ತುಮಕೂರು: ಮುಂದಿನ ಎಲೆಕ್ಷನ್ಗೆ ಸ್ಪರ್ಧೆ ಮಾಡಲ್ಲ ಎಮದು ಘೋಷಣೆ ಮಾಡಿದ್ದ ಮಧುಗಿರಿ ಶಾಸಕ ವೀರಭದ್ರಯ್ಯ, ಸದ್ಯ ಯೂ ಟರ್ನ್ ಹೊಡೆದಿದ್ದಾರೆ. ಈ ಬಾರಿ ನಾನೇ ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿದ್ದಾರೆ.
ಮಧುಗಿರಿಯಲ್ಲಿ ಮಾತನಾಡಿದ ಶಾಸಕ ವೀರಭದ್ರಯ್ಯ, ಮುಂಬರುವ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಕೆಲ ಕಾರಣಗಳಿಂದ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದ ಸದಸ್ಯರಿಗೂ ಸ್ಪರ್ಧೆ ಬೇಡ ಎಂದಿದ್ದೆ. ಆದ್ರೆ, ಈ ಸುದ್ದಿ ಹರಡುತ್ತಿದ್ದಂತೆ ಮಧುಗಿರಿಯ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ನನ್ನ ಮನೆ ಮುಂದೆ ಧರಣಿ ನಡೆಸಿದ್ರು. ನೀವು ಸ್ಪರ್ಧೆ ಮಾಡಲೇಬೇಕು ಅಂತ ಹಠ ಹಿಡಿದಿದ್ರು ಎಂದರು.
ಹೈ-ಕಮಾಂಡ್, ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದ್ದೇನೆ
ಅಲ್ಲದೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನ್ನ ಮತ್ತು ನನ್ನ ಮಗನ ಜೊತೆ ಮಾತನಾಡಿದ್ದಾರೆ. ಹೈ ಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ದೇವೇಗೌಡರ ಕುಟುಂಬಕ್ಕೆ ನೋ.. ಎಂದು ಹೇಳುವುದಕ್ಕೆ ಆಗಲ್ಲ. ಹೈ ಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಎಲೆಕ್ಷನ್ಗೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿರನ್ನ ಸಿಎಂ ಮಾಡುವುದೇ ಗುರಿ
ಇನ್ನು ಮಧುಗಿರಿಯನ್ನ ಜಿಲ್ಲೆಯನ್ನಾಗಿಸಿ, ಏಕಶಿಲಾ ಬೆಟ್ಟಕ್ಕೆ ರೋಪ್ವೇ ಮಾಡಿದಾಗ ಮಾತ್ರ ನನಗೆ ಸಮಾಧಾನವಾಗುತ್ತೆ. ಹೇಗಾದ್ರೂ ಮಾಡಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಸಿಎಂ ಮಾಡುವುದೇ ನಮ್ಮ ಗುರಿ ಎಂದು ಶಾಸಕ ವೀರಭದ್ರಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post