ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡಗೆ ಅಗ್ನಿಪರೀಕ್ಷೆಯೊಂದು ಎದುರಾಗಿದೆ. ವಿವಾಹ ಬಂಧನಕ್ಕೆ ಕಾಲಿಡಲು ಸಜ್ಜಾಗಿದ್ದ ವೈಷ್ಣವಿಗೆ ಮೊದಲ ಹೆಜ್ಜೆಯಲ್ಲೆ ವಿಘ್ನ ಉಂಟಾಗಿದೆ. ವೈಷ್ಣವಿ ಕೈಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದಾರೆ.
ವೈಷ್ಣವಿ ಗೌಡ.. ಕಿರುತೆರೆಯ ಡಿಂಪಲ್ ಕ್ವೀನ್. ‘ಅಗ್ನಿಸಾಕ್ಷಿ’ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಕನ್ನಡಿಗರ ಮನೆಗಿದ್ದ ಈಕೆ ಬಿಗ್ಬಾಸ್ ಮನೆಯಲ್ಲೂ ಮೋಡಿಮಾಡಿದ್ರು. ಮೆಲುದನಿಯ ಮಾಟ, ಮುಗಳ್ನಗೆಯ ನೋಟದಿಂದ ಬಿಗ್ಬಾಸ್ ಮನೆಯಲ್ಲಿ ಮಿಂಚಿದ್ದ ಈ ಡಿಂಪಲ್ ಬೆಡಗಿ ತಮ್ಮ ಮೃದು ಸ್ವಾಭಾವದಿಂದಲೇ ಎಲ್ಲರಿಗೂ ಅಚ್ಚುಮೆಚ್ಚಾಗಿದ್ರು.
ಎರಡು ದಿನಗಳ ಹಿಂದಷ್ಟೇ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿದ್ದ ಪೊಟೋ ಒಂದನ್ನ ಕಂಡು ವೈಷ್ಣವಿ ಗೌಡ ಅಭಿಮಾನಿಗಳು ಅಚ್ಚರಿಪಟ್ಟಿದ್ರು. ಹೇಳದೇ ಕೇಳದೆ ನಮ್ ಡ್ರೀಮ್ ಗರ್ಲ್ ಕಮಿಟ್ ಆಗ್ಬಿಟ್ರಲ್ಲ ಅಂತ ಕೆಲ ತುಂಡ್ ಹೈಕ್ಳು ಬೇಸರ ಸಹ ಪಟ್ಟಿದ್ರು. ವೈಷ್ಣವಿ ಗೌಡರ ಎಂಗೇಜ್ಮೆಂಟ್ ಪೋಟೊ ಅಭಿಮಾನಿಗಳಿಗೆ ಸರ್ಪೈಸ್ ನೀಡಿತ್ತು. ಇದಕ್ಕೆ ಪ್ರತಿಕ್ರಯಿಸಿದ್ದ ವೈಷ್ಣವಿ. ಮಾತುಕತೆ ನಡೆದಿರೋದು ನಿಜ, ಆದ್ರೆ ಇದು ಎಂಗೇಜ್ಮೆಂಟ್ ಆಗಿಲ್ಲ ಅಂತ ಸ್ಪಷ್ಟನೇ ನೀಡಿದ್ರು.
ಎರಡೇ ದಿನಕ್ಕೆ ವೈಷ್ಣವಿ ವಿವಾಹಕ್ಕೆ ವಿಘ್ನ..
ವಿದ್ಯಾಭರಣ್ ಜೊತೆ ವೈಷ್ಣವಿ ವೈವಾಹಿಕ ಜಿವನಕ್ಕೆ ಕಾಲಿಡ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿ ಎರಡು ದಿನ ಕಳೆಯುವಷ್ಟರಲ್ಲಿ ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿಯೊಂದು ಈ ಸಂಬಂಧಕ್ಕೆ ಹುಳಿಹಿಂಡಿದೆ. ವಿದ್ಯಾಭರಣ್ ಇಬ್ಬರು ಹೆಣ್ಣು ಮಕ್ಕಳಿಗೆ ಮೊಸಮಾಡಿದ್ದಾರೆ ಅಂತ ಹೇಳಲಾಗ್ತಿರೋ ಒಂದು ಆಡಿಯೋ ಕ್ಲಿಪ್ ಇದೀಗ ವೈಷ್ಣವಿ ಮದುವೆ ಮಾತುಕತೆಗೆ ವಿಘ್ನ ತಂದೊಡ್ಡಿದೆ.
