ಕೋಲಾರ: ನನ್ನದು ಭಾಗ್ಯಗಳ ಕಾರ್ಯಕ್ರಮವಲ್ಲ. ಬಡವರ ಬದುಕನ್ನು ಕಟ್ಟಿಕೊಡೋ ಪಂಚರತ್ನ ಕಾರ್ಯಕ್ರಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಚಿಂತಾಮಣಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಾಲ ಮನ್ನಾ ಕ್ರೆಡಿಟ್ ಕಾಂಗ್ರೆಸ್‌ಗೂ ಸಲ್ಲಬೇಕು. ಕಾಂಗ್ರೆಸ್ ಸರ್ಕಾರದ ವೇಳೆ ಜಾರಿಯಾದ ಭಾಗ್ಯಗಳಿಗೆ ಹಣ ನಿಲ್ಲಬಾರದು. ಸಾಲ ಮನ್ನಾ ನಿಮ್ಮ ಹಣೆಬರಹ ಅಂತ ಮಹಾನುಭಾವ ಸಿದ್ದರಾಮಯ್ಯ ಹೇಳಿದ್ರು. ಅವರ ಕಾರ್ಯಕ್ರಮ ಮುಂದುವರಿಸಿ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಹಣಕಾಸು ಇಲಾಖೆಯನ್ನ ನನಗೆ ಕೊಡಲು ತಯಾರಿರಲಿಲ್ಲ. ಗಲಾಟೆ ಮಾಡಿ ಹಣಕಾಸು ಇಲಾಖೆ ಬೇಕು ಎಂದು ತಗೊಂಡೆ ಎಂದರು.
ಯಾರೋ ಕಟ್ಟಿದ ಗೂಡಲ್ಲಿ ಸಿದ್ದರಾಮಯ್ಯ
ನಾನು ಹಗಲು ರಾತ್ರಿ ಜನರ ಸಮಸ್ಯೆ ಆಲಿಸಿ ಪಕ್ಷ ಕಟ್ಟುತ್ತಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆಗಿಂತಲೂ ಸಿದ್ದರಾಮಯ್ಯ ಹಿರಿಯರೇನು..? ಯಾರೋ ಕಟ್ಟಿದ ಗೂಡನ್ನು ಸಿದ್ದರಾಮಯ್ಯ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ವೀರಶೈವರಿಗೂ ಡಿಸಿಎಂ ಸ್ಥಾನ..!
ಮೊನ್ನೆ ಯಾತ್ರೆಯಲ್ಲಿ ದಲಿತ ಮತ್ತು ಮಹಿಳಾ ಡಿಸಿಎಂ ಮಾಡ್ತೀನಿ ಎಂದಿದ್ರು. ಈಗ ವೀರಶೈವರಿಗೂ ಡಿಸಿಎಂ ಸ್ಥಾನ ಕೊಡುತ್ತೀನಿ. ಕಾಟಾಚಾರದ ಡಿಸಿಎಂಗಳನ್ನ ಮಾಡಲ್ಲ. ಆ ಹುದ್ದೆಗೆ ಸ್ಥಾನಮಾನ, ಸಂಪೂರ್ಣ ಅಧಿಕಾರ ಕೊಡ್ತೀನಿ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಪರಮೇಶ್ವರ್ನ್ನ ಡಿಸಿಎಂ ಮಾಡಲು ಸಿದ್ದರಾಮಯ್ಯ ಒಪ್ಪಿರಲಿಲ್ಲ. ಹೈಕಮಾಂಡ್ ಆದೇಶ ಬಂದ ಮೇಲೆ ಡಿಸಿಎಂ ಸ್ಥಾನ ಪರಮೇಶ್ವರ್ಗೆ ಕೊಟ್ಟರು. ಆದ್ರೂ ಅಧಿಕಾರ ನಡೆಸೋಕೆ ಸಿದ್ದರಾಮಯ್ಯ ಬಿಡಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ರು.
ಪಂಚರತ್ನ ಯಾತ್ರೆ ಅಭೂತಪೂರ್ವ ಬೆಂಬಲ
ಚಿಕ್ಕಬಳ್ಳಾಪುರದಲ್ಲಿ ಪಂಚರತ್ನ ಯಾತ್ರೆ ಆರಂಭವಾಗಿದ್ದು ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮಳೆಯ ನಡುವೆಯೂ ರಾತ್ರಿವರೆಗೆ ನಮ್ಮ ಕಾರ್ಯಕರ್ತರು ಬೈಕ್ ಱಲಿ ಮಾಡಿದ್ರು. ಮಳೆಯಲ್ಲೇ ನೆನೆದುಕೊಂಡು ಮಹಿಳೆಯರು ಆರತಿ ಬೆಳಗಿದ್ರು. ಜನ ಸಾಮಾನ್ಯರ ಸರ್ಕಾರ ಅಧಿಕಾರಕ್ಕೆ ತರುವ ಹೋರಾಟಕ್ಕೆ ಸ್ಫೂರ್ತಿ ಸಿಕ್ಕಿದೆ ಎಂದರು.
ಕುರುಡಮಲೆ ಗಣೇಶ, ಚಾಮುಂಡೇಶ್ವರಿ ಅನುಗ್ರಹದಿಂದ ಪಂಚರತ್ನ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದಿಂದ ಕರೆಗಳು ಬರುತ್ತಿವೆ. ಬಹಳ ಜನ ಏನೋ ಮಾಡಿಕೊಂಡು ಹೋಗ್ತಾನೆ ಅನ್ಕೊಂಡಿದ್ರು. ಜನರ ಮನಸ್ಸಿಗೆ ಪಂಚರತ್ನ ಯಾತ್ರೆ ನಾಟುತ್ತಿದೆ ಎಂದರು.
ಕುಮಾರಸ್ವಾಮಿ ಅವಧಿಯಲ್ಲೇ ಕೆ.ಸಿ.ವ್ಯಾಲಿ 2ನೇ ಯೋಜನೆಗೆ ಚಾಲನೆ ಕೊಟ್ಟಿದ್ದು ಎಂದು ಎಂಎಲ್‌ಸಿ ಅನಿಲ್ ಕುಮಾರ್ ಹೇಳಿದ್ದಾರೆ. ನಾನು ಅವತ್ತು ಶುದ್ಧಿಕರಣ ಘಟಕ ಹಾಕದೇ ನೀರು ಸರಬರಾಜು ಬೇಡ ಎಂದಿದ್ದೆ. ಯಾವುದೋ ಕುತಂತ್ರದಲ್ಲಿ ಎಂಎಲ್‌ಸಿ ಆಗಿರುವವರೆಗೆ ಏನು ಗೊತ್ತು ಎಂದು ಪ್ರಶ್ನೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post