‘ಕಾಲೇಜ್ಗೆ ಹೋಗ್ತೀವಿ’ ಎಂದು ಮನೆಯಿಂದ ಬರ್ತಿದ್ದ ವಿದ್ಯಾರ್ಥಿಗಳು ಕ್ಲಾಸ್ಗೆ ಬಂಕ್ ಹಾಕ್ತಿದ್ರು. ‘ಕ್ಲಾಸ್ಗೆ ಚಕ್ಕರ್, ಪಾರ್ಕ್ಗೆ ಹಾಜರ್’ ಎಂಬ ಖಯಾಲಿ ಅವರಲ್ಲಿ ಶುರುವಾಗಿತ್ತು. ಒಂದಷ್ಟು ದಿನಗಳ ಕಾಲ ವಿದ್ಯಾರ್ಥಿಗಳ ನವರಂಗಿ ಆಟಗಳನ್ನ ನೋಡಿದ್ದ ಶಿಕ್ಷಕರ ಸಹನೆಯ ಕಟ್ಟೆ ಇಂದು ಅಕ್ಷರಶಃ ಒಡೆದು ಹೋಗಿತ್ತು..
ಮಾತು ಕೇಳದ ಕ್ವಾಟ್ಲೆ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ, ಹೇಳಿ ರೋಸಿ ಹೋಗಿದ್ದ ಶಿಕ್ಷಕರು ಇಂದು ಫೀಲ್ಡಿಗೆ ಇಳಿದಿದ್ದರು. ಮಕ್ಕಳಿಗೆ ಒಂದೊಳ್ಳೆ ಪಾಠ ಮಾಡಬೇಕು ಅಂದ್ಕೊಂಡು ರಾತ್ರಿಯೆಲ್ಲ ಓದ್ಕೊಂಡು ಒಂದಷ್ಟು ವಿಚಾರಗಳನ್ನ ತಿಳ್ಕೊಂಡು ಬೆಳಗ್ಗೆ ಕಾಲೇಜಿಗೆ ಬಂದಿದ್ದ ಶಿಕ್ಷಕರಿಗೆ ಶಾಕ್ ಕಾದಿತ್ತು. ಕಾರಣ, ತರಗತಿಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ, ಬದಲಾಗಿ ಬೆಂಚ್ಗಳು ಮಾತ್ರ ಇದ್ದವು. ಇಷ್ಟು ದಿನ ಬೆರಳೆಣಿಕೆಯ ವಿದ್ಯಾರ್ಥಿಗಳ ಜೊತೆಗೆ ಬೆಂಚ್ಗಳಿಗೆ ಪಾಠ ಮಾಡಿದ್ದ ಶಿಕ್ಷಕರ ತಾಳ್ಮೆ ಇದು ಮುರಿದು ಬಿದ್ದಿತ್ತು.
ಅದಕ್ಕೆ ಚಕ್ಕರ್ ಹಾಕೋ ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಬೇಕು ಎಂದು, ಬಳ್ಳಾರಿಯ ಮುನ್ಸಿಪಾಲ್ ಕಾಲೇಜಿನ ಶಿಕ್ಷಕರು, ಅಲ್ಲಿನ ರಾಜಕುಮಾರ ಪಾರ್ಕ್ಗೆ ಬಂದಿದ್ದರು. ಪಾರ್ಕ್ಗೆ ತಮ್ಮ ಗುರುಗಳು ಬರ್ತಿರೋದನ್ನ ಕಂಡ ವಿದ್ಯಾರ್ಥಿಗಳು ಎದ್ನೋ ಬಿದ್ನೋ ಅಂತಾ ಕಾಲ್ಕಿತ್ತಿರು.
ಆದರೂ ಕೆಲವು ವಿದ್ಯಾರ್ಥಿಗಳು ಶಿಕ್ಷರ ಜೊತೆ ಸಿಕ್ಕಿಬಿದ್ದಿದ್ದಾರೆ. ಶಿಕ್ಷಕರನ್ನ ನೋಡಿದ ಕೂಡಲೇ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ. ಇಲ್ಲಿಗೆ ಯಾಕೆ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದ್ರೆ ಗೆಳೆಯನ ಹುಟ್ಟುಹಬ್ಬ ಸರ್. ಹಾಗಾಗಿ ಪಾರ್ಕ್ಗೆ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಉತ್ತರ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post