ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಗಜಾನನ ಕಂಪನಿಯ ಬಸ್ವೊಂದು ನೀರಲ್ಲಿ ಮುಳುಗಿದ ಘಟನೆ ಸಿಗಂದೂರಿನ ಹೊಳೆಬಾಗಿಲು ಬಳಿ ನಡೆದಿದೆ.
ಸಿಗಂದೂರು ಕಡೆಗೆ ಹೋಗಲು ಬಸ್ ಅನ್ನು ಲಾಂಚ್ಗೆ ರಿವರ್ಸ್ನಲ್ಲಿ ಹತ್ತಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಈ ಘಟನೆ ನಡೆದಿದೆ. ಈ ಬಸ್ಸಿನಲ್ಲಿ ಸುಮಾರು 3೦ ಜನ ಪ್ರಯಾಣಿಸುತ್ತಿದ್ದರು. ತಕ್ಷಣವೇ ಸೇತುವೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದ ದಿಲೀಪ್ ಬಿಲ್ಡ್ ಕಾನ್ ಕಂಪನಿಗೆ ಸೇರಿದ ಕ್ರೇನ್ ಬಳಸಿ ಸ್ಥಳೀಯರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಸದ್ಯ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post