಕದ ಪವರ್ ಹೌಸ್ ಆಗಿ ಐಸಿಸಿ ಟ್ರೋಫಿ ಗೆಲ್ಲೋಕೆ ಪರದಾಡ್ತಾ ಇದೀವಿ ಅನ್ನೋ ಅವಮಾನ ಬಿಸಿಸಿಐ ಬಾಸ್ಗಳ ನಿದ್ದೆಗಡೆಸಿದೆ. ಇದರ ಪರಿಣಾಮವೇ ಟೀಮ್ ಇಂಡಿಯಾದಲ್ಲಿ ನಡೀತಾ ಇರೋದೆ ಮೇಜರ್ ಸರ್ಜರಿ. ಸೆಲೆಕ್ಷನ್ ಕಮಿಟಿ ಕಿತ್ತೊಗೆದಾಯ್ತು, ಟಿ20 ಸೆಟಪ್ ಅನ್ನ ಕಂಪ್ಲೀಟ್ ಚೈಂಜ್ ಮಾಡೋ ನಿರ್ಧಾರ ತೆಗೆದುಕೊಂಡಿದ್ದಾಯ್ತು.. ಇದೀಗ ಬಾಸ್ಗಳ ಚಿತ್ತ ಏಕದಿನ ಫಾರ್ಮೆಟ್ನತ್ತ.
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಫೈನಲ್ ವಾರ್ನಿಂಗ್.!
ವಿಶ್ವಕಪ್ ಸೋಲಿನ ಬೆನ್ನಲ್ಲೇ ಟಿ20 ಫಾರ್ಮೆಟ್ನಿಂದ ಶರ್ಮಾಜಿಗೆ ಟಾಟಾ ಬೈ ಬೈ ಮಾಡೋಕೆ ಬಿಸಿಸಿಐ ಬಾಸ್ಗಳು ಸಜ್ಜಾಗಿರೋದು ಓಪನ್ ಸೀಕ್ರೆಟ್. ಇದೀಗ ಬಿಗ್ಬಾಸ್ಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬಿಗ್ ಟಾಸ್ಕ್ ನೀಡಿರೋ ಬಾಸ್ಗಳು ಡು ಆರ್ ಡೈ ಅಂತ ಖಡಕ್ ವಾರ್ನ್ ಮಾಡಿದ್ದಾರೆ. ಈ ಅಗ್ನಿಪರೀಕ್ಷೆ ಗೆದ್ರೆ ಮಾತ್ರ ಏಕದಿನ ಕ್ಯಾಪ್ಟನ್ಸಿ ಸೇಫ್. ಇಲ್ಲಾಂದ್ರೆ ನಾಯಕತ್ವ ಹೋಗಲಿ. ತಂಡದಲ್ಲೂ ಸ್ಥಾನ ಸಿಗಲ್ಲ ಅಂತಾ ಕಟ್ & ಕ್ಲೀಯರ್ ಆಗಿ ವಾರ್ನ್ ಮಾಡಿದ್ದಾರೆ.
ಫಿಟ್ ಆದ್ರೆ ಸೇಫ್, ಇಲ್ಲಾಂದ್ರೆ ಡೋರ್ ಕ್ಲೋಸ್.!
ಯೆಸ್, ರೋಹಿತ್ ಶರ್ಮಾಗೆ ಬಿಗ್ಬಾಸ್ಗಳು ವಾರ್ನಿಂಗ್ ಮಾಡಿರೋದು ಫಿಟ್ನೆಸ್ ವಿಚಾರಕ್ಕೇನೆ. ನೋ ಡೌಟ್, ರೋಹಿತ್ ಶರ್ಮಾ ಒಬ್ಬ ಅದ್ಭುತ ಓಪನರ್, ಬೌಂಡರಿ-ಸಿಕ್ಸರ್ ಸಿಡಿಸಿ ಮಿಂಚಬಲ್ಲ ಹಿಟ್ಮ್ಯಾನ್. 5 ಐಪಿಎಲ್ ಟ್ರೋಫಿಗಳನ್ನ ಗೆದ್ದ ಚಾಣಾಕ್ಷ ಕ್ಯಾಪ್ಟನ್. ಫಿಟ್ನೆಸ್ ವಿಚಾರಕ್ಕೆ ಬಂದ್ರೆ ರೋಹಿತ್, ಟ್ರೋಲರ್ಗಳಿಗೆ ಭರಪೂರ ಆಹಾರವಾಗಿರೋ ಕ್ರಿಕೆಟರ್. ಟ್ರೋಲರ್ಗಳೇ ಕರೆಯುವಂತೆ ವಡಾಪಾವ್ ರೋಹಿತ್ನ ಡಿಸೈನ್ ಡಿಸೈನ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ಸ್ ಹೇಗೆಲ್ಲಾ ರುಬ್ಬಿದ್ದಾರೆ ಅನ್ನೋದನ್ನ ನಿಮಗೆ ಬಿಡಿಸಿ ಹೇಳೋದು ಬೇಡ ಬಿಡಿ.
