ಬೆಂಗಳೂರು: ಹಸೆಮಣೆ ಏರಲು ಸಜ್ಜಾಗಿದ್ದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡಗೆ ಮೊದಲ ಹೆಜ್ಜೆಯಲ್ಲೆ ವಿಘ್ನ ಉಂಟಾಗಿದೆ. ವೈಷ್ಣವಿ ಕೈಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹೀಗಾಗಿ ಮದುವೆ ಮುರಿದುಕೊಂಡಿದ್ದೇವೆ ಎಂದು ನಟಿ ವೈಷ್ಣವಿ ಗೌಡ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ವೈಷ್ಣವಿ ಗೌಡ ಮದುವೆ ನಿಶ್ಚಯ ವಿವಾದ -ಮದುವೆ ಕ್ಯಾನ್ಸಲ್ ಎಂದ ಅಗ್ನಿಸಾಕ್ಷಿ ನಟಿ..
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ವೈಷ್ಣವಿ ಗೌಡ ಅವರ ತಂದೆ ರವಿಕುಮಾರ್, ಅದು ಎಂಗೇಜ್ಮೆಂಟ್ ಅಲ್ಲ. ಬೊಟ್ಟು ಇಡೋ ಶಾಸ್ತ್ರ ಮಾಡಿದ್ದೀವಿ ಅಷ್ಟೇ. ಜನವರಿ ಫೆಬ್ರವರಿ ಯಲ್ಲಿ ಎಂಗೇಜ್ಮೆಂಟ್ ಮಾಡೋಕೆ ಪ್ಲ್ಯಾನ್ ಮಾಡಿಕೊಂಡಿದ್ದೇವು. ಮಾರ್ಚ್ನಲ್ಲಿ ಮದುವೆ ಮಾಡೋಣ ಅಂದ್ಕೊಂಡಿದ್ವಿ. ಆದರೆ ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಚಾಕೊಲೇಟ್ ಬಾಯ್ ಸಿನಿಮಾದಿಂದ ವಿದ್ಯಾಭರಣ್ ಪರಿಚಯ ಆಗಿದ್ದ. ವಿದ್ಯಾಭರಣ್ ಹೀರೋ, ನಮ್ಮ ಮಗಳು ವೈಷ್ಣವಿ ಹೀರೋಯಿನ್ ಆಗಿದ್ದರು. ಆದರೆ ಸಿನಿಮಾ ಸ್ಟಾಪ್ ಆಯ್ತು, ರೀಸನ್ ಗೊತ್ತಿಲ್ಲ. ಅಲ್ಲಿಂದ ಅವರ ಕಾಂಟ್ಯಾಕ್ಟ್ ಮಿಸ್ ಆಗಿತ್ತು. ನಮ್ಮನೆ ಗೃಹ ಪ್ರವೇಶಕ್ಕೆ ವಿದ್ಯಾಭರಣ್ ಕುಟುಂಬಸ್ಥರು ಬಂದಿದ್ದರು. ಅಲ್ಲಿಂದ ಎರಡು ಕುಟುಂಬದಲ್ಲಿ ಮತ್ತೆ ಸ್ನೇಹ ಸಂಬಂಧ ಶುರುವಾಯಿತು. ಎರಡು ಕುಟುಂಬಸ್ಥರು ಒಪ್ಪಿಕೊಂಡ ಮೇಲೆ ಬೊಟ್ಟು ಇಡೋ ಶಾಸ್ತ್ರ ಮಾಡೋಣ ಎಂದು ನಿರ್ಧರಿಸಿ ಮಾಡಿದ್ದೇವು ಎಂದು ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post