ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ನಟಿ ಅದಿತಿ ಪ್ರಭುದೇವ. ತಮ್ಮ ನಗುವಿನಿಂದಲೇ ಪಡ್ಡೆ ಹುಡಗರನ್ನ ಸೆಳೆದ ಚೆಲುವೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಬ್ಯೂಟಿ ಅದಿತಿ ನಾಳೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಿವಾಹ ಸಮಾರಂಭಕ್ಕಾಗಿ ಅದಿತಿ ಪ್ರಭುದೇವ ಮದುವೆಯ ಹಳದಿ ಶಾಸ್ತ್ರವನ್ನ ಮಾಡಿಕೊಂಡಿದ್ದಾರೆ.
ವೈಟ್ ಆ್ಯಂಡ್ ವೈಟ್ ಸ್ಯಾರಿಯಲ್ಲಿ ಹಳದಿ ಶಾಸ್ತ್ರಕ್ಕೆ ಅದಿತಿ ಬ್ಯೂಟಿಫುಲ್ ಆಗಿ ಮಿಂಚುತ್ತಿದ್ದಾರೆ. ಅರಿಶಿಣ ನೀರಿನಲ್ಲಿ ಅದಿತಿ ಮಿಂದೆದ್ದಿದ್ದು, ನವ ವಧುವಾಗಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.
ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರೋ ಯಶಸ್ವಿ ಜೊತೆ ಅದಿತಿ ಪ್ರಭುದೇವ ಏಳು ಹೆಜ್ಜೆ ಹಾಕಲಿದ್ದಾರೆ. ಈ ವಿವಾಹ ಸಮಾರಂಭವೂ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯಲಿದೆ. ಇದಕ್ಕೆ ಅದ್ದೂರಿ ತಯಾರಿ ಕೂಡ ನಡೆಯುತ್ತಿದ್ದು, ಬಣ್ಣ ಬಣ್ಣದ ಲೈಟ್ಸ್ ಮತ್ತು ಹೂವುಗಳಿಂದ ಪ್ಯಾಲೇಸ್ ಗ್ರೌಂಡ್ ಶೃಂಗಾರಗೊಳ್ಳುತ್ತಿದೆ.
ಅದಿತಿ ಪ್ರಭುದೇವ ಕುಟುಂಬದ ಮಾಹಿತಿ ಪ್ರಕಾರ ನವೆಂಬರ್ 27 ಭಾನುವಾರದಂದು ಪ್ಯಾಲೇಸ್ ಗ್ರೌಂಡ್ನಲ್ಲಿ ರಿಸೆಪ್ಷನ್ ನಡೆಯಲಿದೆ. ನವೆಂಬರ್ 28 ಸೋಮವಾರದಂದು ಮದುವೆ ಮುಹೂರ್ತ ನೆರವೇರಲಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post