ಬೆಂಗಳೂರು: ವಿವಾಹ ಬಂಧನಕ್ಕೆ ಕಾಲಿಡಲು ಸಜ್ಜಾಗಿದ್ದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿಗೌಡಗೆ ಮೊದಲ ಹೆಜ್ಜೆಯಲ್ಲೆ ವಿಘ್ನ ಉಂಟಾಗಿದೆ. ವೈಷ್ಣವಿ ಕೈಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹೀಗಾಗಿ ಮದುವೆ ಮುರಿದುಕೊಂಡಿದ್ದೇವೆ ಎಂದು ನಟಿ ವೈಷ್ಣವಿ ಗೌಡ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮದುವೆ ಕ್ಯಾನ್ಸಲ್ ಎಂದು ಅಗ್ನಿಸಾಕ್ಷಿ ನಟಿ ವೈಷ್ಣವಿಗೌಡ ತಮ್ಮ ಇನ್ಸ್ಟಾ ಮಾಹಿತಿ ನೀಡಿದ್ದು, ನಾವು ಈ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದೇವೆ. ಎಲ್ಲರಿಗೂ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಈ ವಿಚಾರವನ್ನು ಇಲ್ಲಿಗೆ ಬಿಡಿ. ನನ್ನ ಒಳಿತಿಗಾಗಿ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ.
ವೈಷ್ಣವಿ ಗೌಡರ ಮದುವೆ ನಿಶ್ಚಯ ಎಂದು ಹೇಳಲಾಗಿದ್ದ ಪೋಟೊಗಳು ಅಭಿಮಾನಿಗಳಿಗೆ ಸರ್ಪೈಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ. ಮಾತುಕತೆ ನಡೆದಿರೋದು ನಿಜ, ಆದ್ರೆ ಇದು ಎಂಗೇಜ್ಮೆಂಟ್ ಆಗಿಲ್ಲ ಅಂತ ಈ ಹಿಂದೆ ಸ್ಪಷ್ಟನೇ ನೀಡಿದ್ದರು.
ಎರಡೇ ದಿನಕ್ಕೆ ವೈಷ್ಣವಿ ವಿವಾಹಕ್ಕೆ ವಿಘ್ನ..
ವಿದ್ಯಾಭರಣ್ ಜೊತೆ ವೈಷ್ಣವಿ ವೈವಾಹಿಕ ಜೀವನಕ್ಕೆ ಕಾಲಿಡ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿ ಎರಡು ದಿನ ಕಳೆಯುವಷ್ಟರಲ್ಲಿ ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿಯೊಂದು ಈ ಸಂಬಂಧಕ್ಕೆ ಹುಳಿಹಿಂಡಿತ್ತು. ವಿದ್ಯಾಭರಣ್ ಇಬ್ಬರು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾರೆ ಅಂತ ಹೇಳಲಾಗ್ತಿರೋ ಒಂದು ಆಡಿಯೋ ಕ್ಲಿಪ್ ವೈರಲ್ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post