ನಿರೀಕ್ಷೆ ಹುಸಿಗೊಳಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ.!
ರೋಹಿತ್ ಶರ್ಮಾ ನಾಯಕನಗಾದಿಗೇರಿದಾಗ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದ್ರೆ, ಬೈಲೆಟರಿಯಲ್ ಸೀರೀಸ್ಗಳಲ್ಲಿ ಟ್ರೋಫಿ ಗೆದ್ದ ರೋಹಿತ್, ಪ್ರತಿಷ್ಠೆಯ ಏಷ್ಯಾಕಪ್, ವಿಶ್ವಕಪ್ಗಳಲ್ಲೇ ಪ್ಲಾಫ್ ಆದ್ರು. ಇದಕ್ಕೆ ರೋಹಿತ್ ಶರ್ಮಾ ಪರ್ಫಾಮೆನ್ಸ್ ಕೂಡ ಒಂದು ಕಾರಣ. ಬ್ಯಾಟಿಂಗ್ನಲ್ಲಿ ಅಟ್ಟರ್ಪ್ಲಾಫ್, ಪೂವರ್ ಕ್ಯಾಪ್ಟೆನ್ಸಿ. ಫೀಲ್ಡಿಂಗ್ನಲ್ಲಂತೂ ಅಕ್ಟೀವ್ ಅನ್ನೋ ಅಂಶವೇ ಇಲ್ಲ. ಇದಕ್ಕೆ ಕಾರಣ ಫಿಟ್ನೆಸ್ ವೈಫಲ್ಯ.
ತಂಡವಲ್ಲ.. ಮೊದಲು ಸಾರಥಿ ಸರಿಯಾಗಬೇಕು.!
ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ ಟೂರ್ನಿಯನ್ನ ಬಾಸ್ಗಳು ಪ್ರತಿಷ್ಟೆಯ ಟೂರ್ನಿಯನ್ನಾಗಿ ಪರಿಗಣಿಸಿದ್ದಾರೆ. ಇಲ್ಲಿ ಕಪ್ ಗೆಲ್ಲಲೇ ಬೇಕು ಅಂತಾ ಪಣ ತೊಟ್ಟಿದ್ದಾರೆ. ಹೀಗಾಗಿ ಮೊದಲು ನಾಯಕನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಆಡ್ಬೇಕು ಅಂದ್ರೆ ಫಿಟ್ನೆಸ್ ಗೇನ್ ಮಾಡ್ಬೇಕು ಅಂತಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ತಂಡಕ್ಕಿಂತ ಮೊದಲು ಸಾರಥಿ ಮೊದಲು ಸರಿಯಿರಬೇಕು ಅನ್ನೋದು ಬಾಸ್ಗಳ ವಾದವಾಗಿದೆ. ಇದರ ಬೆನ್ನಲ್ಲೇ ಹಾರ್ಡ್ ವರ್ಕೌಟ್ ಅನ್ನ ಶರ್ಮಾಜೀ ಸ್ಟಾರ್ಟ್ ಮಾಡಿದ್ದಾರೆ.
‘ನೋ ಎಕ್ಸ್ಕ್ಯೂಸ್’.. ಎಲ್ಲರೂ ಒಂದೇ, ಟೀಮ್ ಮುಖ್ಯ.!
ಟೀಮ್ ಅಂದ ಮೇಲೆ ಎಲ್ಲರೂ ಒಂದೇ. ನಾಯಕನಾಗಿರಲಿ ಅಥವಾ ಸ್ಟ್ಯಾಂಡ್ ಬೈ ಪ್ಲೇಯರ್ ಆಗಿರಲಿ ಎಲ್ಲರೂ ಸಮಾನರು. ವ್ಯಕ್ತಿ ಅಲ್ಲ, ಟೀಮ್ ಮುಖ್ಯ, ವಿಶ್ವಕಪ್ ಗೆಲ್ಲೋದು ಮುಖ್ಯ, ಅನ್ನೋದು ಸದ್ಯ ಬಾಸ್ಗಳ ಮಾತಾಗಿದೆ. ಹೀಗಾಗಿ ತಂಡದಲ್ಲಿ ಉಳಿಬೇಕು ಅಂದ್ರೆ, ಹಾರ್ಡ್ವರ್ಕ್ ಮಾಡೋದು ಅನಿವಾರ್ಯವಾಗಿದೆ. ಇಲ್ಲ ಅಂದ್ರೆ, ಗೇಟ್ಪಾಸ್ ಖಚಿತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post