ಕಾಂಗ್ರೆಸ್ ಮೊದಲಿನಿಂದ ಟಿಕೆಟ್ ಹಂಚಿಕೆಯಲ್ಲಿ ಲೇಟ್ ಲತೀಫ್ ಎಂಬ ಖ್ಯಾತಿ ಪಡೆದಿದೆ. ಕಾರಣ ಪಕ್ಷದಲ್ಲಿನ ಬಂಡಾಯ ಶಮನದ ಭಾಗವಾಗಿ ಈ ತಂತ್ರ ಇಲ್ಲಿವರೆಗೆ ಬಳಕೆ ಇತ್ತು. ಆದರೆ ಇದೇ ಮೊದಲ ಬಾರಿಗೆ ಟಿಕೆಟ್ ನೀಡಲು ಅರ್ಜಿ ಸಲ್ಲಿಕೆಗೆ ಆಹ್ವಾನ ಕೊಟ್ಟಿತ್ತು. ಈ ಅಚ್ಚರಿಯ ನಡೆ ಹಿಂದೆ, ಕಾಣದ ನಿಗೂಢ ಲೆಕ್ಕಾಚಾರಗಳು ಇವೆ. ಜೊತೆಗೆ ಕೋಟ್ಯಾಂತರ ಹಣ ಹರಿದುಬಂದಿದೆ.
ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ.. ಮತಬ್ಯಾಂಕ್ ಭದ್ರಗೊಳಿಸಲು ರಾಜ್ಯದಲ್ಲಿ ಸಾಲು ಸಾಲು ಯಾತ್ರೆಗಳು ಹೊರಟಿವೆ. ಇತ್ತ, ಮೈಂಡ್ಗೇಮ್ ಆಡಿದ ಕಾಂಗ್ರೆಸ್ ಅದರಲ್ಲಿ ಯಶಸ್ಸು ಪಡೆದು, ಜನಕ್ಕೆ ತಮ್ಮ ಬಗ್ಗೆ ಪಾಸಿಟಿವ್ ಇಂಪ್ಯಾಕ್ಟ್ ಬರುವಂತೆ ನೋಡಿಕೊಂಡಿದೆ. ಕೆಪಿಸಿಸಿ ಕಚೇರಿಯಲ್ಲಿ ಸಾಲುಗಟ್ಟಿ ನಿಂತ ನಾಯಕರ ದಂಡು, ಬಿಸಿ ಬಿಸಿ ದೋಸೆ ತರಹ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿ, ಪವರ್ ತೋರಿಸಿದ್ದಾರೆ..
ಚುನಾವಣೆಗೂ ಮುನ್ನವೇ ಕಾಂಗ್ರೆಸ್ನ ಟಿಕೆಟ್ ತಂತ್ರ ಸಫಲ!
ಒಂದೇ ಏಟಿಗೆ ಹಲವು ಹಕ್ಕಿಗಳನ್ನ ಬೀಳಿಸಿದ ಕಾಂಗ್ರೆಸ್ ಪಡೆ!
2023ರ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಚುನಾವಣೆಯಲ್ಲಿ ಸ್ಪರ್ಧಿಸುವವರು ಯಾವ ಕ್ಷೇತ್ರ ಬೇಕು ಅಂತ ಅರ್ಜಿ ಸಲ್ಲಿಸಲು ಕೆಪಿಸಿಸಿ ಕರೆ ಕೊಟ್ಟಿತ್ತು. ಈ ಕರೆಗೆ ಸಲ್ಲಿಕೆ ಆಗಿರೋದು ಸಾವಿರಕ್ಕೂ ಅಧಿಕ ಅರ್ಜಿಗಳು. ತಮಗೂ ಒಂದು, ತಮ್ಮ ಮನೆ ಅವರ್ಗೊಂದು ಅಂತ ಟಿಕೆಟ್ಗಾಗಿ ಅಪ್ಲಿಕೇಷನ್ ಫಿಲ್ ಮಾಡಿದ್ದಾರೆ.. ಈ ಟಿಕೆಟ್ನ ಬೇಡಿಕೆ ಸದ್ಯ ದಾಖಲೆ ಬರೆದಿದೆ.
