ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ದೆಹಲಿಯ ಡಿಸಿಎಂ ಮನೀಷ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.
ಇದರಲ್ಲಿ ಸಂಸದ ಮನೋಜ್ ತಿವಾರಿ ಕೈವಾಡ ಇದೆ. ಈಗಾಗಲೇ ತಿವಾರಿ ಬೆದರಿಕೆ ಹಾಕಿದ್ದಾರೆ. ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಎಲೆಕ್ಷನ್ನಲ್ಲಿ ಬಿಜೆಪಿ ಸೋಲುತ್ತೆ ಎಂಬ ಆತಂಕ ಶುರುವಾಗಿದೆ. ಹೀಗಾಗಿ ಸಿಎಂ ಕೇಜ್ರಿವಾಲ್ರನ್ನ ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸಿದೆ. ಇದರಲ್ಲಿ ಸಂಸದ ಮನೋಜ್ ತಿವಾರಿ ಕೈವಾಡ ಇರೋದು ಕಾಣುತ್ತಿದೆ. ಇಂತಹ ಕ್ಷುಲ್ಲಕ ರಾಜಕೀಯಕ್ಕೆ ನಾವು ಹೆದರುವುದಿಲ್ಲ ಎಂದು ಡಿಸಿಎಂ ಸಿಸೋಡಿಯಾ ಗುಡುಗಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಎಫ್ಐಆರ್ ಕೂಡ ದಾಖಲಿಸುತ್ತೇವೆ. ಸಿಎಂ ಕೇಜ್ರಿವಾಲ್ ಸುರಕ್ಷತೆ ಬಗ್ಗೆ ನಮಗೆ ಆತಂಕ ಇದೆ. ಬಿಜೆಪಿಯ ಗೂಂಡಾಗಿರಿ ರಾಜಕೀಯಕ್ಕೆ ಸದ್ಯದಲ್ಲೇ ಜನರು ಉತ್ತರ ನೀಡಲಿದ್ದಾರೆ ಎಂದರು.
ತಿರುಗೇಟು ನೀಡಿದ ಸಂಸದ ಮನೋಜ್ ತಿವಾರಿ
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿಕೆಗೆ ಸಂಸದ ಮನೋಜ್ ತಿವಾರಿ ತಿರುಗೇಟು ನೀಡಿದ್ದಾರೆ. ಆಪ್ ಪಕ್ಷದಲ್ಲಿ ಶಾಸಕರಿಗೆ ಜನರೇ ನೇರವಾಗಿ ಹೊಡೆದಿದ್ದಾರೆ. ಅಲ್ಲದೇ ಇವತ್ತು ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ಇದೆಲ್ಲ ಆಪ್ ಪಕ್ಷದಿಂದ ಮರ್ಡರ್ ಸ್ಕ್ರಿಪ್ಟ್ , ಹತ್ಯೆಯ ಬೆದರಿಕೆಗಳು ಹಳೆಯದು. ಆಪ್ ಯಾವಾಗಲೂ ಅದೇ ಹಳೆಯ ಆರೋಪ ಮಾಡಿಕೊಂಡು ಬರುತ್ತಿದೆ ಎಂದು ಸಂಸದ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post