ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದೆ.
‘UI’ ಚಿತ್ರದ ಶೂಟಿಂಗ್ ನೆಲಮಂಗಲದ ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ನಡೆಯುತ್ತಿದೆ. ಫೈಟಿಂಗ್ ಸೀನ್ ಶೂಟಿಂಗ್ ಮಾಡುವ ವೇಳೆ ವಿಪರೀತ ಧೂಳು ಕಾಣಿಸಿಕೊಂಡಿತ್ತು ಅಷ್ಟೇ. ನಾನು ಆರಾಮಾಗಿದ್ದೇನೆ, ನೋಡಿ ಶೂಟಿಂಗ್ ಮಾಡುತ್ತಿದ್ದೇವೆ. ನಮ್ಮ ಫೈಟ್ ಮಾಸ್ಟರ್ ಕೂಡ ಇಲ್ಲೇ ಇದ್ದಾರೆ. ನನಗೇನು ಆಗಿಲ್ಲ ಎಂದು ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದೆ. #Newsfirstlive #Upendra #KannadaNews @nimmaupendra @priyankauppi pic.twitter.com/yHoH39KXci
— NewsFirst Kannada (@NewsFirstKan) November 24, 2022
ಇನ್ನು, ಧೂಳು ಹಿನ್ನೆಲೆಯಲ್ಲಿ ಉಪ್ಪಿ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಉಂಟಾಗಿತ್ತು. ಹೀಗಾಗಿ ಚಿತ್ರೀಕರಣವನ್ನ ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಸದ್ಯ ಉಪೇಂದ್ರ ಅವರ ಆರೋಗ್ಯ ಸುಧಾರಿಸಿದ್ದು, ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post