ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಹಿಂದಿನ ಹಲವು ದೇಶ ವಿರೋಧಿ ಕೃತ್ಯಗಳ ಸುತ್ತಾ ಪ್ರಕರಣದ ಆರೋಪಿ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಮಗ್ರ ತನಿಖೆ ಅಗತ್ಯ. ಈ ನಿಟ್ಟಿನಲ್ಲಿ ಪ್ರಕರಣವನ್ನ ಎನ್ಐಎಗೆ ಹಸ್ತಾಂತರ ಮಾಡಲಾಗಿದೆ.
ಕರಾವಳಿ ಜಿಲ್ಲೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ನ ಲಿಂಕ್ ಬಗೆದಷ್ಟು ವಿಸ್ತಾರಗೊಳ್ತಿದೆ. ದೇಶ ವಿರೋಧಿ ಕೃತ್ಯಗಳ ಸರಮಾಲೆಯ ಪ್ರಕರಣದ ಆರೋಪಿ ಸುತ್ತಲೂ ಸುತ್ತಲು ಶುರುಮಾಡಿದೆ. ಕರಾವಳಿಯ ಸ್ಫೋಟಕ್ಕೂ ದೂರದ ಕೊಯಮತ್ತೂರು ಲಿಂಕ್ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತಮಿಳುನಾಡು, ಕೇರಳದಲ್ಲಿರೋ ಶಂಕಿತ ಉಗ್ರರ ನಂಟಿನ ಬಗ್ಗೆ ಪೊಲೀಸರು ಆಳವಾದ ತನಿಖೆಗಿಳಿದಿದ್ದಾರೆ. ಈ ಹಿಂದಿನ ಗೋಡೆ ಬರಹ, ಶಿವಮೊಗ್ಗದಲ್ಲಿನ ಗಲಾಟೆಯೂ ಸ್ಫೋಟದ ಸುತ್ತಾ ಗಿರಕಿ ಹಾಕ್ತಿದೆ. ಈ ನಡುವೆ ಪ್ರಕರಣ ಸಂಬಂಧ ಬೆಂಗಳೂರಲ್ಲೂ ರೇಡ್ ನಡೆಸಿರೋದು, ಶಾರೀಕ್ ರಾಜಧಾನಿ ನಂಟಿನ ಬಗ್ಗೆಯೂ ಶಂಕೆ ಮೂಡಿದೆ.
ಮಂಗಳೂರು ಸ್ಫೋಟದ ತನಿಖೆ ಎನ್ಐಎಗೆ ಹಸ್ತಾಂತರ..
UAPA ಕಾಯ್ದೆಯ ಅನ್ವಯ ತನಿಖೆಗೆ ಸರ್ಕಾರದ ಶಿಫಾರಸು..
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ನ ತನಿಖೆಯಲ್ಲಿ ಸ್ಫೋಟಕ ಸುದ್ದಿಗಳು ಬಯಲಾಗ್ತಿವೆ. ಈ ಸ್ಫೋಟದ ಹಿಂದೆ ಉಗ್ರರ ಕೈವಾಡದ ಶಂಕೆ ಮತ್ತಷ್ಟು ಬಲವಾಗ್ತಿದೆ. ಬಾಂಬ್ನಂತೆ ಬದಲಾದ ಕುಕ್ಕರ್ ಬ್ಲಾಸ್ಟ್ ಆಗಿ 5 ದಿನಗಳ ಬಳಿಕ ಹೊಸ ಉಗ್ರ ಸಂಘಟನೆಯೊಂದು ಪ್ರತ್ಯಕ್ಷವಾಗಿದೆ. ನವೆಂಬರ್ 19ರ ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ನಾವೇ ಅಂತಾ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಅನ್ನೋ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ಪತ್ರ ರಿಲೀಸ್ ಮಾಡಿರೋ ಐಆರ್ಸಿ ಡಾರ್ಕ್ ವೆಬ್ ಮೂಲಕ ಎಚ್ಚರಿಕೆಯನ್ನೂ ರವಾನಿಸಿದೆ. ಈ ಪತ್ರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವ್ರಿಗೂ ಬೆದರಿಕೆ ಹಾಕಲಾಗಿದೆ. ಈ ಎಲ್ಲಾ ಬೆಳವಣಿಗೆಗೆಳ ನಡುವೆ ಪ್ರಕರಣದ ತನಿಖೆಯನ್ನ ರಾಜ್ಯ ಸರ್ಕಾರ ಎನ್ಐಎಗೆ ಹಸ್ತಾಂತರ ಮಾಡಿದೆ.
ಎನ್ಐಎಗೆ ಬ್ಲಾಸ್ಟ್ ತನಿಖೆ ಹಸ್ತಾಂತರ!
ಮಂಗಳೂರು, ಕಂಕನಾಡಿ ಸಮೀಪ, ನವೆಂಬರ್ 19ರಂದು ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIAಗೆ ರಾಜ್ಯ ಸರ್ಕಾರ ವರ್ಗಾಯಿಸಿದೆ. ಪ್ರಾಥಮಿಕ ತನಿಖೆಯಲ್ಲಿ, ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. UAPA ಕಾಯ್ದೆಯ ಅನ್ವಯ ತನಿಖೆಯನ್ನು ನಡೆಸಲು, ಶಿಫಾರಸು ಮಾಡಲಾಗಿದೆ. ಹೀಗೆ ಎನ್ಐಎಗೆ ವರ್ಗಾವಣೆ ಮಾಡಿರೋ ಬಗ್ಗೆ ಗೃಹ ಇಲಾಖೆಯಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ.
ಒಟ್ಟಿನಲ್ಲಿ ಮಂಗಳೂರು ಬ್ಲಾಸ್ಟ್ ಕೇಸ್ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ತಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಹಿಂದಿರೋ ವ್ಯಕ್ತಿ ಅಥವಾ ಸಂಘಟನೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆಯ ಜಾಡು ಸಾಗಿದೆ. ಎನ್ಐಎಗೆ ಹಸ್ತಾಂತರವಾಗಿರೋ ಕಾರಣ ಇನ್ನಷ್ಟು ವಿವಿಧ ಆಯಾಮಗಳಲ್ಲಿ, ಸಮಗ್ರದ ರೂಪದಲ್ಲಿ ತನಿಖೆ ಮುಂದುವರಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post