ಬೆಂಗಳೂರು: ಅನೈತಿಕ ಸಂಬಂಧದ ಮಹಿಳೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ವೃದ್ಧರೊಬ್ಬರು ನಿಧನ ಹೊಂದಿದ್ದಾರೆ.
ಜೆ.ಪಿ.ನಗರದ ಪುಟ್ಟೇನಹಳ್ಳಿಯ ನಿವಾಸಿ ಬಾಲಸುಬ್ರಮಣಿಯನ್ (67) ಸಾವನ್ನಪ್ಪಿದ ವೃದ್ಧ. ಬಾಲಸುಬ್ರಮಣಿಯನ್ ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ನವೆಂಬರ್ 16 ರಂದು ಮೊಮ್ಮಗನನ್ನ ಶಾಲೆಗೆ ಬಿಟ್ಟು ಬಳಿಕ ಮಹಿಳೆಯ ಮನೆಗೆ ತೆರಳಿದ್ದಾರೆ. ಈ ವೇಳೆ ತಮ್ಮ ಮನೆಗೆ ಫೋನ್ ಮಾಡಿ ಸ್ವಲ್ಪ ಕೆಲಸ ಇದೆ. ಮನೆಗೆ ತಡವಾಗಿ ಬರುತ್ತೇನೆ ಎಂದು ಸುಬ್ರಮಣಿಯನ್ ಹೇಳಿದ್ದರು.
ಬಾಲಸುಬ್ರಮಣಿಯನ್ ಕಾಣೆಯಾಗಿದ್ದಾರೆ ಅಂತ ದೂರು..
ಆದರೆ, ಬೆಳಗ್ಗೆ ಆದ್ರೂ ಬಾಲಸುಬ್ರಮಣಿಯನ್ ತಮ್ಮ ಮನೆಗೆ ವಾಪಸು ಆಗಿರಲಿಲ್ಲ. ಹೀಗಾಗಿ ಮನೆಯವ್ರು ಗಾಬರಿಗೊಂಡು ನವೆಂಬರ್ 17 ರಂದು ಪೊಲೀಸ್ ಠಾಣೆಗೆ ಬಾಲಸುಬ್ರಮಣಿಯನ್ ಕಾಣೆಯಾಗಿದ್ದಾರೆ ಅಂತ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ವಿಚಾರಣೆ ವೇಳೆ ಶಂಕೆಯ ಮೇರೆಗೆ ಮಹಿಳೆಯನ್ನ ವಿಚಾರಣೆ ನಡೆಸಿದಾಗ ನಡೆದ ಸಂಗತಿಯೆಲ್ಲ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.
ಪತಿಗೆ ವಿಷಯ ತಿಳಿಸಿದ ಪತ್ನಿ..
ಮಹಿಳೆ ಜೊತೆ ಬಾಲಸುಬ್ರಮಣಿಯನ್ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಹೃದಯಾಘಾತ ಸಂಭವಿಸಿದೆ. ಇದರಿಂದ ಅಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಮಹಿಳೆಗೆ ಭಯ ಶುರುವಾಗಿದೆ. ಈ ಸಂಗತಿಯನ್ನ ಮಹಿಳೆ ತಕ್ಷಣ ತನ್ನ ಪತಿಗೆ ತಿಳಿಸಿದ್ದಾಳೆ.
ಮೃತದೇಹ ಇಲ್ಲೇ ಇದ್ರೆ, ಕೊಲೆ ಅಂತ ಕೇಸ್ಗೆ ಭಯ..
ಬಾಲಸುಬ್ರಮಣಿಯನ್ ದೇಹ ಇಲ್ಲೇ ಇದ್ರೆ ಕೊಲೆ ಅಂತ ಕೇಸ್ ಆಗುತ್ತದೆಂದು ಮೃತದೇಹವನ್ನ ಮಹಿಳೆ, ಪತಿ ಹಾಗೂ ಇನ್ನೊಬ್ಬ ಸಂಬಂಧಿ ಸೇರಿ ಬೆಡ್ಶೀಟ್ನಲ್ಲಿ ಸುತ್ತಿ ಕಟ್ಟಿದ್ದಾರೆ. ನಂತರ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತುಂಬಿದ್ದಾರೆ. ಬಳಿಕ ಮೃತದೇಹವನ್ನ ಜೆ.ಪಿ.ನಗರದ ನಿರ್ಜನ ಪ್ರದೇಶದ ರಸ್ತೆಬದಿಯಲ್ಲಿ ಎಸೆದು ಬಂದಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಈ ಬಗ್ಗೆ ಸಾಕ್ಷಿನಾಶ ಕೇಸ್ ಅಡಿ ಮಹಿಳೆ ಮತ್ತು ಪತಿ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮಹಿಳೆ ಮತ್ತು ಪತಿ ಜಾಮೀನು ಪಡೆದು ಹೊರ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post