ಉದ್ಯಮಿ ವಿದ್ಯಾಭರಣ್ ಮೇಲೆ ನಟಿಯಿಂದ ಗಂಭೀರ ಆರೋಪ..
ವೈಷ್ಣವಿ ಕೈಹಿಡಿಯಲು ಮುಂದಾಗಿದ್ದ ನಟ ವಿದ್ಯಾಭರಣ್ ಮೇಲೆ ಗಂಭೀರ ಆರೋಪ ಒಂದು ಕೇಳಿ ಬಂದಿದೆ.. ವಿದ್ಯಾಭರಣ್ ಕೆಲ ಹುಡುಗಿಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗ್ತಿರೋ ಆಡಿಯೋ ಒಂದು ಸೊಶಿಯಲ್ ಮಿಡಿಯಾದಲ್ಲಿ ಹರಿದಾಡ್ತಿದೆ.. ನಿಶ್ಚಿತಾರ್ಥದ ಪೊಟೋ ವೈರಲ್ ಅಗ್ತಿದ್ದಂತೆ ವಿದ್ಯಾಭರಣ್ ಮೇಲೆ ಓರ್ವ ನಟಿಯಿಂದ ಆಡಿಯೋ ಆರೋಪ ಮಾಡಲಾಗಿದೆ. ಸದ್ಯ ಈ ವಿವಾದ ಅಗ್ನಿಸಾಕ್ಷಿಯ ಬೆಡಗಿಗೆ ಅಗ್ನಿ ಪರೀಕ್ಷೆಯೊಂದನ್ನ ತಂದೊಡಿದ್ದು ಮದುವೆ ಮಾತುಕತೆ ಬಹುತೇಕ ಮುರಿದು ಬೀಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ವಿಡಿಯೋ ವೈರಲ್ ಅಗ್ತಿದ್ದಂತೆ ನಟ ವಿದ್ಯಾಭರಣ್ ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ, ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆ ನಡೆದಿತ್ತು. ಆದ್ರೆ ಈ ಪೋಟೋ ವೈರಲ್ ಹೇಗಾಯ್ತೋ ಗೊತ್ತಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಆಡಿಯೋ ಬಗ್ಗೆ ಮಾತನಾಡಿದ ವಿದ್ಯಾಭರಣ್ ಇದು ಸುಳ್ಳು ಆರೋಪ. ಈ ಬಗ್ಗೆ ಕಮಿಷನರ್ ಬಳಿ ಕಂಪ್ಲೇಟ್ ನೀಡ್ತೀನಿ ಅಂತ ತಿಳಿಸಿದ್ರು. ಇದು ಸುಳ್ಳು ಆರೋಪ. ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಅಗಿದೆ ಅನ್ನೋದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನ ಹಾಳು ಮಾಡಲು ಫ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನ ಮಾಡಬಹುದಿತ್ತು. ನನ್ನ ಮೊದರ ಫಿಲ್ಮ್ ಬಂದಾಗ್ಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಅಕೆ ಆರೋಪ ಮಾಡುತ್ತಿದ್ದಾಳೆ. ನಾಳೆ ಕಮೀಪನರ್ ಗೆ ದೂರು ನೀಡುತ್ತೀನಿ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡೋ ಬದಲು ಅಕೆಯೇ ಕಂಪ್ಲೆಂಟ್ ಕೊಡ ಬಹುದಿತ್ತು. ಇದನ್ನ ನಮ್ಮ ಏಳಿಗೆಯನ್ನ ಸಹಿಸಲು ಸಾಧ್ಯವಾಗದೇ ಇರೋ ಹಿತ ಶತ್ರುಗಳು ಮಾಡ್ತಿದ್ದಾರೆ ಎಂದಿದ್ದಾರೆ.
ಒಟ್ಟಿನಲ್ಲಿ ಎರಡೇ ದಿನಕ್ಕೆ ಡಿಂಪಲ್ ಕ್ವೀನ್ ಮದುವೆ ಮಾತುಕತೆಯಲ್ಲಿ ಬಿರುಕು ಮೂಡಿರೋದು ವಿಪರ್ಯಾಸದ ಸಂಗತಿ.. ಈ ಅಗ್ನಿಪರೀಕ್ಷೆಯಿಂದ ಅಗ್ನಿಸಾಕ್ಷಿಯ ಬೆಡಗಿ ಆದಷ್ಟು ಬೇಗ ಪಾರಾಗಲಿ ಅನ್ನೋದೆ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post