2023 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಿಂದ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಒಂದು ಅಂದಾಜಿನ ಪ್ರಕಾರ 23 ಕೋಟಿಗೂ ಅಧಿಕ ಮೊತ್ತ ಕೆಪಿಸಿಸಿ ಖಾತೆಯಲ್ಲಿ ಸಂಗ್ರಹವಾಗಿದೆ. ಈ ಹಣವನ್ನು ಕೆಪಿಸಿಸಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುವ ಉದ್ದೇಶ ಹೊಂದಿದೆ ಅಂತ ಈ ಹಿಂದೆಯೇ ಹೇಳಿಕೊಂಡಿದೆ.
24 ಕ್ಷೇತ್ರಕ್ಕೆ 1,230 ಅರ್ಜಿ
ನವೆಂಬರ್ 5 ರಿಂದ 21 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಕೆಪಿಸಿಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಒಟ್ಟು 1,311 ಮಂದಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಅಪ್ಲಿಕೇಷನ್ ಪಡೆದಿದ್ದಾರೆ. ಈ ಪೈಕಿ 1,230 ಅರ್ಜಿಗಳು ಕೆಪಿಸಿಸಿಗೆ ಸಲ್ಲಿಕೆಯಾಗಿವೆ. ಸಲ್ಲಿಕೆ ಆದ ಅರ್ಜಿಗಳಲ್ಲಿ ಸಾಮಾನ್ಯ ವರ್ಗಕ್ಕೆ 889, ಎಸ್ಟಿ-ಎಸ್ಸಿ ವರ್ಗಕ್ಕೆ 341 ಅರ್ಜಿಗಳು ಹರಿದು ಬಂದಿವೆ.. ಸಾಮಾನ್ಯ ಆಕಾಂಕ್ಷಿಗಳಿಗೆ 2 ಲಕ್ಷ, ಎಸ್ಸಿ-ಎಸ್ಟಿ ವರ್ಗಕ್ಕೆ 1 ಲಕ್ಷ ಮೊತ್ತ ನಿಗದಿ ಮಾಡಲಾಗಿತ್ತು.
ಕೆಪಿಸಿಸಿ ಖಾತೆಗೆ 23 ಕೋಟಿ ಜಮಾ..
ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಆಕಾಂಕ್ಷಿಗಳು ಅರ್ಜಿ ಮೊತ್ತ 5 ಸಾವಿರದ ಜೊತೆಗೆ ಎರಡು ಲಕ್ಷದ ಡಿಡಿ ಸಲ್ಲಿಕೆ ಮಾಡಬೇಕಿತ್ತು. ಅದೇ ರೀತಿಯಲ್ಲಿ ಎಸ್ಸಿ ಎಸ್ಟಿ ಸಮುದಾಯದ ಆಕಾಂಕ್ಷಿಗಳಿಗೆ ಒಂದು ಲಕ್ಷ ರೂಪಾಯಿ ಮೊತ್ತ ನೀಡುವುದನ್ನು ನಿಗದಿ ಪಡಿಸಲಾಗಿತ್ತು. ಈ ಮೂಲಕ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಂದ 17.78 ಕೋಟಿ ರೂಪಾಯಿ ಹಾಗೂ ಎಸ್ಸಿ-ಎಸ್ಟಿ ಆಕಾಂಕ್ಷಿಗಳಿಂದ 3.41 ಕೋಟಿ ರೂಪಾಯಿ ಮೊತ್ತ ಸಂಗ್ರಹವಾಗಿದೆ.
ಸಂಗ್ರಹವಾಗಿರುವ ಒಟ್ಟು ಮೊತ್ತವನ್ನು ಕೆಪಿಸಿಸಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗ್ತಿದೆ. ಹಣಕಾಸು ಕೊರತೆ ಕಾರಣದಿಂದ ಕಾಮಗಾರಿ ಕುಂಟುತ್ತಾ ಸಾಗ್ತಿತ್ತು. ಒಟ್ಟಾರೆ, ಕೆಪಿಸಿಸಿ ಅರ್ಜಿ ಬಹುಪಯೋಗಿ ಆಗಿ ಬಳಕೆ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post