ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡ್ತಿರೋ ಟೀಂ ಇಂಡಿಯಾ ಪ್ರಮುಖ 37ನೇ ಓವರ್ ವೇಳೆಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿದೆ. ಟಾಸ್ ಸೋತು ಟೀಂ ಇಂಡಿಯಾ ಪರ ಬ್ಯಾಟಿಂಗ್ಗೆ ಇಳಿದ ಗಿಲ್ (65 ಎಸೆತ, 50 ರನ್, 1 ಬೌಂಡರಿ, 3 ಸಿಕ್ಸರ್), ಶಿಖರ್ ಧವನ್ (77 ಎಸೆತ, 72 ರನ್, 13 ಬೌಂಡರಿ) ಅರ್ಧ ಶತಕಗಳೊಂದಿಗೆ ಶುಭಾರಂಭ ನೀಡಿದ್ದಾರೆ. ತಾಳ್ಮೆ ಆಟದೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಓಪನರ್ಸ್ ತಂಡದ ಸ್ಕೋರ್ ಹೆಚ್ಚಿಸಲು ಎಚ್ಚರಿಕೆ ಆಟಕ್ಕೆ ಮೊರೆ ಹೋದರು. ಪರಿಣಾಮ 23 ಓವರ್ಗಳ ಅಂತ್ಯದ ವರೆಗೂ ವಿಕೆಟ್ ನಷ್ಟವಿಲ್ಲದೇ 124 ರನ್ ಗಳಿಸಿತ್ತು.
FIFTY for @SDhawan25 – his 3⃣9⃣th ODI half-century! 👍 👍#TeamIndia inching closer to the 100-run mark
Follow the match 👉 https://t.co/jmCUSLdeFf #NZvIND
📸 Courtesy: Photosport NZ pic.twitter.com/x8a89Un404
— BCCI (@BCCI) November 25, 2022
ಅರ್ಧ ಶತಕ ಗಳಿಸುತ್ತಿದಂತೆ ಬಿರುಸಿನ ಆಟಕ್ಕೆ ಮುಂದಾದ ಗಿಲ್, ಲಾಕಿ ಫರ್ಗುಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ಧವನ್ ಕೂಡ ಔಟ್ ಆಗಿ ನಿರ್ಗಮಿಸಿದರು. ಇದರೊಂದಿಗೆ ಶತಕದ ಜೊತೆಯಾಟ ನೀಡಿದ್ದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಬಂದ ಪಂತ್ 23 ಎಸೆತಗಳಲ್ಲಿ 15 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ನಿರ್ಗಮಿಸಿದರು. ಸದ್ಯ ಕ್ರಿಸ್ನಲ್ಲಿ ಸಂಜು ಸ್ಯಾಮ್ಸನ್, 47 ಎಸೆತಗಳಲ್ಲಿ 33 ರನ್ ಗಳಿಸಿರುವ ಅಯ್ಯರ್ ಬ್ಯಾಟಿಂಗ್ ಮುಂದುವರಿಸಿದ್ದು, 38 ಓವರ್ ಗಳ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ.
ಟೀಂ ಇಂಡಿಯಾ ತಂಡ ಇಂತಿದೆ; ಗಿಲ್, ಧವನ್ (ನಾಯಕ), ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಸುಂದರ್, ಶಾರ್ದುಲ್ ಠಾಕೂರ್, ಚಹಲ್, ಅರ್ಷ್ದೀಪ್ ಸಿಂಗ್ (ಪಾದಾರ್ಪಣೆ), ಉಮ್ರಾನ್ ಮಲಿಕ್ (ಪಾದಾರ್ಪಣೆ)..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
4⃣th ODI half-century for @ShubmanGill! 🙌🙌
Also, a 1⃣0⃣0⃣-run stand for the opening pair! 👌👌
Follow the match 👉 https://t.co/jmCUSLdeFf #TeamIndia | #NZvIND
📸 Courtesy: Photosport NZ pic.twitter.com/LKsx2Nzc9w
— BCCI (@BCCI) November 25, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post