ಮಂಗಳೂರು: ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಬಳಿಕ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿದ್ದರು.
ಇದನ್ನು ಓದಿ: ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್.. ಮೈಸೂರಲ್ಲಿ ಕೂಂಬಿಂಗ್ ಮಾಡಲು ಪ್ರತಾಪ್ ಸಿಂಹ ಆಗ್ರಹ
ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಬಂದು ವಾರ ಕಳೆದ ಬಳಿಕ ಘಟನಾ ಸ್ಥಳ ನಾಗುರಿ ಬಳಿ ಸುನೀಲ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಗೃಹಸಚಿವ ಆರಗ ಜ್ಞಾನೇಂದ್ರರವರು ಭೇಟಿ ಕೊಟ್ಟಿದ್ದರು. ಆ ಸಂದರ್ಭದಲ್ಲಿಯೂ ಸಚಿವ ಸುನೀಲ್ ಕುಮಾರ್ ಬಂದಿರಲಿಲ್ಲ. ಇದೀಗ ಸಚಿವ ಸುನೀಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಸಚಿವ ಸುನೀಲ್ ಕುಮಾರ್.. ಬಾಂಬ್ ಸ್ಫೋಟದ ಘಟನೆಯನ್ನ ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಪಿಎಫ್ಐ ನಿಷೇಧದ ಬಳಿಕ ಇಂಥ ಘಟನೆಗೆ ಸರ್ಕಾರ ಕಡಿವಾಣ ಹಾಕಿದೆ. ಸಂಚುಗಳನ್ನ ವಿಫಲಗೊಳಿಸೋ ಕೆಲಸ ಸರ್ಕಾರ ಮಾಡುತ್ತಿದೆ. ಪಿಎಫ್ಐ ನಿಷೇಧ ಇದರ ಒಂದು ಭಾಗ, ಸರ್ಕಾರ ಮೃದು ಧೋರಣೆ ತಾಳಿಲ್ಲ. ಈ ಘಟನೆಯನ್ನ ಇಡೀ ಸಮಾಜ ನಿಂತು ಎದುರಿಸಬೇಕಿದೆ ಎಂದರು.
ಇದನ್ನು ಓದಿ: ತುಂಗಾನದಿ ಟ್ರಯಲ್ ಬ್ಲಾಸ್ಟ್ಗೂ ಕುಕ್ಕರ್ ಸ್ಫೋಟಕ್ಕೂ ಲಿಂಕ್ ಇದೆ -ಆರಗ ಜ್ಞಾನೇಂದ್ರ
ಹಿಂದೂ ಸಮಾಜ ಟಾರ್ಗೆಟ್ ಮಾಡುವ ಅವರ ಕೆಲಸ ವಿಫಲವಾಗಿದೆ. ಇಂತಹ ಮಾನಸಿಕತೆ ದೂರ ಆಗಬೇಕಿದೆ. ದೇಶದ ಯಾವುದೇ ಭಾಗದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಬಾರದು. ಈ ಘಟನೆಯನ್ನ ಎಲ್ಲರೂ ಖಂಡಿಸಿ ಸಹಕಾರ ಕೊಡೋರ ಬಗ್ಗೆ ಎಚ್ಚರ ವಹಿಸಬೇಕು. ನೆಟ್ಟಾರು ಘಟನೆ ಎಸ್ಡಿಪಿಐ ಉಪಟಳ ಎಲ್ಲವನ್ನೂ ಜನ ವಿರೋಧಿಸಿದ್ದಾರೆ. ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post